ಬಾಲಾಸೋರ್ ರೈಲು ದುರಂತ ಮಾಸುವ ಮುನ್ನವೇ ಹಳಿ ತಪ್ಪಿದ ಮತ್ತೊಂದು ರೈಲು
ಒಡಿಶಾ: ಒಡಿಶಾದ ಬಾಲಾಸೋರ್ ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ 288 ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ರೈಲು ಅವಘಡ ಸಂಭವಿಸಿದೆ.
ಒಡಿಶಾದ ಬಾರ್ಗಡ್ ಜಿಲ್ಲೆಯಲ್ಲಿ ಸರಕು ಸಾಗಾಣಿಕಾ ರೈಲು ಹಳಿ ತಪ್ಪಿದ್ದು, ರೈಲಿನ ಐದು ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಾಗಿದೆ. ಈ ವರೆಗೂ ಯಾವುದೇ ಸಾವು-ನೋವು ವರದಿಯಾಗಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ರೈಲ್ವೇ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಒಡಿಶಾ ರೈಲ್ವೆ ದುರಂತ: 51 ಗಂಟೆಗಳ ಬಳಿಕ ಮೊದಲ ರೈಲು ಸಂಚಾರ – ಭಾವುಕರಾದ ಸಚಿವ ವೈಷ್ಣವ್
ಸುಣ್ಣದಕಲ್ಲು ಹೊತ್ತೊಯ್ಯುತ್ತಿದ್ದ ಸರಕು ರೈಲು ಶುಕ್ರವಾರ ಅಪಘಾತಕ್ಕೀಡಾದ ಸ್ಥಳದಿಂದ ಸುಮಾರು 500 ಕಿಮೀ ದೂರದಲ್ಲಿರುವ ಬರ್ಗಢ್ ಪ್ರದೇಶದಲ್ಲಿ ಹಳಿ ತಪ್ಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
3 ದಿನಗಳ ಹಿಂದಷ್ಟೇ ಇದೇ ಒಡಿಶಾದ ಬಾಲಾಸೋರ್ ನಲ್ಲಿ ಮೂರು ರೈಲುಗಳ ಅಪಘಾತವಾಗಿ 288 ಮಂದಿ ಸಾವಿಗೀಡಾಗಿ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮೊದಲು ರೈಲೊಂದು ಹಳಿ ತಪ್ಪಿ, ಬಳಿಕ ಅದಕ್ಕೆ ಗೂಡ್ಸ್ ರೈಲು ಮತ್ತು ಪ್ಯಾಸೆಂಜರ್ ರೈಲು ಢಿಕ್ಕಿಯಾಗಿ ಇತಿಹಾಸದ ಭೀಕರ ರೈಲು ದುರಂತ ಸಂಭವಿಸಿತ್ತು.