ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಪ್ಲಾಜಾ – ಜುಲೈ 1ರಿಂದಲೇ ಟೋಲ್ ಸಂಗ್ರಹ

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಪ್ಲಾಜಾ – ಜುಲೈ 1ರಿಂದಲೇ ಟೋಲ್ ಸಂಗ್ರಹ

ಬೆಂಗಳೂರು ಟು ಮೈಸೂರು ಎಕ್ಸ್ ಪ್ರೆಸ್ ವೇ ಇತ್ತೀಚೆಗೆ ಅಪಘಾತಗಳ ವಿಚಾರದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆ ಕೂಡ ಪರಿಶೀಲನೆ ನಡೆಸಿದ್ದು ಅಪಘಾತ ನಿಯಂತ್ರಣಕ್ಕೆ ಮುಂದಾಗಿದೆ. ಮೊದಲೇ ಟೋಲ್ ದುಬಾರಿ ಅಂತಾ ಸಿಟ್ಟಾಗಿದ್ದ ವಾಹನ ಸವಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಮತ್ತೊಂದು ಟೋಲ್ ಪ್ಲಾಜಾ​ ಆರಂಭಕ್ಕೆ ಸಜ್ಜಾಗಿದೆ.

ಇದನ್ನೂ ಓದಿ : 3 ಕಿ.ಮೀ ಸುರಂಗ.. 10 ಕಿ.ಮೀ ಫ್ಲೈ ಓವರ್ – ಶಿರಾಡಿ ಘಾಟ್ ನಲ್ಲಿ 30 ಕಿ.ಮೀ ಪರ್ಯಾಯ ಮಾರ್ಗ

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ (Bengaluru Mysuru Expressway) ಅಧಿಕ ಟೋಲ್ ಸಂಗ್ರಹಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿವೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯೆ ಈ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಗೇಟ್ (Toll Plaza)​ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜುಲೈ 1ರಿಂದ ಮಂಡ್ಯ (Mandya) ವ್ಯಾಪ್ತಿಯ ಟೋಲ್ ಸಂಗ್ರಹ ಆರಂಭವಾಗಲಿದೆ. ಮಂಡ್ಯ ಜಿಲ್ಲೆಯ 55-134 ಕಿಮೀ ವ್ಯಾಪ್ತಿಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾ ನಿರ್ಮಿಸಿದೆ. ಹಾಗಾದ್ರೆ, ಯಾವ-ಯಾವ ವಾಹನಗಳಿಗೆ ಎಷ್ಟೆಷ್ಟು ಹಣ ಎನ್ನುವ ಮಾಹಿತಿ ಇಲ್ಲಿದೆ.

ಏಕಮುಖ ಹಾಗೂ ದ್ವಿಮುಖ ಸಂಚಾರದ ಟೋಲ್ ದರ

ಕಾರು, ಜೀಪು, ವ್ಯಾನು – ಏಕಮುಖ 155 ರೂ, ದ್ವಿಮುಖ  235 ರೂ

ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – ಏಕಮುಖ 250ರೂ, ದ್ವಿಮುಖ 375 ರೂ

ಟ್ರಕ್/ಬಸ್ (ಎರಡು ಆಕ್ಸಲ್ ಗಳದ್ದು)- ಏಕಮುಖ 525 ರೂ, ದ್ವಿಮುಖ 790 ರೂ

ಮೂರು ಆಕ್ಸಲ್ ವಾಣಿಜ್ಯ ವಾಹನ – ಏಕಮುಖ 575 ರೂ. ದ್ವಿಮುಖ 860 ರೂ

ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್‌ಗಳದ್ದು) – ಏಕಮುಖ 825 ರೂ., ದ್ವಿಮುಖ 1,240 ರೂ

ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) 1,005 ರೂ., ದ್ವಿಮುಖ 1,510 ರೂ

suddiyaana