ಚಂದ್ರಯಾನ – 3 ಗೆ ಮತ್ತೊಂದು ಯಶಸ್ಸು – ಚಂದ್ರನ ಅಂತಿಮ ಕಕ್ಷೆ ಪ್ರವೇಶಿಸಿದ ನೌಕೆ

ಚಂದ್ರಯಾನ – 3 ಗೆ ಮತ್ತೊಂದು ಯಶಸ್ಸು – ಚಂದ್ರನ ಅಂತಿಮ ಕಕ್ಷೆ ಪ್ರವೇಶಿಸಿದ ನೌಕೆ

ಬೆಂಗಳೂರು: ಭಾರತದ ಕನಸಿನ ಚಂದ್ರಯಾನ – 3 ಹಂತ ಹಂತವಾಗಿ ಯಶಸ್ಸು ಪಡೆಯುತ್ತಿದೆ. ಇದೀಗ ಚಂದ್ರನ  153 ಕಿಮೀ x 163 ಕಿಮೀ ಕಕ್ಷೆಗೆ ಸೇರಿಸುವ ಕಾರ್ಯ ಯಶಸ್ವಿಯಾಗಿದ್ದು, ನೌಕೆಯಿಂದ ವಿಕ್ರಂ ಲ್ಯಾಂಡರ್ ಬೇರ್ಪಡಿಸಿ ಚಂದ್ರನ ವೃತ್ತಕಾರಾದ ಕಕ್ಷೆಗೆ ಸೇರಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇದನ್ನೂ ಓದಿ: ಶಿವನಿಗೆ ಕಣ್ಣು ಕೊಟ್ಟು ಭಕ್ತಿ ಮೆರೆದ ಬೇಡರ ಕಣ್ಣಪ್ಪನಂತೆ ನಾನು ತಲೆಯನ್ನೇ ಕೊಡುತ್ತೇನೆ – ದೇಗುಲದಲ್ಲಿ ತಲೆ ಕತ್ತರಿಸಿಕೊಂಡ ಶಿವಭಕ್ತ..!

ಚಂದ್ರಯಾನ – 3 ನೌಕೆಯು ಬುಧವಾರ ಚಂದ್ರನ ಐದನೇ ಹಾಗೂ ಕೊನೆಯ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ಈ ಮೂಲಕ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಿದೆ. ಪರಿಣತಿಯೊಂದಿಗೆ ನಡೆಸಿದ ನಿಖರವಾದ ಕುಶಲತೆ ಮಿಷನ್ ಟೈಮ್‌ಲೈನ್‌ನಲ್ಲಿ ಮುಂದಿನ ಕಾರ್ಯಾಚರಣೆಗೆ ಅಡಿಪಾಯ ಹಾಕಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ.

ಇದೀಗ ಲ್ಯಾಂಡರ್ ಮಾಡ್ಯೂಲ್‌ನಿಂದ ಪ್ರೊಪಲ್ಷನ್ ಮಾಡ್ಯೂಲ್ (ಉಡ್ಡಯನ ವಾಹನ) ಪ್ರತ್ಯೇಕಗೊಳ್ಳುವ ಹಂತಕ್ಕೆ ಬಂದಿದೆ. ಇದು ಆಗಸ್ಟ್ 17ರಂದು ನೆರವೇರುವ ಸಾಧ್ಯತೆಯಿದ್ದು, ಇನ್ನೊಂದು ಮೈಲಿಗಲ್ಲನ್ನು ಸಾಧಿಸಲಿದೆ.

ಚಂದ್ರಯಾನ-3 ಮಿಷನ್‌ನ ರಾಕೆಟ್ ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಉಡ್ಡಯನ ಕೇಂದ್ರದಿಂದ ಲಾಂಚ್ ಆಗಿತ್ತು. ಭೂಮಿಯ ಕಕ್ಷೆಯಿಂದ ಒಂದೊಂದೇ ಹಂತದಲ್ಲಿ ಚಂದ್ರಯಾನ-3 ನೌಕೆ ಚಂದ್ರನೆಡೆಗೆ ಪ್ರಯಾಣ ಬೆಳೆಸಿದೆ. ಆಗಸ್ಟ್ 17 ರಂದು ನೌಕೆ ಚಂದ್ರನ ಮೇಲೆ ಇಳಿಯುವ ಸಾಧ್ಯತೆಯಿದೆ.

suddiyaana