Xನಲ್ಲಿ ಮತ್ತೊಂದು ಸ್ಪೆಷಲ್ ಫೀಚರ್! – ಡೇಟಿಂಗ್‌ ಆ್ಯಪ್‌ ಆಗಲಿದೆಯಾ ಎಕ್ಸ್‌ ?

Xನಲ್ಲಿ ಮತ್ತೊಂದು ಸ್ಪೆಷಲ್ ಫೀಚರ್! – ಡೇಟಿಂಗ್‌ ಆ್ಯಪ್‌ ಆಗಲಿದೆಯಾ ಎಕ್ಸ್‌ ?

ಟೆಸ್ಲಾ ಸಿಇಒ ಎಲಾನ್ ಮಸ್ಕ್‌ ಅವರು ಎಕ್ಸ್‌ ಪ್ಲಾಟ್‌ಫಾರ್ಮ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಸಾಕಷ್ಟು ಬದಲಾವಣೆ ಮಾಡಿಕೊಂಡು ಬಂದಿದ್ದಾರೆ. ಕೆಲವು ತಿಂಗಳ ಹಿಂದೆ  ಎಕ್ಸ್‌ ಪ್ಲಾಟ್‌ಫಾರ್ಮ್ ಲೋಗೊವನ್ನು ಬದಲಾವಣೆ ಮಾಡಿದ್ದರು. ಬಳಿಕ ಹಿಂದಿದ್ದ ಟ್ವಿಟರ್‌ ಎನ್ನುವ ಹೆಸರು, ಹಲವು ಫೀಚರ್‌ಗಳ ವರೆಗೆ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಇದೀಗ ಮತ್ತೊಂದು ಎಕ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪಿಂಚಣಿ ಹಣಕ್ಕಾಗಿ 91 ವರ್ಷದ ದೊಡ್ಡಮ್ಮಳನ್ನೇ ಮದುವೆಯಾದ 23ರ ಯುವಕ!

ಎಲಾನ್‌ ಮಸ್ಕ್‌ ಅವರು ಎಕ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಬಳಕೆದಾರರನ್ನು ಹೆಚ್ಚಿಸುವ ಸಲುವಾಗಿ ಸಾಕಷ್ಟು ಮಾಡುತ್ತಲೇ ಬಂದಿದ್ದಾರೆ. ಇದೀಗ ಬಳಕೆದಾರರಿಗೆ ಎಲಾನ್‌ ಮಸ್ಕ್‌  ಡೇಟಿಂಗ್‌ ಫೀಚರ್‌ ಅನ್ನೂ ಪರಿಚಯಿಸಲಿದೆ ಎಂದು ಮೂಲಗಳು ಹೇಳುತ್ತಿವೆ. ಒಂದು ವೇಳೆ ಆ ಫೀಚರ್‌ ಪರಿಚಯಿಸಿದರೆ, ಬಳಕೆದಾರರು ತಮ್ಮ ಜೀವಸಂಗಾತಿಗಳನ್ನು ಹುಡುಕಿಕೊಳ್ಳುವುದಕ್ಕೂ ಎಕ್ಸ್‌ ಸಂಪರ್ಕ-ಸಂವಹನ ಮಾಧ್ಯಮವಾಗಲಿದೆ ಎನ್ನಲಾಗುತ್ತಿದೆ.

ಇತ್ತೀಚೆಗಷ್ಟೇ ಮಸ್ಕ್, ತಮ್ಮ ಪ್ಲಾಟ್‌ಫಾರ್ಮ್ ಎಕ್ಸ್‌ನ ಅಭಿವೃದ್ಧಿಗಾಗಿ ಉದ್ಯೋಗಿಗಳೊಂದಿಗೆ ಮಾತುಕತೆ ನಡೆಸಿದ್ದಾರಂತೆ. ಆ ಪ್ರಕಾರ, ಬೇರೆ ಡೇಟಿಂಗ್‌ ಆ್ಯಪ್‌ ಗಳಿಗೆ ಸ್ಪರ್ಧಿಯಾಗುವಂತೆ ಎಕ್ಸ್‌ನಲ್ಲಿಯೇ ಬಳಕೆದಾರರಿಗೆ ಡೇಟಿಂಗ್‌ ಫೀಚರ್‌ ಪರಿಚಯಿಸಲು ಯೋಜಿಸಲಾಗಿದೆ ಎಂದು ಮೂಲಗಳು ಹೇಳುತ್ತಿವೆ.

Shwetha M