ಓಲಾ, ಉಬರ್ ಬಳಸೋ ಮುನ್ನ ಜೇಬು ಗಟ್ಟಿಯಿರಲಿ- ಪೀಕ್ ಅವರ್‌ಗಳಲ್ಲಿ ಡಬಲ್ ರೇಟ್, ಸವಾರಿ ಕ್ಯಾನ್ಸಲ್ ಮಾಡಿದ್ರೆ ದಂಡ

ಓಲಾ, ಉಬರ್ ಬಳಕೆದಾರರಿಗೆ ಮತ್ತೊಂದು ಶಾಕಿಂಗ್ ವಿಚಾರ ಹೊರಬಿದ್ದಿದೆ. ಕೇಂದ್ರ ಸರ್ಕಾರವೇ ಪೀಕ್ ಅವರ್‌ಗಳಲ್ಲಿ ದುಪ್ಪಟ್ಟು ದರ ವಿಧಿಸಲು ಅವಕಾಶ ಮಾಡಿಕೊಟ್ಟಿದೆ. ಮೊದಲೇ ಮಳೆ ಜಾಸ್ತಿಬಂದರೆ, ವೀಕೆಂಡ್‌ಗಳಲ್ಲಿ ಓಲಾ, ಉಬರ್ ರೇಟ್ ಜಾಸ್ತಿಯೇ ಇರುತ್ತದೆ. ಇದೀಗ ಕೇಂದ್ರದಿಂದಲೇ ಒಪ್ಪಿಗೆ ಸಿಕ್ಕಮೇಲೆ ಬಳಕೆದಾರರ ಪಾಡು ಕಷ್ಟವೇ.
ಇದನ್ನೂ ಓದಿ:ಬೈಕ್ ಟ್ಯಾಕ್ಸಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್! – ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?
ಓಲಾ, ಊಬರ್ (Ola, Uber) ನಂತರ ಅಗ್ರಿಗೇಟರ್ ಕಂಪನಿಗಳು ಪೀಕ್ ಅವರಗಳಲ್ಲಿ ಮೂಲ ಬೆಲೆಗಿಂತ ದುಪ್ಪಟ್ಟು ದರ ಅಂದರೆ ಸರ್ಜ್ ಚಾರ್ಜ್ ವಿಧಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜುಲೈ 1ರಂದು ಆದೇಶ ಹೊರಡಿಸಿದೆ. ಮೋಟಾರ್ ವೆಹಿಕಲ್ ಅಗ್ರಿಗೇಟರ್ ಮಾರ್ಗಸೂಚಿಗಳು 2025ರ ಅನ್ವಯ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಈವರೆಗೆ ಕ್ಯಾಬ್ ಅಗ್ರಿಗೇಟರ್‌ಗಳು ಪೀಕ್ ಅವರ್‌ಗಳಲ್ಲಿ ಸರ್ಜ್ ಬೆಲೆ ಮೂಲ ದರಕ್ಕಿಂತ 1.5 ಪಟ್ಟು ಹೆಚ್ಚು ವಿಧಿಸಲಾಗುತ್ತಿತ್ತು. ಆದರೀಗ ಹೊಸ ಮಾರ್ಗಸೂಚಿಯ ಪ್ರಕಾರ 2 ಪಟ್ಟು ಹೆಚ್ಚಿನ ದರ ವಿಧಿಸಬಹುದಾಗಿದೆ. ಅಲ್ಲದೇ ಮುಂದಿನ ಮೂರು ತಿಂಗಳ ಒಳಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯಗಳಿಗೆ ಸೂಚಿಸಲಾಗಿದೆ ಇದರೊಂದಿಗೆ ಇನ್ನಷ್ಟು ನಿಯಮಗಳನ್ನೂ ಜಾರಿಗೆ ತರಲಾಗಿದೆ.
ನಿರ್ದಿಷ್ಟ ಕಾರಣವಿಲ್ಲದೇ ಸವಾರಿಯನ್ನ ರದ್ದುಗೊಳಿಸಿದ್ರೆ 100 ರೂ.ಗೆ 10% ನಂತೆ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಜೊತೆಗೆ 3 ಕಿಮೀ ಒಳಪಟ್ಟ ಡೆಡ್ ಮೈಲೆಜ್‌ಗೆ ಪ್ರಯಾಣಿಕಗೆ ಯಾವುದೇ ಶುಲ್ಕ ವಿಧಿಸಬಾರದು. ಅಗ್ರಿಗೇಟರ್ ಪ್ರಯಾಣಿಕರಿಗೆ ಕನಿಷ್ಠ 5 ಲಕ್ಷ ರೂ. ವಿಮೆ ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಮೋಟಾರ್ ವೆಹಿಕಲ್ ಅಗ್ರಿಗೇಟರ್ ಕಂಪನಿಗಳು ಕೇಂದ್ರದ ಈ ನಿಯಮವನ್ನು ಸ್ವಾಗತಿಸಿವೆ. ಎಲ್ಲಾ ಹಂತಗಳಲ್ಲಿ ಸರ್ಕಾರದೊಂದಿಗೆ ಸಹಕರಿಸಲು ಸಿದ್ಧರಿದ್ದೇವೆ ಎಂದೂ ಹೇಳಿದೆ.

ನೋಡಿರಿ

