ರಾಜ್ಯದ ಜನತೆಗೆ ಮತ್ತೊಂದು ಶಾಕ್! – ಹಾಲಿನ ದರ ಮತ್ತೊಮ್ಮೆ ಏರಿಕೆ?
ಬೆಂಗಳೂರು: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಒಂದೆಡೆ ವಿದ್ಯುತ್ ಶಾಕ್, ಇನ್ನೊಂದೆಡೆ ಅಕ್ಕಿ, ತರಕಾರಿ, ಬೇಳೆಕಾಳುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಮತ್ತೊಂದೆಡೆ ಈಗ ನಂದಿನಿ ಹಾಲಿನ ದರ ಹೆಚ್ಚಿಸಲು ಹಾಲು ಒಕ್ಕೂಟಗಳು ಸರ್ಕಾರ ಮುಂದೆ ಪ್ರಸ್ತಾವ ಸಲ್ಲಿಸಿದು, ಹೊಸ ವರ್ಷದ ಆರಂಭದಲ್ಲಿ ಹಾಲು-ಮೊಸರಿನ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದುಬದಿದೆ.
ಜುಲೈನಲ್ಲಿ ಹಾಲಿನ ದರ ಲೀಟರ್‌ಗೆ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಮತ್ತೆ ಹಲಿನ ಬೆಲೆ ಏರಿಕೆ ಮಾಡಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಅಧಿಕಾರಿಗಳು ಮತ್ತು ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಶು ಸಂಗೋಪನಾ ಸಚಿವ ಕೆ ವೆಂಕಟೇಶ್ ಹಾಲು ಒಕ್ಕೂಟಗಳು ತಮಗೆ ನಷ್ಟವಾಗುತ್ತಿರುವ ಕಾರಣ ದರ ಪರಿಷ್ಕರಿಸಬೇಕು ಎಂದು ಪ್ರಸ್ತಾವ ಸಲ್ಲಿಸಿವೆ. ಆದರೆ ಸದ್ಯ ದರ ಏರಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಬೆನ್ನಲ್ಲೇ ವಿಜಯೇಂದ್ರ ಆಕ್ಟೀವ್ – ಕಾರ್ಯಕರ್ತನ ಮನೆಗೆ ತೆರಳಿ ಸಂಘಟನೆಯ ಬಗ್ಗೆ ಚರ್ಚೆ!
ಇದೇ ವೇಳೆ ಅನ್ಯ ರಾಜ್ಯದ ಹಾಲಿನ ದರ ಹಾಗೂ ಕರ್ನಾಟಕದ ಹಾಲಿನ ದರಗಳ ನಡುವಿನ ವ್ಯತ್ಯಾಸದ ಅಂಕಿ ಅಂಶವನ್ನು ಸುದ್ದಿಗಾರರ ಮುಂದೆ ಪ್ರದರ್ಶಿಸಿದ ಅವರು, ಹಾಲಿನ ದರ ಏರಿಸುವಂತೆ ರೈತರ ಒತ್ತಡವೂ ಇದೆ ಎನ್ನುವ ಮೂಲಕ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ದರ ಏರಿಸುವ ಸುಳಿವು ನೀಡಿದರು.
ಬೇರೆ ರಾಜ್ಯಗಳಲ್ಲಿ ಹಾಲಿನ ದರಕ್ಕೆ ಹೋಲಿಸಿದರೆ ನಂದಿನಿ ಹಾಲಿನ ದರ ಕಡಿಮೆ ಇದೆ. ನಂದಿನಿ ಹಾಲನ್ನು ಲೀಟರ್ ಗೆ 42 ರೂ.ಗೆ ಮಾರಾಟ ಮಾಡುತ್ತಿದ್ದು, ಬೇರೆ ರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ನೆರೆಯ ರಾಜ್ಯಗಳಲ್ಲಿ ಲೀಟರ್ ಗೆ 48ರಿಂದ 51 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹಾಲಿನ ದರವನ್ನು ಹೆಚ್ಚಿಸುವಂತೆ ಕೆಎಂಎಫ್ ಸದಸ್ಯರು, ರೈತರು ಮತ್ತು ಇತರ ಪಾಲುದಾರರಿಂದ ಒತ್ತಡವಿದೆ ಎಂದು ಹೇಳಿದರು.