ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್‌! – ಸೋಲಾರ್​ ಸಬ್ಸಿಡಿ ಕಟ್

ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್‌! – ಸೋಲಾರ್​ ಸಬ್ಸಿಡಿ ಕಟ್

ಬೆಂಗಳೂರು: ದಿನಕಳೆದಂತೆ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ವಿದ್ಯುತ್‌ ದರ ಏರಿಕೆ ಆಯ್ತು. ಈಗ ಸೋಲಾರ್​ ಬಳಸುತ್ತಿದ್ದವರ ಸಬ್ಸಿಡಿಯನ್ನು ರದ್ದು ಮಾಡಲಾಗಿದೆ. ಈ ಕುರಿತಾಗಿ ಕೆಇಆರ್‌ಸಿ ಹೊಸ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಫ್ರೀ ಬಸ್‌ ಟಿಕೆಟ್‌ ಎಫೆಕ್ಟ್‌: ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಸರ್ವರ್‌ ಡೌನ್‌ – ಟಿಕೆಟ್‌ ಬುಕ್‌ ಆಗದಿದ್ರೂ ಹಣ ಕಟ್‌!

ಕೆಇಆರ್‌ಸಿ 2007ರಿಂದ ಸೋಲಾರ್ ಬಳಕೆಗೆ ಉತ್ತೇಜನ ನೀಡಲು ಸಬ್ಸಿಡಿ ನೀಡುತ್ತಿತ್ತು. ನಿಗಮ ಪ್ರತೀ ಯೂನಿಟ್​ಗೆ 50 ಪೈಸೆಯಂತೆ ಸಬ್ಸಿಡಿ ನೀಡುತ್ತಿತ್ತು. ಇದೀಗ ವಿದ್ಯುತ್‌ ದರ ಏರಿಕೆಯ ಬೆನ್ನಲ್ಲೇ ಸೋಲಾರ್‌ ಸಬ್ಸಿಡಿಗೆ ಕೆಇಆರ್‌ಸಿ ಬ್ರೇಕ್‌ ಹಾಕಿದೆ.  ಕೆಇಆರ್‌ಸಿ ಈ ಸಬ್ಸಿಡಿಯನ್ನು 2024ರ ದರ ಪಟ್ಟಿಯಲ್ಲಿ ಕೈ ಬಿಟ್ಟಿದೆ. ಸೋಲಾರ್ ಸಬ್ಸಿಡಿ ಮಾತ್ರವಲ್ಲ, ಜತೆಗೆ ಬ್ಯಾಂಕ್ ಮೂಲಕ ಆಟೋಮೆಟಿಕ್ ಬಿಲ್ ಪಾವತಿ ಮಾಡುವಾಗ ಇದ್ದ 0.25% ರಿಯಾಯಿತಿ ಕೂಡ ರದ್ದು ಮಾಡಿರುವುದಾಗಿ ಆದೇಶ ಹೊರಡಿಸಿದೆ.

ಎಸ್ಕಾಂ, ಸೋಲಾರ್ ಬಳಕೆದಾರರಿಗೆ ಗರಿಷ್ಠ 50 ರೂ.ವರೆಗೆ ಸಬ್ಸಿಡಿ ನೀಡುತ್ತಿತ್ತು. ಆದರೆ ಇದೀಗ ಎಸ್ಕಾಂ, “600 ಫೀಟ್ ಮೌಲ್ಡ್ ಮನೆ ಕಟ್ಟಿಸಿಕೊಳ್ಳುವ ಮಾಲೀಕರೆಲ್ಲರೂ ಸೋಲಾರ್ ಬಳಸುತ್ತಿದ್ದಾರೆ. ಹೀಗಾಗಿ ಸಬ್ಸಿಡಿ ನೀಡುವ ಅಗತ್ಯವಿಲ್ಲ. ಹೀಗಾಗಿ ಹೊಸ ದರ ಪಟ್ಟಿಯಿಂದ ಸಬ್ಸಿಡಿಯನ್ನು ಕೈಬಿಡಲಾಗಿದೆ” ಎನ್ನುತ್ತಿದೆ.

suddiyaana