ಸಿಲಿಕಾನ್‌ ಸಿಟಿ ಮಂದಿಗೆ ಮತ್ತೊಂದು ಶಾಕ್‌ – ಇಂದಿನಿಂದ ಆಟೋ ದರ ಏರಿಕೆ!

ಸಿಲಿಕಾನ್‌ ಸಿಟಿ ಮಂದಿಗೆ ಮತ್ತೊಂದು ಶಾಕ್‌ – ಇಂದಿನಿಂದ ಆಟೋ ದರ ಏರಿಕೆ!

ಸಿಲಿಕಾನ್‌ ಸಿಟಿ ಬೆಂಗಳೂರಿನ ಜನತೆ ಬೆಲೆ ಏರಿಕೆಯಿಂದಾಗಿ ಕಂಗೆಟ್ಟು ಹೋಗಿದ್ದಾರೆ. ಈಗಾಗಲೇ ಬಸ್, ಮೆಟ್ರೋ ದರ ಏರಿಕೆ ಮಾಡಲಾಗಿತ್ತು. ಇಂದಿನಿಂದ ಆಟೋ ದರ ಏರಿಕೆಯಾಗುತ್ತಿದ್ದು, ಬೆಂಗಳೂರಿಗರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಇದನ್ನೂ ಓದಿ: ಆರೋಗ್ಯಕ್ಕೆ ಒಳ್ಳೇದು ಅಂತಾ ಹೆಚ್ಚು ಮೊಟ್ಟೆ ತಿಂದ್ರೆ ಡೇಂಜರ್ – ದಿನಕ್ಕೆ 2ಕ್ಕಿಂತ ಹೆಚ್ಚು Egg ತಿಂದ್ರೆ ಏನಾಗುತ್ತೆ..?

ಕಳೆದ 15 ದಿನಗಳ ಹಿಂದೆ  ಬೆಂಗಳೂರು ಜಿಲ್ಲಾಧಿಕಾರಿ ಆಟೋ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ರು. ಈ ಆದೇಶ ಇಂದಿನಿಂದ ಜಾರಿಗೆ ಬರ್ತಿದೆ. ಇಂದಿನಿಂದ 2 ಕಿಮೀಗೆ ಕನಿಷ್ಠ ಪ್ರಯಾಣ ದರ 30 ರಿಂದ 36ಕ್ಕೆ ಏರಿಕೆ ಮಾಡಿ ಡಿಸಿ ಜಗದೀಶ್ ಆದೇಶ ಹೊರಡಿಸಿದ್ದಾರೆ. ಇದು ರಾಜಧಾನಿ ಜನರ ಜೇಬಿಗೆ ಕತ್ತರಿ ಹಾಕಲಿದೆ.

ಒಂದೆಡೆ ಸರ್ಕಾರ ಆಟೋ ದರ ಏರಿಕೆ ಮಾಡಿದ್ರೆ, ಈ ದರ ಏರಿಕೆಯ ನಂತರವೂ ಹೆಚ್ಚು ಹಣ ಪಡೆದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಇದೀಗ ಸುಲಿಗೆ ಮಾಡೋ ಆಟೋ ಚಾಲಕರ ಆಪರೇಷನ್‌ಗೆ ಟ್ರಾಫಿಕ್ ಪೋಲಿಸರು ಮುಂದಾಗಿದ್ದಾರೆ.  ಬೆಂಗಳೂರು ನಗರ ಸಂಚಾರ ಪೋಲಿಸರು ಸಾರ್ವಜನಿಕರಿಂದ ಅತೀ ಹೆಚ್ಚು ಬಾಡಿಗೆ ಸಂಗ್ರಹಿಸುತ್ತಿರೋದು, ಸಾರ್ವಜನಿಕರು ಕರೆದ ಕಡೆಗೆ ಬಾಡಿಗೆ ಹೋಗದೇ ಇದ್ದು ಅಥವಾ ನಿಯಮ ಉಲ್ಲಂಘನೆ ಮಾಡೋ ಆಟೋಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಆಟೋ ಪ್ರಯಾಣ ದುಬಾರಿ?

  • ಮೊದಲ 2 ಕಿ.ಮೀಗೆ ಕನಿಷ್ಠ 36 ರೂ.
  • ನಂತರ ಪ್ರತಿ ಕಿ.ಮೀಗೆ 18 ರೂ.
  • ಮೊದಲ ಐದು ನಿಮಿಷ ಕಾಯುವಿಕೆ ಉಚಿತ
  • ಪ್ರತಿ 15 ನಿಮಿಷ ಕಾಯುವಿಕೆ ದರ 10 ರೂ.
  • 20 ಕೆಜಿ ಲಗೇಜ್ ಉಚಿತ
  • 20 ಕೆಜಿಗಿಂತ ಹೆಚ್ಚಿದ್ರೆ 10 ರೂ. ಲಗೇಜ್ ಶುಲ್ಕ
  • ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ಒಂದೂವರೆ ಪಟ್ಟು ದರ
  • ಹೊಸ ದರ ಪಟ್ಟಿ ಆಟೋದ ಮೇಲೆ ಕಡ್ಡಾಯ ಹಾಕಬೇಕು
  • ಪರಿಷ್ಕೃತ ದರದ ಹೊಸ ಮೀಟರ್ ಅ.31ರ ಒಳಗೆ ಹಾಕಿಸಬೇಕು.

Shwetha M