ಹೊಸ ವರ್ಷಕ್ಕೆ ಇಸ್ರೋದಿಂದ ಮತ್ತೊಂದು ಯೋಜನೆ! – ನ್ಯೂಟ್ರಾನ್ ನಕ್ಷತ್ರ, ಕಪ್ಪು ಕುಳಿ ಅಧ್ಯಯನಕ್ಕೆ XPoSAT ಉಪಗ್ರಹ ಉಡಾವಣೆ!

ಹೊಸ ವರ್ಷಕ್ಕೆ ಇಸ್ರೋದಿಂದ ಮತ್ತೊಂದು ಯೋಜನೆ! – ನ್ಯೂಟ್ರಾನ್ ನಕ್ಷತ್ರ, ಕಪ್ಪು ಕುಳಿ ಅಧ್ಯಯನಕ್ಕೆ XPoSAT ಉಪಗ್ರಹ ಉಡಾವಣೆ!

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ವರ್ಷ ಚಂದ್ರನ ಅಂಗಳಕ್ಕೆ  ಉಪಗ್ರಹ ಇಳಿಸಿ ಸಕ್ಸಸ್‌ ಆಗಿದೆ. ಚಂದ್ರಯಾನ 3 ಬಳಿಕ ಸೂರ್ಯನ ಅಧ್ಯಯನಕ್ಕೂ ಆದಿತ್ಯ -ಎಲ್‌1 ನೌಕೆ ಕಳುಹಿಸಲಾಗಿದೆ. 2023ರ ಸಾಲಿನಲ್ಲಿ ಹತ್ತು ಹಲವು ಸಾಧನೆಗೈದ  ಇಸ್ರೋ ಮತ್ತೊಂದು ಯೋಜನೆಯ ಮೂಲಕ ಹೊಸ ವರ್ಷವನ್ನೂ ಭರ್ಜರಿಯಾಗಿ ವೆಲ್‌ಕಮ್‌ ಮಾಡಲಿದೆ.

ಇದನ್ನೂ ಓದಿ: ಇಸ್ರೇಲ್‌ನಲ್ಲಿ ಕಾರ್ಮಿಕರ ಕೊರತೆ – ಭಾರತದ ಕಾರ್ಮಿಕರಿಗೆ ಫುಲ್‌ ಡಿಮ್ಯಾಂಡ್.. 1.25 ಲಕ್ಷ ವೇತನ..!

ಹೌದು, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ 2024ರ ಹೊಸ ವರ್ಷವನ್ನು ಭರ್ಜರಿಯಾಗಿ ಆರಂಭಿಸಲು ಸಜ್ಜಾಗಿದೆ. ಜನವರಿ 1 ರಂದು ದೇಶದ ಮೊದಲ ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹ (XPoSat)ವನ್ನು ಪೋಲಾರ್ ನೌಕೆಯನ್ನು ಇಸ್ರೋ ಉಡಾವಣೆ ಮಾಡುತ್ತಿದೆ. ಈ ಉಪಗ್ರಹ ಕಪ್ಪು ಕುಳಿ, ನ್ಯೂಟ್ರಾನ್ ನಕ್ಷತ್ರ, ಎಕ್ಸ್ ರೇ ಬೈನರಿ, ಸಕ್ರಿಯ ಗ್ಯಾಲಕ್ಸಿ ನ್ಯೂಕ್ಲಿಯಸ್, XPoSat ಪಲ್ಸರ್‌ಗಳು ಸೇರಿದಂತೆ 50 ಪ್ರಕಾಶಮಾನ ಮೂಲಗಳ ಕುರಿತು ಅಧ್ಯಯನ ಮಾಡಲಿದೆ. ವಿಶೇಷ ಅಂದರೆ ಈ ಉಪಗ್ರಹವನ್ನು 500 ರಿಂದ 700 ಕಿಲೋಮೀಟರ್ ವೃತ್ತಕಾರಾದ ಬೂಮಿಯ ಕಕ್ಷೆಯಲ್ಲಿ ಇರಿಸಿ ಅಧ್ಯಯನ ಮಾಡಲಾಗುತ್ತದೆ. ಕನಿಷ್ಠ ಐದು ವರ್ಷಗಳ ಕಾಲ ಈ ಅಧ್ಯಯನ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ನಾಸಾ ಬಳಿಕ ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹ ಕಳುಹಿಸುತ್ತಿರುವ ಎರಡನೇ ಸಂಸ್ಥೆ ಇಸ್ರೋ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2021ರಲ್ಲಿ ನಾಸಾ ಪೊಲರಿಮೀಟರ್ ಎಕ್ಸ್ ರೇ ಎಕ್ಸ್‌ಪ್ಲೋರರ್ (IXPE) ಉಪಗ್ರಹ ಕಳುಹಿಸಿತ್ತು.

Shwetha M