ಆಧಾರ್‌ ಕಾರ್ಡ್‌ ಅಪ್‌ಡೇಟ್ ಮಾಡಿಸಲು ಮತ್ತೊಂದು ಅವಕಾಶ – ಗಡುವು ವಿಸ್ತರಿಸಿದ ಯುಐಡಿಎಐ

ಆಧಾರ್‌ ಕಾರ್ಡ್‌ ಅಪ್‌ಡೇಟ್ ಮಾಡಿಸಲು ಮತ್ತೊಂದು ಅವಕಾಶ – ಗಡುವು ವಿಸ್ತರಿಸಿದ ಯುಐಡಿಎಐ

ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಇವಾಗಂತೂ ಆಧಾರ್ ಕಾರ್ಡ್ ಎಲ್ಲದಕ್ಕೂ ಕಡ್ಡಾಯ ಮಾಡಲಾಗಿದೆ. ಜೊತೆಗೆ ಆಧಾರ್ ಮೂಲಕ ಅನೇಕ ಸೌಲಭ್ಯಗಳನ್ನ ಮಾಡಬಹುದಾಗಿದೆ. ಆಧಾರ್‌ ಕಾರ್ಡ್‌ ಮಾಡಿಸಿ 10 ವರ್ಷಕ್ಕಿಂತ ಜಾಸ್ತಿಯಾಗಿರುವವರು ಅಪ್ಡೇಟ್‌ ಮಾಡಿಸಲು ಈಗಾಗಲೇ ಅವಕಾಶ ನೀಡಲಾಗಿದೆ. ಆದರೂ ಕೂಡ ಜನರು ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಿಸಲು ಮನಸ್ಸು ಮಾಡುತ್ತಿಲ್ಲ. ನೀವು ಇನ್ನೂ ನಿಮ್ಮ ಆಧಾರ್ ಅನ್ನು ಅಪ್‌ಡೇಟ್ ಮಾಡದಿದ್ದರೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನಿಮಗಾಗಿ ಮತ್ತೊಂದು ಅವಕಾಶವನ್ನು ತಂದಿದೆ. ಆಧಾರ್ ಅನ್ನು ಉಚಿತವಾಗಿ ನವೀಕರಿಸಲು ಯುಐಡಿಎಐ ನಿಮಗೆ ಇನ್ನೂ 3 ತಿಂಗಳ ಕಾಲಾವಕಾಶ ನೀಡಿದೆ.

ಇದನ್ನೂ ಓದಿ: ಟೊಮ್ಯಾಟೋ, ಈರುಳ್ಳಿ ನಂತರ ಈಗ ಬೆಳ್ಳುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ! – ಬೆಲೆ ದ್ವಿಗುಣಗೊಳ್ಳಲು ಕಾರಣವೇನು?  

ಹೌದು, 2011ರಿಂದ 2015ರೊಳಗೆ ಆಧಾರ್ ಕಾರ್ಡ್ ಮಾಡಿಸಿಕೊಂಡು ಒಮ್ಮೆಯೂ ಅಪ್ಡೇಟ್ ಮಾಡದವರಿಗೆ ಇದೀಗ ಅಪ್ಡೇಟ್ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಇದೆ. ಈ ಸಂಬಂಧ ಪ್ರತಿಯೊಬ್ಬರ ಮೊಬೈಲ್‌ಗೆ ಮೆಸೇಜ್ ಬರುತ್ತಿದೆ. ಇದೀಗ ಆಧಾರ್‌ ಕಾರ್ಡ್‌ ಅನ್ನು ಅಪ್ಡೇಟ್‌ ಮಾಡಿಸಿಕೊಳ್ಳಲು ಯುಐಡಿಎಐ ಮತ್ತೆ  ಮೂರು ತಿಂಗಳ ಅವಕಾಶ ನೀಡಿದೆ. 15.12.2023 ರಿಂದ 14.03.2024 ರವರೆಗೆ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಿಸಲು ಅವಧಿ ವಿಸ್ತರಿಸಲು ನಿರ್ಧರಿಸಲಾಗಿದೆ. ಮೂರು ತಿಂಗಳೊಳಗೆ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಿಸದಿದ್ದರೆ 50 ಶುಲ್ಕ ರೂ ಪಾವತಿಸಿ ನಿಮ್ಮ ಆಧಾರ್‌ ಅಪ್‌ಡೇಟ್‌ ಮಾಡಿಕೊಳ್ಳಬೇಕಾಗುತ್ತದೆ.

ಏಕೆ ನವೀಕರಿಸಬೇಕು?

ನಿಮ್ಮ ವಿಳಾಸವನ್ನು ನವೀಕರಿಸದಿದ್ದರೆ, ನೀವು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಬ್ಯಾಂಕ್ ಸ್ಟೇಟ್‌ಮೆಂಟ್ ಮುಂತಾದ ಪ್ರಮುಖ ದಾಖಲೆಗಳನ್ನು ಸ್ವೀಕರಿಸದಿರಬಹುದು. ನ.10, 2022 ರಂದು PIB ಯಿಂದ ಪತ್ರಿಕಾ ಪ್ರಕಟಣೆಯು ಹೀಗೆ ಹೇಳಿದೆ, “10 ವರ್ಷಗಳ ಹಿಂದೆ ಆಧಾರ್ ನೀಡಿದ್ದ ಮತ್ತು ಈ ವರ್ಷಗಳಲ್ಲಿ ಅದನ್ನು ನವೀಕರಿಸದ ನಿವಾಸಿಗಳು ತಮ್ಮ ದಾಖಲೆಗಳನ್ನು ನವೀಕರಿಸಿ” ಎಂದು ಸಲಹೆ ನೀಡಲಾಗಿದೆ. ಇದನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಅಪ್ಲೋಡ್ ಮಾಡುವುದು ಹೇಗೆ?

  • ಆಧಾರ್ ಕೇಂದ್ರದಲ್ಲಿ ಡಾಕ್ಯುಮೆಂಟ್ ಅನ್ನು ನವೀಕರಿಸಲಾಗುತ್ತದೆ. ಇದಲ್ಲದೆ, ನೀವು ಇದನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು.
  • https://myaadhaar.uidai.gov.in/ ಗೆ ಭೇಟಿ ನೀಡಿ
  • ಲಾಗಿನ್ ಮಾಡಿ ಮತ್ತು ವಿವರಗಳನ್ನು ಪರಿಶೀಲಿಸಿ ‘ಹೆಸರು/ಲಿಂಗ/DOB ಮತ್ತು ವಿಳಾಸವನ್ನು ನವೀಕರಿಸಿ’
  • ಅಪ್‌ಡೇಟ್ ವಿಳಾಸದ ಮೇಲೆ ಕ್ಲಿಕ್ ಮಾಡಿ (ಮುಂದುವರಿಯಲು ಸಮ್ಮತಿ ಪೆಟ್ಟಿಗೆಯನ್ನು ಟಿಕ್ ಮಾಡಿ) ಮತ್ತು ನಂತರ ‘ಆಧಾರ್ ಆನ್‌ಲೈನ್‌ನಲ್ಲಿ ನವೀಕರಿಸಿ’ ಕ್ಲಿಕ್ ಮಾಡಿ
  • ವಿಳಾಸ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ ಮತ್ತು ಒಪ್ಪಿಗೆ ನೀಡಿ.
  • 50 ರೂ. ಪಾವತಿಸಿ.
  • ಒಂದು SRN ಜನರೇಟ್ ಆಗುವುದು. ಅದನ್ನು ಸೇವ್​​​ ಮಾಡಿ.
  • ಆಂತರಿಕ ಗುಣಮಟ್ಟದ ಪರಿಶೀಲನೆಯ ನಂತರ, ನೀವು SMS ಅನ್ನು ಸ್ವೀಕರಿಸುತ್ತೀರಿ.

ಆಧಾರ್ನಲ್ಲಿ ಮೊ.ಸಂ ಅಪ್ಡೇಟ್ ಮಾಡುವುದು ಹೇಗೆ?

ಈ ಆನ್‌ಲೈನ್ ಸೈಟ್ ಮೂಲಕ ನೀವು ನಿಮ್ಮ ವಿಳಾಸ ಮತ್ತು ದಾಖಲೆಗಳನ್ನು ಮಾತ್ರ ನವೀಕರಿಸಬಹುದು. ಹೆಚ್ಚಿನ ನವೀಕರಣಗಳಿಗಾಗಿ, ನೀವು ನೋಂದಣಿ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಯಾವುದೇ ದಾಖಲೆಯ ಅಗತ್ಯವಿಲ್ಲ. ಆಧಾರ್ ಹೊಂದಿರುವವರು ಬಯೋಮೆಟ್ರಿಕ್ ದೃಢೀಕರಣಕ್ಕೆ ಹಾಜರಾಗಬೇಕಾಗುತ್ತದೆ. ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಶುಲ್ಕ ಸುಮಾರು 50 ರೂ.

Shwetha M