ಅಮೆರಿಕದಲ್ಲಿ ಮತ್ತೊಂದು ಹೊಸ ಸೋಂಕು ಪತ್ತೆ! – ಕೊರೊನದಂತೆ ಜನರ ಜೀವ ಹಿಂಡುತ್ತಾ ಮಹಾಮಾರಿ?

ಅಮೆರಿಕದಲ್ಲಿ ಮತ್ತೊಂದು ಹೊಸ ಸೋಂಕು ಪತ್ತೆ! – ಕೊರೊನದಂತೆ ಜನರ ಜೀವ ಹಿಂಡುತ್ತಾ ಮಹಾಮಾರಿ?

ಕೊರೊನಾ ಮಹಾಮಾರಿ 2 ವರ್ಷಗಳ ಕಾಲ ಇಡೀ ಜಗತ್ತನ್ನೇ ಆಳಿತ್ತು. ಅದರ ರೌದ್ರ ನರ್ತನಕ್ಕೆ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು. ಕೊರೊನಾ ಬಿಕ್ಕಟ್ಟಿನಿಂದ ಕಂಗೆಟ್ಟು ಈಗಷ್ಟೇ ನಿರಾಳವಾಗುತ್ತಿದ್ದ ಜನಕ್ಕೆ ಈಗ ಮತ್ತೊಂದು ಶಾಕ್‌ ಎದುರಾಗಿದೆ.  ಅಮೆರಿಕದಲ್ಲಿ ಇದೀಗ ಮತ್ತೊಂದು ಸೋಂಕು ತೀವ್ರವಾಗಿ ಹರಡುತ್ತಿದ್ದು, ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ: ನಿನ್ನ ಬೆತ್ತಲೆ ಫೋಟೋ ಲೀಕ್‌ ಮಾಡ್ತೀನಿ.. – ಸ್ನೇಹಿತನಿಗೆ ಬೆದರಿಕೆ ಹಾಕಿ ಬರೋಬ್ಬರಿ 65 ಲಕ್ಷ ರೂ. ಪೀಕಿದ ಭೂಪ

ಹೌದು, ಕೊರೊನಾ ಬಿಕ್ಕಟ್ಟಿನಿಂದ ಕಂಗೆಟ್ಟು ಈಗಷ್ಟೇ ನಿರಾಳವಾಗುತ್ತಿದ್ದ  ಅಮೆರಿಕದಲ್ಲ ಈಗ ಹೊಸ ಸೋಂಕು ಎಂಟ್ರಿಕೊಟ್ಟಿದೆ. ಕ್ಯಾಂಡಿಡಾ ಆರಿಸ್‌ ಎಂದು ಕರೆಯಲಾಗುತ್ತಿರುವ ಶಿಲೀಂಧ್ರ ಸೋಂಕು (ಫಂಗಲ್‌ ಇನ್ಸ್ಪೆಕ್ಷನ್‌) ಕಾಣಿಸಿಕೊಂಡಿದೆ. ಈ ಸೋಂಕು ವೇಗವಾಗಿ ಹರಡುತ್ತಿದ್ದು, ಈಗಾಗಲೇ ನಾಲ್ವರಲ್ಲಿ ದೃಢಪಟ್ಟಿದೆ. ಇತರ ಅನಾರೋಗ್ಯ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗಿ ಫೀಡಿಂಗ್‌ ಟ್ಯೂಬ್‌, ಬ್ರಿತಿಂಗ್‌ ಟ್ಯೂಬ್‌ಗಳ ಸಹಾಯ ಪಡೆಯುತ್ತಿರುವ ರೋಗಿಗಳಿಗೆ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಕ್ಯಾಂಡಿಡಾ ಆರಿಸ್ಸೋಂಕಿನ ಲಕ್ಷಣಗಳೇನು ?

ಕ್ಯಾಂಡಿಡಾ ದೃಢ ಪಟ್ಟವರಲ್ಲಿ ಇಂಥದ್ದೇ ಎನ್ನುವಂಥ ರೋಗ ಲಕ್ಷಣಗಳು ವರದಿಯಾಗಿಲ್ಲ.ಆದರೆ, ರಕ್ತನಾಳ, ಕಿವಿ, ತೆರೆದ ಗಾಯಗಳಲ್ಲಿ ಸೋಂಕು ಹೆಚ್ಚಿಸಿ ರೋಗವನ್ನು ಕ್ಯಾಂಡಿಡಾ ಉಲ್ಬಣ ಗೊಳಿಸುತ್ತದೆ. ಸೋಂಕು ಹರಡಿದ ಬಳಿಕ ವ್ಯಕ್ತಿ ತೀವ್ರವಾಗಿ  ದುರ್ಬಲಗೊಳ್ಳುತ್ತಾನೆ ಎಂದು ವೈದ್ಯರು ಹೇಳಿದ್ದಾರೆ.

Shwetha M