ಏಷ್ಯಾಕಪ್ ಗೆದ್ರೂ ಭಾರತಕ್ಕಿಲ್ಲ ಕಪ್ – ಜಿದ್ದು ಸಾಧಿಸ್ತಿದ್ದಾರಾ ಮೊಹ್ಸಿನ್ ನಖ್ವಿ?
2025ರ ಕಪ್ ಕೊಟ್ಟಿಲ್ಲ.. 2026ಕ್ಕೆ?

2026ರ ಮಹಿಳಾ ಏಷ್ಯಾಕಪ್ನಲ್ಲೂ ಟೀಂ ಇಂಡಿಯಾ ಡಾಮಿನೆನ್ಸ್ ಕಂಟಿನ್ಯೂ ಆಗಿದೆ. ಈ ಆವೃತ್ತಿಯಲ್ಲೂ ನೋ ಲಾಸ್ ಜರ್ನಿಯೊಂದಿಗೆ ಫೈನಲ್ಗೂ ಲಗ್ಗೆ ಇಟ್ಟಿದ್ದಾರೆ. ಭಾನುವಾರ ಫೈನಲ್ ಮ್ಯಾಚ್ ನಡೆಯಲಿದ್ದು ಭಾರತನೇ ಗೆಲ್ಲುವಂಥ ಫೇವರೆಟ್ ಟೀಂ. ಬಟ್ ಇಲ್ಲಿ ಟೆನ್ಷನ್ ಇರೋದು ಭಾರತ ಟ್ರೋಫಿ ಗೆಲ್ಲೋದ್ರ ಬಗ್ಗೆ ಅಲ್ಲ. ಗೆದ್ದ ಮೇಲೆ ಟ್ರೋಫಿ ಕೈಸೇರುತ್ತಾ ಅನ್ನೋ ಬಗ್ಗೆ. ಒಂದ್ಕಡೆ ತಾನೇ ತನ್ನ ಕೈಯ್ಯಾರೆ ಟ್ರೋಫಿ ಕೊಡ್ಬೇಕು ಅಂತಾ ಕಾಯ್ತಿರೋ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ.. ಮತ್ತೊಂದೆಡೆ ನಖ್ವಿ ಕೈಯಿಂದ ಟ್ರೋಫಿ ತಗೊಳ್ಬಾರ್ದು ಅನ್ನೋ ಭಾರತ ಇನ್ನೊಂದ್ಕಡೆ.
ಇದನ್ನೂ ಓದಿ : ಇಶಾನ್ & ವೈಭವ್‌ಗೆ ದುಲೀಪ್ ಟ್ರೋಫಿ – ಪಾಕ್ ಆಟಗಾರರ ಕಾಲಲ್ಲಿ ಕೊಹ್ಲಿ ಶೂ
ಗ್ರೂಪ್ ಸ್ಟೇಜಲ್ಲಿ ಥೈಲ್ಯಾಂಡ್, ಹಾಂಗ್ ಕಾಂಗ್ ಹಾಗೇ ಪಾಕಿಸ್ತಾನ ವಿರುದ್ಧ ಭರ್ಜರಿಯಾಗಿ ಗೆದ್ದಿದ್ದ ಭಾರತ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದು ಫೈನಲ್ಗೆ ನುಗ್ಗಿದೆ. ಟೂರ್ನಮೆಂಟ್ನ ಇತಿಹಾಸದಲ್ಲೇ ಭಾರತ ಮೋಸ್ಟ್ ಸಕ್ಸಸ್ಫುಲ್ ಟೀಂ. ಆಡಿರುವಂಥ ಹತ್ತೂ ಆವೃತ್ತಿಯಲ್ಲೂ ಫೈನಲ್ ಟಿಕೆಟ್ ಪಡೆದಿದೆ. 7 ಸಲ ಟ್ರೋಫಿ ಗೆದ್ದಿದ್ದಾರೆ. 2 ಸಲ ರನ್ನರ್ ಅಪ್. ಈಗ 8ನೇ ಬಾರಿಗೆ ಟ್ರೋಫಿ ಗೆಲುವಿನ ಹೊಸ್ತಿಲಲ್ಲಿದ್ದಾರೆ. ಭಾರತದ ಆಟಗಾರ್ತಿಯರ ಪರ್ಫಾಮೆನ್ಸ್ ನೋಡ್ತಿದ್ರೆ ನಾವೇ ಗೆಲ್ಲೋದು ಪಕ್ಕಾ. ಆದ್ರೆ ಗೆದ್ಮೇಲೆ ಕಪ್ ಸಿಗುತ್ತಾ ಅನ್ನೋದೇ ಇಲ್ಲಿರೋ ಪ್ರಶ್ನೆ.
ಮಹಿಳಾ ಏಷ್ಯಾಕಪ್ ಫೈನಲ್ ಗೂ ನಖ್ವಿಯೇ ವಿಶೇಷ ಅತಿಥಿ!
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಅಧ್ಯಕ್ಷನೂ ಆಗಿರುವ ಮೊಹ್ಸಿನ್ ನಖ್ವಿ ಭಾನುವಾರ ಅಂದ್ರೆ ಸೆಪ್ಟೆಂಬರ್ 13ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ವಿಶೇಷ ಅತಿಥಿಯಾಗಿ ಹಾಜರಾಗ್ತಿದ್ದಾರೆ. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಹೆಸರಿಸಲಾಗಿದೆ. ಅವ್ರ ಇದೇ ಸ್ಪೆಷಲ್ ಗೆಸ್ಟ್ ಆಹ್ವಾನವೇ 2025ರ ಪುರುಷರ ಏಷ್ಯಾ ಕಪ್ ಫೈನಲ್‌ನಲ್ಲಿ ಡ್ರಾಮಾಗೆ ಮತ್ತೆ ಸಾಕ್ಷಿಯಾಗುತ್ತಾ ಅನ್ನೋ ಚರ್ಚೆಗಳನ್ನ ಹುಟ್ಟು ಹಾಕಿದೆ. ಈಗಾಗಲೇ ಫೈನಲ್ಗೆ ಲಗ್ಗೆ ಇಟ್ಟಿರೋ ಭಾರತ ಯಾರೇ ಎದುರಾಳಿಯಾದ್ರೂ ಗೆದ್ದು ಚಾಂಪಿಯನ್ ಪಟ್ಟಕ್ಕೇರೋದಂತೂ ಪಕ್ಕಾ. ಆದ್ರೆ ಭಾರತವು ಪ್ರಶಸ್ತಿಯನ್ನು ಗೆದ್ದರೆ, ಹರ್ಮನ್‌ಪ್ರೀತ್ ನಾಯಕತ್ವದ ಮಹಿಳಾ ತಂಡ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿಯನ್ನು ಸ್ವೀಕಾರ ಮಾಡೋ ಚಾನ್ಸಸ್ ಕಡಿಮೆ ಇದೆ. ಯಾಕಂದ್ರೆ ಪಂದ್ಯಗಳ ವೇಳೆಯೇ ಪರಸ್ಪರ ಆಟಗಾರರು ಕೈ ಕುಲುಕುತ್ತಾ ಇಲ್ಲ. ಪಾಕಿಸ್ತಾನದ ವಿರುದ್ಧದ ಗ್ರೂಪ್ ಸ್ಟೇಜ್ ಪಂದ್ಯದಲ್ಲೂ ಹರ್ಮನ್‌ಪ್ರೀತ್ ಕೌರ್ ಮತ್ತು ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಕಳೆದ ವರ್ಷ ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಲಿ ಆಘಾ ನಡುವೆಯೂ ಇದೇ ರೀತಿಯಾಗಿತ್ತು. ಹೀಗಿರುವಾಗ ನಖ್ವಿ ಕೈಯಿಂದಲೇ ಟ್ರೋಫಿ ತಗೊಳ್ಳೋ ಪರಿಸ್ಥಿತಿ ಬಂದ್ರೆ ಬಹುಶಃ ಟ್ರೋಫಿಯನ್ನೇ ಬಿಡಬಹುದು. ಅದಕ್ಕೆ ಕಾರಣವೂ ಇದೆ.
ಪಾಕ್ ಸರ್ಕಾರದ ಆಂತರಿಕ ಸಚಿವನೂ ಆಗಿರುವ ನಖ್ವಿ!
ಅಷ್ಟಕ್ಕೂ ಇಲ್ಲಿ ಮೊಹ್ಸಿನ್ ನಖ್ವಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ. ಟ್ರೋಫಿ ಹಸ್ತಾಂತರ ಮಾಡೋ ಪೊಸಿಷನ್ನಲ್ಲೇ ಅವ್ರಿದ್ದಾರೆ. ರೈಟ್ಸ್ ಮತ್ತು ಪವರ್ ಕೂಡ ಇದೆ. ಈಗ ಐಸಿಸಿ ಟೂರ್ನಮೆಂಟ್ಗಳಲ್ಲಿ ಐಸಿಸಿ ಅಧ್ಯಕ್ಷರು ಗೆದ್ದ ತಂಡಗಳಿಗೆ ಟ್ರೋಫಿ ಕೊಡ್ತಾರಲ್ಲ ಹಾಗೇ. ಆದ್ರೆ ಪ್ರಶ್ನೆ ಅದಲ್ಲ. ಒಂದ್ಕಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಗೇ ಪಾಕಿಸ್ತಾನ ಸರ್ಕಾರದಲ್ಲಿ ಆಂತರಿಕ ಸಚಿವರೂ ಆಗಿದ್ದಾರೆ. ಌಂಡ್ ಕಳೆದ ವರ್ಷ ಪೆಹಲ್ಗಾಮ್ ಅಟ್ಯಾಕ್ ಬಗ್ಗೆ ಪಾಕಿಸ್ತಾನದ ಆಂತರಿಕ ಸಚಿವರಾಗಿ ನಖಿ ಪಂದ್ಯಾವಳಿಯ ಸಮಯದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ರು. ಇದ್ರಿಂದ ಅಸಮಾಧಾಗೊಂಡಿದ್ದ ಭಾರತದ ಆಟಗಾರರು ನಖ್ವಿ ಕೈಯಿಂದ ಟ್ರೋಫಿ ತಗೊಳ್ಳಲ್ಲ ಅಂತಾ ಹಠಕ್ಕೆ ಬಿದ್ದಿದ್ರು. ಒಂದು ಗಂಟೆಗೂ ಹೆಚ್ಚು ಕಾಲ ಮೈದಾನದಲ್ಲಿ ಗೊಂದಲ ಉಂಟಾಗಿತ್ತು. ಭಾರತ ಅಂತಿಮವಾಗಿ ನಖ್ವಿ ಕೈಯಿಂದ ಕಪ್ ಪಡೆಯಲ್ಲ ಅನ್ನೋದು ಗೊತ್ತಾದ ಮೇಲೆ ಆಟಗಾರರು ಟ್ರೋಫಿ ಇಲ್ಲದೆ ಪೋಡಿಯಂ ಮೇಲೆ ಸೆಲೆಬ್ರೇಷನ್ ಮಾಡಿದ್ರು. ಮತ್ತೊಂದೆಡೆ ನಖ್ವಿ ಅದೇ ಟ್ರೋಫಿ ಎತ್ಕೊಂಡು ಅಲ್ಲಿಂಗ ಕಾಲ್ಕಿತ್ತಿದ್ರು. ಸ್ಟಿಲ್ ಈವರೆಗೂ ಆ ಟ್ರೋಫಿ ಭಾರತದ ಕೈಸೇರಿಲ್ಲ. ದುಬೈನಲ್ಲಿರುವ ಎಸಿಸಿ ಕಚೇರಿಯಲ್ಲಿ ಉಳಿದಿದೆ. ಹೀಗೆ ವಿವಾದ ಭುಗಿಲೇಳುತ್ತೆ ಅನ್ನೋದು ಗೊತ್ತಿದ್ರೂ ಮೊಹ್ಸಿನ್ ನಖ್ವಿ ಇದನ್ನ ಮತ್ತೆ ತನ್ನ ಲಾಭಕ್ಕೆ ಬಳಸಿಕೊಳ್ಳೋಕೆ ಮುಂದಾಗಿರುವಂಥದ್ದು.
ಭಾರತದ ವಿರುದ್ಧ ಅಧಿಕಾರ ಬಳಸಿಕೊಳ್ಳುತ್ತಿರುವ ನಖ್ವಿ!
2025ರಲ್ಲಿ ಸೂರ್ಯಕುಮಾರ್ ಕ್ಯಾಪ್ಟನ್ಸಿಯಲ್ಲಿ ಭಾರತದ ಆಟಗಾರರು ನಖ್ವಿ ಕೈಯಿಂದ ಟ್ರೋಫಿ ತೆಗೆದುಕೊಳ್ಳದೇ ಇದ್ದದ್ದಕ್ಕೆ ಶೇಪ್ ಔಟ್ ಆಗಿರೋ ನಖ್ವಿ ಈ ಸಲ ಬೇಕಂತಲೇ ಈ ಡ್ರಾಮಾ ಮುಂದುವರಿಸೋಕೆ ಹೊರಟಿದ್ದಾರೆ. ತನ್ನ ಅಧಿಕಾರವನ್ನ ಬಳಸಿಕೊಂಡು ಮತ್ತೆ ತಾನೇ ಟ್ರೋಫಿ ಕೊಡ್ಬೇಕು ಅನ್ನೋ ಹಠಕ್ಕೆ ಬಿದ್ದಿದ್ದಾರೆ. ಮಹಿಳಾ ಏಷ್ಯಾ ಕಪ್ ಎಸಿಸಿ ಆಯೋಜಿಸುವ ಪಂದ್ಯಾವಳಿಯಾಗಿರುವುದರಿಂದ, ಎಸಿಸಿ ಅಧ್ಯಕ್ಷ ಸ್ಥಾನದ ಕಾರಣದಿಂದಾಗಿ ನಖಿ ಅವರು ವಿಜೇತರಿಗೆ ಟ್ರೋಫಿಯನ್ನು ಪ್ರದಾನ ಮಾಡುವ ಹಕ್ಕನ್ನು ಹೊಂದಿದ್ದಾರೆ. ಅಂದರೆ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಫೈನಲ್ ನಲ್ಲಿ ಪ್ರಶಸ್ತಿ ಗೆದ್ದರೆ ಬಹುಶಃ ಇದು ಭಾರತದ ಮಡಿಲಿಗೆ ಸೇರೋದು ಕಷ್ಟ ಇದೆ. ದುಬೈನಲ್ಲಿ ಮತ್ತೊಂದು ಹೈಡ್ರಾಮಾ ಕ್ರಿಯೇಟ್ ಆಗಲಿದೆ. ಅದೂ ಅಲ್ದೇ ಬಿಸಿಸಿಐ ಈ ಬಗ್ಗೆ ಯಾವುದೇ ಕ್ಲಾರಿಟಿ ನೀಡಿಲ್ಲ. ನಖ್ವಿ ಕೈಯಿಂದ ಟ್ರೋಫಿ ತಗೊಳ್ಬೇಕಾ ಬೇಡ್ವಾ ಅನ್ನೋ ಬಗ್ಗೆ ನಿರ್ಧಾರ ಆಗಿಲ್ಲ. ಹೀಗಾಗಿ ಈ ಸಲ ಏನಾಗುತ್ತೆ ಅನ್ನೋದೇ ಬಾರೀ ಕುತೂಹಲ ಮೂಡಿಸಿದೆ.

ನೋಡಿರಿ

