ಕಾವೇರಿ ಜಲಾನಯನ ಪ್ರದೇಶದಲ್ಲಿ ನಿಂತ ಮಳೆ – ಕೆಆರ್ಎಸ್ ಒಳಹರಿವಿನಲ್ಲಿ ಮತ್ತೆ ಭಾರಿ ಕುಸಿತ
ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ದುರ್ಬಲವಾಗಿದೆ. ಇದರಿಂದಾಗಿ ಜಲಾಶಯಗಳಲ್ಲಿಯೂ ನೀರಿನ ಮಟ್ಟ ಭಾರಿ ಇಳಿಕೆಯಾಗಿದೆ. ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಕೆಆರ್ಎಸ್ ಡ್ಯಾಂನಲ್ಲಿ ಕೂಡ ಒಳಹರಿವಿನ ಪ್ರಮಾಣ ಮತ್ತೆ ಇಳಿಕೆಯಾಗಿದೆ.
ಹೀಗಾಗಿ ಕಳೆದ ಮೂರು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿತ್ತು. ಹೀಗಾಗಿ ಕೆಆರ್ಎಸ್ ಡ್ಯಾಂ ಒಳಹರಿವಿನ ಪ್ರಮಾಣ ಹೆಚ್ಚಾಗಿತ್ತು. ಇದೀಗ ಮಳೆ ಕಡಿಮೆಯಾದ ಪರಿಣಾಮ ಕೆಆರ್ಎಸ್ ಡ್ಯಾಂಗೆ ಹರಿದು ಬರುತ್ತಿದ್ದ ನೀರಿನ ಒಳಹರಿವಿನ ಪ್ರಮಾಣ ಮತ್ತೆ ಕುಸಿತ ಕಂಡಿದೆ.
ಇದನ್ನೂ ಓದಿ: ದುರ್ಬಲವಾಯ್ತು ನೈರುತ್ಯ ಮುಂಗಾರು! – ಉ.ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಳ
ಮಂಗಳವಾರ 11,800 ಕ್ಯೂಸೆಕ್ ಮತ್ತು ಬುಧವಾರ 9,052 ಕ್ಯೂಸೆಕ್ ಒಳ ಹರಿವು ಇತ್ತು. ಕಳೆದ ಮೂರು ದಿನಗಳಿಂದ ಒಳಹರಿವಿನ ಪ್ರಮಾಣ ಹೆಚ್ಚಿದ್ದರಿಂದ ಡ್ಯಾಂ ನೀರಿನ ಮಟ್ಟ 100 ಅಡಿಗಳಷ್ಟು ಏರಿಕೆ ಕಂಡಿತ್ತು. ಅಷ್ಟರಲ್ಲೇ ಈಗ ಮತ್ತೆ ಒಳಹರಿವು ಕುಸಿದಿದೆ. ಗುರುವಾರ ಒಳಹರಿವು 5,861 ಕ್ಯೂಸೆಕ್ ಗೆ ಇಳಿಕೆಯಾಗಿದೆ.
ಕೆಲವು ದಿನಗಳಿಂದ 97 ಅಡಿಗೆ ಕುಸಿದಿದ್ದ ನೀರಿನ ಮಟ್ಟ. 20 ಟಿಎಂಸಿಯಿಂದ 23 ಟಿಎಂಸಿಗೆ ಏರಿಕೆಯಾಗಿದೆ. ಪ್ರಸ್ತುತ ಡ್ಯಾಂನಿಂದ ತಮಿಳುನಾಡಿಗೆ 1489 ಕ್ಯೂಸೆಕ್ ಬಿಡುಗಡೆ ಮಾಡಲಾಗುತ್ತಿದೆ.
ಕೆಆರ್ಎಸ್ ಡ್ಯಾಂ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ – 124.80 ಅಡಿಗಳು
- ಇಂದಿನ ಮಟ್ಟ – 100.82 ಅಡಿಗಳು
- ಗರಿಷ್ಠ ಸಾಮಥ್ರ್ಯ – 49.452 ಟಿಎಂಸಿ
- ಇಂದು ಸಂಗ್ರಹ ನೀರು – 23.460 ಟಿಎಂಸಿ
- ಒಳ ಹರಿವು – 5861 ಕ್ಯೂಸೆಕ್
- ಹೊರ ಹರಿವು – 1489 ಕ್ಯೂಸೆಕ್