ಜನಾಂಗೀಯ ಹಿಂಸಾಚಾರದಲ್ಲಿ ಬೆಂದುಹೋಗಿರುವ ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ, ಬಾಂಬ್ ಸ್ಫೋಟ – 4 ನಾಗರಿಕರು ನಾಪತ್ತೆ!

ಜನಾಂಗೀಯ ಹಿಂಸಾಚಾರದಲ್ಲಿ ಬೆಂದುಹೋಗಿರುವ ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ, ಬಾಂಬ್ ಸ್ಫೋಟ – 4 ನಾಗರಿಕರು ನಾಪತ್ತೆ!

ಜನಾಂಗೀಯ ಹಿಂಸಾಚಾರದಲ್ಲಿ ಬೆಂದು ಹೋಗಿರುವ ಮಣಿಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬರುತ್ತಿದೆ. ಏಕಾಏಕಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಕುಂಬಿ ವಿಧಾನಸಭಾ ಕ್ಷೇತ್ರದ ನಾಲ್ವರು ಬಿಷ್ಣುಪುರ ಮತ್ತು ಚುರಚಂದಪುರ ಜಿಲ್ಲೆಗಳ ಪಕ್ಕದ ಬೆಟ್ಟಗಳ ಬಳಿ ಮರ ಸಂಗ್ರಹಿಸಲು ಹೋಗಿದ್ದರು. ಆದರೆ ಅವರು ಹಿಂತಿರುಗಿಲ್ಲ. ನಾಪತ್ತೆಯಾಗಿರುವವರನ್ನು ದಾರಾ ಸಿಂಗ್, ಇಬೊಮ್ಚಾ ಸಿಂಗ್, ರೊಮೈನ್ ಸಿಂಗ್ ಮತ್ತು ಆನಂದ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸಾಲು ಸಾಲು ರಜೆ – ಟಿಕೆಟ್‌ ದರ ದುಪ್ಪಟ್ಟು ಮಾಡಿದ ಖಾಸಗಿ ಬಸ್ ಮಾಲಕರು!

ಏತನ್ಮಧ್ಯೆ, ಉಗ್ರರು ಗುಂಡಿನ ದಾಳಿ ನಡೆಸಿದ್ದು ಬಿಷ್ಣುಪುರ್ ಜಿಲ್ಲೆಯ ಹಾತಕ್ ಗ್ರಾಮದಲ್ಲಿ ಬಾಂಬ್ ದಾಳಿ ನಡೆದಿದೆ. 100ಕ್ಕೂ ಹೆಚ್ಚು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪಡೆದ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪ್ರತಿದಾಳಿ ನಡೆಸಿದರು. ಯಾರೂ ಗಾಯಗೊಂಡಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ. ನಾಪತ್ತೆಯಾದರು ಭಯೋತ್ಪಾದಕರ ವಶದಲ್ಲಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಮತ್ತು ಕೇಂದ್ರ ಪಡೆಗಳಿಂದ ಸಹಾಯವನ್ನು ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ. ನಾಪತ್ತೆಯಾದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

2023ರ ಮೇ 3ರಂದು ಮಣಿಪುರದಲ್ಲಿ ಜಾತಿ ಹಿಂಸಾಚಾರ ಭುಗಿಲೆದ್ದಿತು. ಅದರ ನಂತರ ಇದುವರೆಗೆ 180ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ನೂರಾರು ಜನರು ಗಾಯಗೊಂಡಿದ್ದಾರೆ. ಹಿಂಸಾಚಾರದಿಂದ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳಿಗೂ ಹಾನಿಯಾಗಿದೆ. ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೈಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿದಾಗ ಹಿಂಸಾಚಾರ ಪ್ರಾರಂಭವಾಯಿತು. ಹಿಂಸಾಚಾರದ ಮೊದಲು, ಕುಕಿ ಗ್ರಾಮಸ್ಥರನ್ನು ಮೀಸಲು ಅರಣ್ಯ ಭೂಮಿಯಿಂದ ಹೊರಹಾಕುವ ಬಗ್ಗೆ ಉದ್ವಿಗ್ನತೆ ಇತ್ತು. ಇದು ಹಲವಾರು ಸಣ್ಣ ಪ್ರತಿಭಟನೆಗೆ ಕಾರಣವಾಯಿತು.

Shwetha M