ವಾಟ್ಸಾಪ್‌ ನಿಂದ ಮತ್ತೊಂದು ಫೀಚರ್ – ಬಳಕೆದಾರರಿಗೆ ಪರಿಚಯಿಸುತ್ತಿದೆ ವಾಯ್ಸ್​ ನೋಟ್​!

ವಾಟ್ಸಾಪ್‌ ನಿಂದ ಮತ್ತೊಂದು ಫೀಚರ್ – ಬಳಕೆದಾರರಿಗೆ ಪರಿಚಯಿಸುತ್ತಿದೆ ವಾಯ್ಸ್​ ನೋಟ್​!

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಆಗಾಗ ಅಪ್ಡೇಟ್ ಆಗುತ್ತಲೇ ಇರುತ್ತೆ. ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಸೇರಿದಂತೆ ಎಲ್ಲಾ ವಾಟ್ಸ್​ಆ್ಯಪ್ ಆವೃತ್ತಿಗಳು ಹೊಸ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೊಳ್ಳಲು ಪ್ರತಿ ತಿಂಗಳು ಹೊಸ ಸಿಸ್ಟಮ್ ನವೀಕರಣಗಳನ್ನು ಸ್ವೀಕರಿಸುತ್ತವೆ. ಇದೀಗ ವಾಟ್ಸಾಪ್ ಮತ್ತೊಂದು ಫೀಚರ್‌ ಅನ್ನು ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ.

ಇದನ್ನೂ ಓದಿ: ಮಾತು-ಮಾತಿಗೂ ಮಕ್ಕಳಿಗೆ ಹೊಡೆಯೋಕು ಮೊದ್ಲು ಈ ವಿಚಾರ ತಿಳಿಯಲೇ ಬೇಕು!

ವಾಟ್ಸಾಪ್​ ತನ್ನ ಬಳಕೆದಾರರಿಗೆ ಅನುಕೂಲ ಕಲ್ಪಿಸಲು ಇತ್ತೀಚೆಗೆ ವಾಟ್ಸಾಪ್​ ಚಾನೆಲ್ಸ್​, ಸಿಂಗಲ್​ ಡಿವೈಸ್​ನಲ್ಲಿ ಮಲ್ಟಿಪಲ್​ ವಾಟ್ಸಾಪ್​ ಅಕೌಂಟ್​ಗಳನ್ನು ಬಳಸುವ “ಮಲ್ಟಿ ಅಕೌಂಟ್​ ಫ್ಯೂಚರ್​” ಕುರಿತು ಪ್ರಕಟಿಸಿತ್ತು. ಮುಂದುವರಿದು “ವ್ಯೂ ಒನ್ಸ್​” ತಂದಿದ್ದು, ಈಗ ಮೆಟಾ ಮಾಲೀಕತ್ವದ ವಾಟ್ಸ್​ಆಪ್​ ಅದೇ ಮಾದರಿ “ವಾಯ್ಸ್​ ನೋಟ್​” ಅಪ್​ಡೇಟ್​ ತರಲು ಯೋಚಿಸುತ್ತಿದೆ.

ಈ ಹೊಸ ಫೀಚರ್‌ ಬಳಕೆದಾರರ ಭದ್ರತೆಗಾಗಿ ವಾಯ್ಸ್​ ನೋಟ್ಸ್​ ಪರಿಚಯಿಸಲು ವಾಟ್ಸ್​ ಆಪ್​ ಕಾರ್ಯೋನ್ಮುಖವಾಗಿದೆ. ಈ ಅಪ್​ಡೇಟ್​ ಬಳಕೆಗೆ ಬಂದರೆ ವಾಯ್ಸ್​ ರೆಕಾರ್ಡ್‌ಗಳು​ ಮೊಬೈಲ್​ಗಳಲ್ಲಿ ಸ್ಟೋರೇಜ್​ ಆಗದಂತೆ ತಡೆಯುತ್ತದೆ. ಉದಾಹರಣೆಗೆ ‘ಎ’ ಎಂಬ ವಾಟ್ಸಾಪ್​ ಬಳಕೆದಾರ ‘ಬಿ’ ಎಂಬ ಮತ್ತೊಬ್ಬ ಬಳಕೆದಾರನಿಗೆ ಆಡಿಯೋ ಫೈಲ್​ ಒಂದನ್ನು ಕಳುಹಿಸಿದ್ರೆ, ಸಾಧಾರಣವಾಗಿ ಅಂತಹ ವಾಯ್ಸ್​ ಫೈಲ್ಸ್​ ಮೊಬೈಲ್​ನಲ್ಲಿ ಸ್ಟೋರೇಜ್​ ಆಗುವುದರ ಜತೆಗೆ ಅನೇಕ ಭದ್ರತಾ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಇದನ್ನು ತಡೆಯಲು ವಾಯ್ಸ್​ ನೋಟ್ಸ್​ ಹೆಸರಲ್ಲಿ ಮೆಸೇಜ್​ ಅಪ್ಲಿಕೇಶನ್ ಪರಿಚಯಿಸುತ್ತಿದೆ. ಇದರೊಂದಿಗೆ ವಾಟ್ಸಾಪ್​ನಲ್ಲಿ ಕಳುಹಿಸಿದ ಅಥವಾ ರಿಸೀವ್​ ಮಾಡಿಕೊಂಡ ಆಡಿಯೋ ಫೈಲ್ಸ್​ ಒಮ್ಮೆ ಓಪನ್​ ಮಾಡಿದರೆ ಸಾಕು, ಬಳಿಕ ಅವು ತನ್ನಂತಾನೇ ಕಣ್ಮರೆಯಾಗುತ್ತವೆ.

Shwetha M