ಬಂಗಾಳಕೊಲ್ಲಿಯಲ್ಲಿ ಮತ್ತೆ ಸಂಭವಿಸಿದ ಭೂಕಂಪ – 7 ತಿಂಗಳಲ್ಲಿ 3 ಬಾರಿ ಸಂಭವಿಸಿದ ಭೂಕಂಪ..!

ಬಂಗಾಳಕೊಲ್ಲಿಯಲ್ಲಿ ಮತ್ತೆ ಸಂಭವಿಸಿದ ಭೂಕಂಪ – 7 ತಿಂಗಳಲ್ಲಿ 3 ಬಾರಿ ಸಂಭವಿಸಿದ ಭೂಕಂಪ..!

ಬಂಗಾಳಕೊಲ್ಲಿಯಲ್ಲಿ ಸೋಮವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ  ಪ್ರಕಾರ 3.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಇದೇ ಪ್ರದೇಶದಲ್ಲಿ ಕಳೆದ 7 ತಿಂಗಳಲ್ಲಿ ಕನಿಷ್ಠ ಮೂರು ಬಾರಿ ಭೂಕಂಪ ಸಂಭವಿಸಿದೆ.

ಇದನ್ನೂ ಓದಿ:  ಗ್ಯಾರಂಟಿಗಳ ಬಳಿಕ ಜನರಿಗೆ ಬೆಲೆ ಏರಿಕೆ ಶಾಕ್‌! – ಜುಲೈ 1 ರಿಂದ ವಿದ್ಯುತ್‌ ದರ ಏರಿಕೆ

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ಸೋಮವಾರ ಬೆಳಗ್ಗೆ ಬಂಗಾಳ ಕೊಲ್ಲಿಯಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು 15.32 ಅಕ್ಷಾಂಶ ಮತ್ತು 92.84 ರೇಖಾಂಶದಲ್ಲಿ ಕೇಂದ್ರೀಕೃತವಾಗಿತ್ತು. 10 ಕಿಲೋಮೀಟರ್ ಆಳವಿರುವ ಭಾರತದ ಬಂಗಾಳ ಕೊಲ್ಲಿಯಲ್ಲಿ ಭೂಕಂಪ ಸಂಭವಿಸಿದೆ. 2023 ಜೂನ್ 05ರಂದು 07:40:23ಕ್ಕೆ 3.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಬಂಗಾಳಕೊಲ್ಲಿಯಲ್ಲಿ ಕೇಂದ್ರ ಬಿಂದು ಇದೆ ಎಂದು ಎನ್ ಸಿಎಸ್ ಟ್ವೀಟ್ ಮಾಡಿದೆ. ಇದೇ ಪ್ರದೇಶದಲ್ಲಿ ಕಳೆದ 7 ತಿಂಗಳಲ್ಲಿ ಕನಿಷ್ಠ ಮೂರು ಭೂಕಂಪ ಸಂಭವಿಸಿದೆ. ಇದಕ್ಕೂ ಮೊದಲು ಜನವರಿ 1, 2023 ರಂದು ರಿಕ್ಟರ್ ಮಾಪಕದಲ್ಲಿ 4.5 ರ ತೀವ್ರತೆಯ ಭೂಕಂಪ ಇಲ್ಲಿ ಸಂಭವಿಸಿದ್ದು 36 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿತ್ತು. ಬೆಳಿಗ್ಗೆ 10:57 ಭೂಮಿ ಕಂಪಿಸಿದ್ದು ಅದೇ ದಿನ, ರಿಕ್ಟರ್ ಮಾಪಕದಲ್ಲಿ 3.8 ರ ತೀವ್ರತೆಯ ಮತ್ತೊಂದು ಭೂಕಂಪವು ಹರಿಯಾಣದ ಜಜ್ಜರ್‌ನ ವಾಯುವ್ಯದಲ್ಲಿ 1:19ಕ್ಕೆ ಸಂಭವಿಸಿದೆ. ಕಳೆದ ವರ್ಷ ಡಿಸೆಂಬರ್ 5ರಂದು ರಿಕ್ಟರ್ ಮಾಪಕದಲ್ಲಿ 5.1 ರ ತೀವ್ರತೆಯ ಭೂಕಂಪ ಸಂಭವಿಸಿದೆ.ಬಂಗಾಳಕೊಲ್ಲಿಯಲ್ಲಿ 10 ಕಿ.ಮೀ ಆಳದಲ್ಲಿ ಬೆಳಗ್ಗೆ 8:32ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ. ಈ ಬಾರಿ, ಭೂಕಂಪದ ಸ್ಥಳವು ಒಡಿಶಾಕ್ಕೆ ಸಮೀಪದಲ್ಲಿದೆ, ಏಕೆಂದರೆ ಇದು ಪುರಿ (ಪೂರ್ವ) ಮತ್ತು ಭುವನೇಶ್ವರ (ಪೂರ್ವ-ಆಗ್ನೇಯ) ನಿಂದ 421 ಕಿಮೀ ಮತ್ತು 434 ಕಿಮೀ ದೂರದಲ್ಲಿದೆ. ಆ ಸಮಯದಲ್ಲಿ, ಢಾಕಾ ಮತ್ತು ಬಾಂಗ್ಲಾದೇಶದ ಇತರ ಭಾಗಗಳಲ್ಲಿ ಕಂಪನದ ಅನುಭವ ಆಗಿದೆ ಎನ್ನಲಾಗ್ತಿದೆ.

suddiyaana