ನಮೀಬಿಯಾದ ಮತ್ತೊಂದು ಚೀತಾ ಕಾಡಿಗೆ ರಿಲೀಸ್ – ಕುನೋ ಅರಣ್ಯದಲ್ಲಿ ಚೀತಾಗಳ ಸಂಖ್ಯೆ 10 ಕ್ಕೆ ಏರಿಕೆ

ನಮೀಬಿಯಾದ ಮತ್ತೊಂದು ಚೀತಾ ಕಾಡಿಗೆ ರಿಲೀಸ್ – ಕುನೋ ಅರಣ್ಯದಲ್ಲಿ ಚೀತಾಗಳ ಸಂಖ್ಯೆ 10 ಕ್ಕೆ ಏರಿಕೆ

ಭೋಪಾಲ್: ಕುನೋ ರಾಷ್ಟ್ರೀಯ ಉದ್ಯಾನವನ (ಕೆಎನ್ ಪಿ) ನಲ್ಲಿ ಮತ್ತೊಂದು ಚೀತಾವನ್ನು ಕುನೋ ಅರಣ್ಯ ಪದೇಶಕ್ಕೆ ಬಿಡಲಾಗಿದೆ. ಈ ಮೂಲಕ ಉದ್ಯಾನವನದ ದೊಡ್ಡ ಆವರಣದಲ್ಲಿರುವ ಚೀತಾಗಳ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಬಿಜೆಪಿಗೆ ವಿರೋಧ ಪಕ್ಷದ ನಾಯಕನ ‘ಗ್ಯಾರಂಟಿ‘ಯೂ ಇಲ್ಲ! ಈ ಹುದ್ದೆ ಎಷ್ಟಕ್ಕೆ ಮಾರಾಟವಾಗುತ್ತಿದೆ? – ಕಾಂಗ್ರೆಸ್‌ ಟ್ವೀಟಾಸ್ತ್ರ

ಚೀತಾ ಉಪಕ್ರಮದ ಅಡಿಯಲ್ಲಿ ಕರೆತರಲಾಗಿದ್ದ ಚೀತಾಗಳ ಪೈಕಿ ಪವನ್  ಎಂಬ ಗಂಡು ಚೀತಾವನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಾಗಿದೆ. ಆ ಮೂಲಕ ದೇಶದಲ್ಲಿ ಈ ವರೆಗೂ 10 ಚೀತಾಗಳನ್ನು ಕುನೋ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ. ಎಲ್ಲಾ ಚೀತಾಗಳು ಆರೋಗ್ಯ ಮತ್ತು ಕುನೊ ರಾಷ್ಟ್ರೀಯ ಉದ್ಯಾನದ ಗಡಿಯಲ್ಲಿ ಮುಕ್ತವಾಗಿ ವಿಹರಿಸುತ್ತಿವೆ ಎಂದು ಶಿಯೋಪುರ ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್ ಕುಮಾರ್ ವರ್ಮಾ  ಅವರು ಮಾಹಿತಿ ನೀಡಿದ್ದಾರೆ.

ಕುನೋ ರಾಷ್ಟ್ರೀಯ ಉದ್ಯಾನವನದ ತೆರೆದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಿದ್ದ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ಚೀತಾಗಳ ನಡುವೆ ಕಾದಾಟ ನಡೆದಿದ್ದು, ಪರಿಣಾಮ ಆಫ್ರಿಕನ್ ಗಂಡು ಚೀತಾ ಅಗ್ನಿ ಗಾಯಗೊಂಡಿದೆ. ಕುನೋ ರಾಷ್ಟ್ರೀಯ ಉದ್ಯಾನವನದ ತೆರೆದ ಅರಣ್ಯ ಪ್ರದೇಶದಲ್ಲಿ ಎರಡು ಗುಂಪಿನ ಚೀತಾಗಳ ನಡುವೆ ಘರ್ಷಣೆ ನಡೆದ ಬಳಿಕ ಅಗ್ನಿ ಎಂಬ ಗಂಡು ಚೀತಾಗೆ ಗಾಯಗೊಂಡಿದೆ. ಗಾಯಗೊಂಡ ಅಗ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

suddiyaana