ಡ್ರೋನ್‌ ಪ್ರತಾಪ್‌ ಗೆ ಮತ್ತೆ ಬಂಧನದ ಭೀತಿ – ಹೊಸ ವಿವಾದ ಏನು?  

ಡ್ರೋನ್‌ ಪ್ರತಾಪ್‌ ಗೆ ಮತ್ತೆ ಬಂಧನದ ಭೀತಿ – ಹೊಸ ವಿವಾದ ಏನು?  

ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ಸ್ಟೋಟ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ಡ್ರೋಣ್ ಪ್ರತಾಪ್​​ ಜಾಮೀನು ಮೂಲಕ ಹೊರಬಂದಿದ್ದಾರೆ. ಇದೀಗ ಡ್ರೋನ್‌ ಪ್ರತಾಪ್‌ ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಪ್ರತಾಪ್ ಮೇಲೆ ಮತ್ತೊಂದು ಕೇಸ್‌ ದಾಖಲಾಗಿದೆ.

ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್ – ಮೃತ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಸೋಡಿಯಂ ರಸಾಯನಿಕ ವಿಚಾರದಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಡ್ರೋಣ್ ಪ್ರತಾಪ್​ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. 9 ದಿನ ಜೈಲುವಾಸ ಅನುಭವಿಸಿದ್ದ ಪ್ರತಾಪ್​ಗೆ ಮತ್ತೆ ಜೈಲು ಸೇರುವ ಆತಂಕ ಎದುರಾಗಿದೆ. ಪ್ರತಾಪ್ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಪ್ರಯಾಗ್ ದೂರು ನೀಡಿದ್ದಾರೆ.

ಪಶು ವೈದ್ಯರಾಗಿರುವ ಪ್ರಯಾಗ್ ಅವರು, ಪ್ರತಾಪ್ ವಿರುದ್ಧ ಎಡಿಜಿಪಿ ಹಿತೇಂದ್ರ ಕುಮಾರ್​ಗೆ ದೂರು ನೀಡಿದ್ದಾರೆ. ಲೈಸೆನ್ಸ್ ಇಲ್ಲದೇ ಬೇರೆಯವರಿಗೆ ಡ್ರೋಣ್ ಹಾರಿಸಲು ಪ್ರತಾಪ್ ಪ್ರಚೋದನೆ ನೀಡಿದ್ದಾರೆ. ಲೈಸೆನ್ಸ್ ಇಲ್ಲದೇ ಡ್ರೋಣ್ ಹಾರಿಸಿ ಅದರ ಸಂಶೋಧನೆ ಮಾಡಿದ್ದೇನೆಂದು ಸುಳ್ಳು ಹೇಳುತ್ತಿದ್ದಾರೆ. ಕೃಷಿ ಮಾಡುವ ರೈತರಿಗೆ ಡ್ರೋಣ್ ಹೆಸರಲ್ಲಿ ಔಷಧಿ ಸಿಂಪಡಿಕೆ ಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Shwetha M