ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್ – ಐಪಿಎಲ್‌ನಿಂದಲೂ ಸ್ಟಾರ್ ಬೌಲರ್ ಶಮಿ ಔಟ್?

ಗುಜರಾತ್ ಟೈಟಾನ್ಸ್  ತಂಡಕ್ಕೆ ಮತ್ತೊಂದು ಬಿಗ್ ಶಾಕ್ – ಐಪಿಎಲ್‌ನಿಂದಲೂ ಸ್ಟಾರ್ ಬೌಲರ್ ಶಮಿ ಔಟ್?

ಟೀಮ್ ಇಂಡಿಯಾದ ಸ್ಟಾರ್ ಬೌಲರ್, ವಿಶ್ವಕಪ್ ಹೀರೋ ಮೊಹಮ್ಮದ್ ಶಮಿ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಜೊತೆಗೆ ಗುಜರಾತ್ ಟೈಟಾನ್ಸ್ ಟೀಮ್‌ಗೂ ಬಿಗ್ ಶಾಕ್ ಸಿಕ್ಕಿದೆ. ಏನಂದರೆ, ಏಕದಿನ ವಿಶ್ವಕಪ್ ನಂತರ ಇಂಜುರಿ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಇದೀಗ ಐಪಿಎಲ್​ನಿಂದಲೂ ಹೊರಬಿದ್ದಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮಧ್ಯೆ ಸೆಂಚೂರಿ ರೇಸ್ – ಕ್ರಿಕೆಟ್ ದಿಗ್ಗಜರಲ್ಲಿ ಗೆಲ್ಲೋದು ಯಾರು?

ಟೀಮ್ ಇಂಡಿಯಾ ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಶಮಿ ಐಪಿಎಲ್​ನಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್ ಆರಂಭಕ್ಕೂ ಮುನ್ನ ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೊಂದಿಗೆ ಟ್ರೇಡ್ ಮಾಡಿಕೊಂಡು ಕೊಂಚ ಹಿನ್ನಡೆ ಅನುಭವಿಸಿದ್ದ ಗುಜರಾತ್ ಟೈಟಾನ್ಸ್  ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಇದಾಗಿದೆ. ಕಳೆದೆರಡು ಆವೃತ್ತಿಗಳಿಂದ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಶಮಿ, ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದರು. ಆದರೀಗ ಶಮಿ ಅಲಭ್ಯತೆ ಗುಜರಾತ್ ತಂಡಕ್ಕೆ ಸಂಕಷ್ಟ ತಂದೊಡ್ಡಿದೆ.

ಕಾಲು ನೋವಿನಿಂದ ಬಳಲುತ್ತಿರುವ ಶಮಿ, ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ. 2022 ರಲ್ಲಿ ಗುಜರಾತ್ ಟೈಟಾನ್ ತಂಡವನ್ನು ಸೇರಿಕೊಂಡ ಶಮಿ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ ಸೀಸನ್​ನಲ್ಲಿ ಶಮಿ ಒಟ್ಟು 20 ವಿಕೆಟ್​ಗಳನ್ನು ಕಬಳಿಸಿ, ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡಿದ್ದರು. ಆ ನಂತರ 2023 ರಲ್ಲಿ ನಡೆದ ಐಪಿಎಲ್​ನಲ್ಲಿ ಮತ್ತೊಮ್ಮೆ ಗುಜರಾತ್ ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿದ್ದ ಶಮಿ, ಈ ಸೀಸನ್​ನಲ್ಲೂ ಆಡಿದ 17 ಪಂದ್ಯಗಳಲ್ಲಿ 28 ವಿಕೆಟ್​ಗಳನ್ನು ಪಡೆದು ತಂಡ ಫೈನಲ್​ಗೇರುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಸಿಎಸ್​ಕೆ ಎದುರು ಸೋತಿದ್ದ ಗುಜರಾತ್ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಕೈಚೆಲ್ಲಿತ್ತು. ಇದೀಗ ಇಡೀ ಸೀಸನ್​ನಿಂದ ಶಮಿ ಹೊರಬಿದ್ದಿರುವುದು ಗುಜರಾತ್ ಟೈಟಾನ್ಸ್ ತಂಡವನ್ನು ಸಂಕಷ್ಟಕ್ಕೆ ದೂಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೇಲೆ ಹೇಳಿದಂತೆ ತಂಡದ ಯಶಸ್ವಿ ನಾಯಕ ಹಾರ್ದಿಕ್ ಪಾಂಡ್ಯ ಈಗಾಗಲೇ ತಂಡ ತೊರೆದಿದ್ದಾರೆ. ಇದೀಗ ಶಮಿ ಆಡದ ಕಾರಣ ಮತ್ತೊಬ್ಬ ಅನುಭವಿ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಗುಜರಾತ್ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ. ಇದೆಲ್ಲದರ ನಡುವೆ ಕೇನ್ ವಿಲಿಯಮ್ಸನ್​ರಂತಹ ಅನುಭವಿ ಆಟಗಾರ ತಂಡದಲ್ಲಿದ್ದರೂ ಗುಜರಾತ್ ಫ್ರಾಂಚೈಸಿ, ಈ ಬಾರಿ ತಂಡದ ನಾಯಕತ್ವವನ್ನು ಶುಭ್​ಮನ್​ ಗಿಲ್​ಗೆ ನೀಡಿದೆ. ಇದೀಗ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಕಣಕ್ಕಿಳಿಯುತ್ತಿರುವ ಗಿಲ್, ಈ ಇಬ್ಬರು ಅನುಭವಿಗಳ ಅಲಭ್ಯತೆಯಲ್ಲಿ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಗುಜರಾತ್ ಟೈಟಾನ್ಸ್ ಈಗ ಶಮಿ ಬದಲಿಗೆ ಇತರ ವೇಗದ ಬೌಲರ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದೆ. ಆದರೆ, ವೇಗದ ಬೌಲರ್‌ಗಳಾದ ಉಮೇಶ್ ಯಾದವ್, ಕಾರ್ತಿಕ್ ತ್ಯಾಗಿ ಮತ್ತು ಸ್ಪೆನ್ಸರ್ ಜಾನ್ಸನ್ ತಂಡದಲ್ಲಿದ್ದಾರೆ. ಆದರೆ ಪ್ರಸ್ತುತ ಉಮೇಶ್ ಯಾದವ್ ಫಾರ್ಮ್​ನಲ್ಲಿಲ್ಲ. ಕಾರ್ತಿಕ್ ತ್ಯಾಗಿ ಕೂಡ ಯುವ ಬೌಲರ್ ಆಗಿದ್ದು, ಅವರಿಗೂ ಅನುಭವದ ಕೊರತೆ ಇದೆ. ಇತ್ತ ಸ್ಪೆನ್ಸರ್ ಜಾನ್ಸನ್​ಗೂ ಕೂಡ ಐಪಿಎಲ್​ನಲ್ಲಿ ಹೆಚ್ಚು ಆಡಿದ ಅನುಭವವಿಲ್ಲ. ಹೀಗಾಗಿ ಶಮಿ ಕೊರತೆಯನ್ನು ಸರಿದೂಗಿಸುವುದು ಗುಜರಾತ್ ತಂಡಕ್ಕೆ ಅಸಾಧ್ಯವಾಗಿದೆ.

Sulekha