ರುತುರಾಜ್ ಪ್ಲೇಸ್​ಗೆ ಮತ್ತೊಬ್ಬ ಬ್ಯಾಟ್ಸ್​ಮನ್! – ಮೂವರು ಬ್ಯಾಟ್ಸ್​​ಮನ್​ಗಳ ಪೈಕಿ ಯಾರನ್ನು ಆಯ್ಕೆ ಮಾಡ್ತಾರೆ ರೋಹಿತ್ ಶರ್ಮಾ?  

ರುತುರಾಜ್ ಪ್ಲೇಸ್​ಗೆ ಮತ್ತೊಬ್ಬ ಬ್ಯಾಟ್ಸ್​ಮನ್! – ಮೂವರು ಬ್ಯಾಟ್ಸ್​​ಮನ್​ಗಳ ಪೈಕಿ ಯಾರನ್ನು ಆಯ್ಕೆ ಮಾಡ್ತಾರೆ ರೋಹಿತ್ ಶರ್ಮಾ?  

ಡಿಸೆಂಬರ್ 26ರಿಂದ ಭಾರತ ಮತ್ತು ಸೌತ್ ಆಫ್ರಿಕಾ ಮಧ್ಯೆ ಫಸ್ಟ್ ಟೆಸ್ಟ್ ಮ್ಯಾಚ್ ನಡೆಯಲಿದೆ. 2 ಮ್ಯಾಚ್​ಗಳ ಟೆಸ್ಟ್​ ಸೀರಿಸ್​ಗೆ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿರ್ತಾರೆ. ಈಗಾಗ್ಲೇ ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್ ದಕ್ಷಿಣ ಆಫ್ರಿಕಾದಲ್ಲಿ ಬೀಡು ಬಿಟ್ಟಿದೆ. ಕಳೆದ ಒಂದು ವಾರದಿಂದ ಭರ್ಜರಿಯಾಗಿ ಪ್ರಾಕ್ಟೀಸ್ ನಡೆಸ್ತಿದ್ದಾರೆ. ಓಪನರ್ ರುತುರಾಜ್ ಗಾಯಕ್ವಾಡ್​​ರನ್ನ ಕೂಡ ಟೀಂ ಇಂಡಿಯಾದಿಂದ ರಿಲೀಸ್ ಮಾಡಲಾಗಿದೆ. ಇದಕ್ಕೆ ಕಾರಣವೇನು ಅನ್ನೋ ಮಾಹಿತಿ ಇಲ್ಲಿದೆ..

ಟೆಸ್ಟ್ ಸೀರಿಸ್​ಗೂ ಸೆಲೆಕ್ಟ್ ಆಗಿದ್ದ ಓಪನರ್ ರುತುರಾಜ್ ಗಾಯಕ್ವಾಡ್ ದಕ್ಷಿಣ ಆಫ್ರಿಕಾ ವಿರುದ್ಧ ಆಡ್ತಾ ಇಲ್ಲ. ಗಾಯಕ್ವಾಡ್ ಬೆರಳಿಗೆ ಇಂಜ್ಯೂರಿಯಾಗಿದ್ದು, ಈಗಾಗ್ಲೇ ಭಾರತಕ್ಕೆ ವಾಪಸ್ ಆಗಿದ್ದಾರೆ. ಸೆಕೆಂಡ್ ವಂಡೇ ಮ್ಯಾಚ್ ಸಂದರ್ಭದಲ್ಲಿ ರುತುರಾಜ್ ಗಾಯಕ್ವಾಡ್ ಬೆರಳಿಗೆ ಬಾಲ್ ಬಡಿದು ಇಂಜ್ಯೂರಿಯಾಗಿತ್ತು. ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್​ ಆಡೋಕೆ ರುತುರಾಜ್​ಗೆ ಒಳ್ಳೆ ಅಪಾರ್ಚ್ಯುನಿಟಿ ಸಿಕ್ಕಿತ್ತು. ಅನ್​ಫಾರ್ಚ್ಯುನೇಟ್ಲಿ ಅವರಿಗೆ ಆಡೋಕೆ ಆಗ್ತಾ ಇಲ್ಲ. ಹೀಗಾಗಿ ರುತುರಾಜ್ ಪ್ಲೇಸ್​ಗೆ ಈಗ ಮತ್ತೊಬ್ಬ ಬ್ಯಾಟ್ಸ್​ಮನ್​ನ ರಿಪ್ಲೇಸ್​ಮೆಂಟ್ ಆಗಬೇಕಿದೆ.

ಇದನ್ನೂ ಓದಿ: ಟಿ-20 ಮಾತ್ರವಲ್ಲ, ಏಕದಿನಕ್ಕೂ ಒಬ್ಬ ಬೆಸ್ಟ್ ಫಿನಿಷರ್! – ಟೆಸ್ಟ್​ ಟೀಮ್​ನಲ್ಲೂ ರಿಂಕು ಚಾನ್ಸ್‌ ಪಡೆಯುತ್ತಾರಾ?

ತಮಿಳುನಾಡು ಕ್ರಿಕೆಟರ್​ ಸಾಯಿ ಸುದರ್ಶನ್​ಗೆ ಚಾನ್ಸ್ ಸಿಗುವ ಸಾಧ್ಯತೆ ಇದೆ. ಸಾಯಿ ಸುದರ್ಶನ್ ವಂಡೇ ಸೀರಿಸ್​ನಲ್ಲಿ ಆಡಿದ್ರು. ಟೆಕ್ನಿಕಲಿ ಸೌಂಡ್ ಆಗಿರೋ ಬ್ಯಾಟ್ಸ್​​ಮನ್ ಆಗಿರೋದ್ರಿಂದ ಅವರಿಗೆ ಟೆಸ್ಟ್ ಸ್ಕ್ವಾಡ್​​ನ್ನ ಚಾನ್ಸ್ ಸಿಗುವ ಸಾಧ್ಯತೆ ಇದೆ. ಮತ್ತೊಬ್ಬ ಬ್ಯಾಟ್​​ಮನ್ ಅಂದ್ರೆ ಅಭಿಮನ್ಯು ಈಶ್ವರನ್.. ಯಂಗ್​​ ಬ್ಯಾಟ್ಸ್​​ಮನ್​ ಈಗ ಟೀಂ ಇಂಡಿಯಾ ಡೆಬ್ಯೂಗಾಗಿ ಕಾಯ್ತಾ ಇದ್ದಾರೆ.

28 ವರ್ಷದ ಅಭಿಮನ್ಯು ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ 6,567 ರನ್​ ಹೊಡೆದಿದ್ದಾರೆ. 22 ಸೆಂಚೂರಿ ಕೂಡ ಬಾರಿಸಿದ್ದಾರೆ. ರೇಸ್​​ನಲ್ಲಿರೋ ಮತ್ತೊಬ್ಬ ಪ್ಲೇಯರ್ ಅಂದ್ರೆ ರಜತ್ ಪಾಟೀದಾರ್. ಸೌತ್ ಆಫ್ರಿಕಾ ವಿರುದ್ಧ ವಂಡೇ ಮ್ಯಾಚ್ ಆಡಿದ್ರು. ಆದ್ರೆ ಈಗ ಟೆಸ್ಟ್​ನಲ್ಲಿ ಚಾನ್ಸ್ ಸಿಗುತ್ತೋ ಗೊತ್ತಿಲ್ಲ. ಟೋಟಲಿ ರೋಹಿತ್ ಶರ್ಮಾ ಮುಂದೆ ಮೂವರು ಬ್ಯಾಟ್ಸ್​​ಮನ್​ಗಳ ಆಪ್ಷನ್ ಇದೆ. ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್ ಮತ್ತು ರಜತ್ ಪಾಟೀದಾರ್. ಈ ಪೈಕಿ ರೋಹಿತ್​ ಟೆಸ್ಟ್ ಸ್ಕ್ವಾಡ್​​ಗೆ ಅದ್ಯಾರನ್ನ ಪಿಕ್ ಮಾಡ್ತಾರೋ ನೋಡಬೇಕಿದೆ.

Shwetha M