INDO-PAK ಏಷ್ಯಾಕಪ್ ಟೆನ್ಷನ್ – ನಖ್ವಿ ಕೈಯಿಂದ ಟ್ರೋಫಿ ತಗೊಳ್ತಾರಾ?
2025ರ ಕಪ್ ಸಿಕ್ಕಿಲ್ಲ.. ಈ ಸಲ ಹೇಗೆ?

ಏಷ್ಯನ್ ರಾಷ್ಟ್ರಗಳ ನಡುವಿನ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಇನ್ನೊಂದೇ ವಾರ ಬಾಕಿ. ಈ ಸಲ ಮೆನ್ಸ್ ಅಲ್ಲ. ಮಹಿಳಾಮಣಿಗಳ ನಡುವೆ ಹೈವೋಲ್ಟೇಜ್ ಫೈಟ್ ನಡೆಯಲಿದೆ. ನೆಕ್ಸ್ಟ್ ವೀಕ್ನಿಂದ 10ನೇ ಆವೃತ್ತಿ ದುಬೈನಲ್ಲಿ ಆಯೋಜನೆಗೊಳ್ತಿದೆ. ಆದ್ರೆ ವಿಷ್ಯ ಅದಲ್ಲ. ಭಾರತ ಈ ಸಲ ಚಾಂಪಿಯನ್ ಪಟ್ಟಕ್ಕೇರಿದ್ರೆ ಟ್ರೋಫಿ ಹಸ್ತಾಂತರ ಹೇಗೆ ಅನ್ನೋದು. 2025ರಲ್ಲಿ ಭಾರತ ಮೆನ್ಸ್ ಟೀಂ ಗೆದ್ದ ಟ್ರೋಫಿಯೇ ಇನ್ನೂ ಬಿಸಿಸಿಐ ಕೈ ಸೇರಿಲ್ಲ. ಹೀಗಿರುವಾಗ ಈ ಸಲ ಹೇಗೆ ಅನ್ನೋ ಮಿನಿಯಲ್ ಡಾಲರ್ ಪ್ರಶ್ನೆ ಕಾಡ್ತಿದೆ. ಅದಕ್ಕೆ ಕಾರಣ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷನೂ ಆಗಿರೋ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ.
ಇದನ್ನೂ ಓದಿ : HITಮ್ಯಾನ್ ಸಮರಾಭ್ಯಾಸ ಶುರು – ವಿಶ್ವಕಪ್ ನಲ್ಲಿ ಓಪನರ್ ಸ್ಲಾಟ್ ಫಿಕ್ಸ್
ಮಹಿಳಾ ಟಿ20 ಏಷ್ಯಾಕಪ್ 2026ರ ಟೂರ್ನಿಯು ಯುಎಇಯ ದುಬೈನಲ್ಲಿ ಆಯೋಜನೆಗೊಳ್ಳುತ್ತಿದೆ. ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ಪಂದ್ಯಗಳು ನಡೆಯಲಿವೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಡೆಸುವ ಈ ಪ್ರತಿಷ್ಠಿತ ಟೂರ್ನಿಯ ಎಲ್ಲಾ ಪಂದ್ಯಗಳು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೊನಲು ಬೆಳಕಿನಲ್ಲಿ ಅಂದ್ರೆ ರಾತ್ರಿ ವೇಳೆಯೇ ನಡೆಯಲಿದೆ. ಮಹಿಳಾ ಏಷ್ಯಾಕಪ್ ಇತಿಹಾಸದಲ್ಲೇ ಭಾರತ ಮೋಸ್ಟ್ ಸಕ್ಸಸ್ಫುಲ್ ಟೀಂ. ಇದುವರೆಗೆ ನಡೆದಿರುವ 9 ಆವೃತ್ತಿಗಳಲ್ಲಿ ಬರೋಬ್ಬರಿ 7 ಬಾರಿ ಚಾಂಪಿಯನ್ ಆಗಿದೆ. ಇದ್ರಲ್ಲಿ 4 ಏಕದಿನ ಮತ್ತು 3 ಟಿ20 ಆವೃತ್ತಿಗಳಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಬಾಂಗ್ಲಾದೇಶ 2018 ಮತ್ತು ಶ್ರೀಲಂಕಾ 2024 ತಲಾ ಒಂದು ಬಾರಿ ಟ್ರೋಫಿ ವಿನ್ ಆಗಿದ್ದಾರೆ. ಸೋ ಇದು 10ನೇ ಆವೃತ್ತಿ.
8 ತಂಡಗಳ ನಡುವೆ ಫೈಟ್.. ಸೆಪ್ಟೆಂಬಲ್ 13ಕ್ಕೆ ಫೈನಲ್!
ಇನ್ನು ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಈ ಸಲ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ತಲಾ ನಾಲ್ಕು ತಂಡಗಳಾಗಿ 2 ಗುಂಪುಗಳನ್ನ ಮಾಡ್ಲಾಗಿದೆ. ಎ ಗ್ರೂಪ್ನಲ್ಲಿ ಭಾರತ, ಪಾಕಿಸ್ತಾನ, ಥೈಲ್ಯಾಂಡ್, ಹಾಂಗ್ ಕಾಂಗ್ ತಂಡಗಳಿವೆ. ಇನ್ನು ಬಿ ಗ್ರೂಪ್ನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಯುಎಇ, ಇಂಡೋನೇಷ್ಯಾ ಟೀಮ್ಗಳಿವೆ. ಟೂರ್ನಿಯ ಹೈವೋಲ್ಟೇಜ್ ಮ್ಯಾಚ್ ಆಗಿರುವ ಇಂಡೋ-ಪಾಕ್ ಪಂದ್ಯ ಸೆಪ್ಟೆಂಬರ್ 5ಕ್ಕೆ ನಡೆಯಲಿದೆ. ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಸೆಪ್ಟೆಂಬರ್ 10 ಮತ್ತು 11 ರಂದು ನಡೆಯಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 13ಕ್ಕೆ ಶೆಡ್ಯೂಲ್ ಆಗಿದೆ. ಸೋ ಟೂರ್ನಿಗೆ ಸಿದ್ಧತೆ ಏನೋ ಭರ್ಜರಿಯಾಗೇ ನಡೆದಿದೆ. ಆದ್ರೆ ಭಾರತವೇ ಟ್ರೋಫಿ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಕೂಡ ಆಗಿದೆ. ಆದ್ರೆ ಇರುವಂಥ ಪ್ರಶ್ನೆ ಒಂದೇ. ಟ್ರೋಫಿ ಗೆದ್ರೂ ಸಿಗಲ್ವಾ ಅನ್ನೋದು.
2025ರ ಟ್ರೋಫಿಯೇ ಸಿಕ್ಕಿಲ್ಲ.. ನಖ್ವಿ ಕೈಯಿಂದ ಕಪ್ ತಗೊಳ್ತಾರಾ?
ಅಷ್ಟಕ್ಕೂ ಇಲ್ಲಿ ಮಹಿಳಾ ಏಷ್ಯಾಕಪ್ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳೋಕೆ ಕಾರಣವೂ ಇದೆ. ಕಳೆದ ವರ್ಷ ಪುರುಷರ ಏಷ್ಯಾಕಪ್ ದುಬೈನಲ್ಲೇ ನಡೆದಿತ್ತು. ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧವೇ ಗೆದ್ದು ಭಾರತ ಚಾಂಪಿಯನ್ ಪಟ್ಟಕ್ಕೂ ಏರಿತ್ತು. ಆದ್ರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮತ್ತು ಪಾಕ್ನ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತದ ಆಟಗಾರರು ನಖ್ವಿ ಕೈಯಿಂದ ಟ್ರೋಫಿ ನಿರಾಕರಿಸಿ ಮೈದಾನದಲ್ಲೇ ಕುಳಿತಿದ್ರು. ಹೇಗೇ ಬೇರೆಯವ್ರಿಂದ ಟ್ರೋಫಿ ಹಸ್ತಾಂತರ ಮಾಡುವಂತೆ ಪಟ್ಟು ಹಿಡಿದಿದ್ರು. ಆದ್ರೆ ಮೊಹ್ಸಿನ್ ನಖ್ವಿ ಇದನ್ನ ಪ್ರತಿಷ್ಠೆಯಾಗಿ ತಗೊಂಡು ಟ್ರೋಫಿ ಬೇಕಿದ್ರೆ ನನ್ನ ಕೈಯಿಂದಲೇ ತಗೊಳ್ಬೇಕು ಅಂತಾ ಪೋಡಿಯಂ ಹತ್ತಿ ನಿಂತಿದ್ರು. ಆದ್ರೆ ಭಾರತೀಯ ಆಟಗಾರರು ಟ್ರೋಫಿ ಸ್ವೀಕರಿಸಲು ಬಾರದೇ ಇದ್ದಾಗ ಅದೇ ಟ್ರೋಫಿಯನ್ನ ಎತ್ಕೊಂಡು ಅಲ್ಲಿಂದ ಕಾಲ್ಕಿತ್ತಿದ್ರು. ಅಲ್ಲಿಂದ ಇಲ್ಲಿಯವರೆಗೆ ಆ ಟ್ರೋಫಿಯನ್ನ ಟೂರ್ನಮೆಂಟ್ ಚಾಂಪಿಯನ್‌ಗಳಿಗೆ ಹಸ್ತಾಂತರಿಸಲಾಗಿಲ್ಲ. ಈ ಬಗ್ಗೆ ಬಿಸಿಸಿಐ ಐಸಿಸಿ ಮುಂದೆ ದೂರು ನೀಡಿದ್ರೂ ನಖ್ವಿ ಮೊಂಡಾಟ ಬಿಟ್ಟಿಲ್ಲ. ಬೇಕಿದ್ರೆ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವ್ರೇ ಬಂದು ಎಸಿಸಿ ಅಧ್ಯಕ್ಷರ ಕಚೇರಿಯಲ್ಲಿ ನನ್ನ ಕೈಯಿಂದಲೇ ಟ್ರೋಫಿ ತಗೊಂಡು ಹೋಗ್ಲಿ ಅಂತಾ ಉದ್ಧಟತನದ ಮಾತುಗಳನ್ನಾಡಿದ್ರು. ಹೀಗಾಗಿ ಈ ಟ್ರೋಫಿ ಜಟಾಪಟಿ ಇನ್ನೂ ನಿಂತಿಲ್ಲ. ಹೀಗಿರುವಾಗ ಮಹಿಳಾ ಏಷ್ಯಾಕಪ್ನಲ್ಲಿ ಭಾರತದ ಸಿಂಹಿಣಿಯರು ಗೆದ್ದಾಗ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವ್ರು ಸೂರ್ಯಕುಮಾರ್ ಯಾದವ್ ತಾಳಿದ್ದ ನಿಲುವನ್ನೇ ತಗೊಳ್ತಾರಾ ಅಥವಾ ನಖ್ವಿಯಿಂದ ಟ್ರೋಫಿ ತಗೊಳ್ತಾರಾ ಅಥವಾ ಬಿಸಿಸಿಐನ ನಿಲುವು ಏನು ಅನ್ನೋದೇ ಪ್ರಶ್ನೆಯಾಗಿದೆ.

ನೋಡಿರಿ

