ರಾಣಿ-ಮನು ಎಂಟ್ರಿಗೆ ಬೆಚ್ಚಿದ ನಾಗೇಗೌಡ – ಪಾರು ಅಪ್ಪನ ಮೋಸ ಶಿವುಗೆ ಗೊತ್ತಾಗಿ ಬಿಡ್ತಾ?

ಅಣ್ಣಯ್ಯ ಸೀರಿಯಲ್ ಈಗ ರೋಚಕ ಘಟ್ಟ ತಲುಪಿದೆ. ಒಂದೆಡೆ ರಾಣಿ ಮತ್ತು ಮನು ಅವರ ಎಂಟ್ರಿ ನಂಜೇಗೌಡನ ಸದ್ದು ಅಡಗಿಸಿದೆ. ಮತ್ತೊಂದೆಡೆ ಪಾರು ಅಪ್ಪನ ಆರ್ಭಟ ಶಿವು ಎದುರು ಬಯಲಾಗಿದೆ. ಸೀನನ ಪ್ರೀತಿ ವಿಚಾರಕ್ಕೂ ಅಂತ್ಯ ಹಾಡುವ ಸಮಯ ಬಂದಾಗಿದೆ.
ಇದನ್ನೂ ಓದಿ:ರಕ್ಷಿತಾ OUT ರಚಿತಾರಾಮ್ IN – ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-9ರಲ್ಲಿ ಏನೇನು ವಿಶೇಷತೆ ಇದೆ ಗೊತ್ತಾ?
ಆಸ್ತಿಗಾಗಿ ರಾಣಿ-ಮನು ಜೀವ ತೆಗೆಯಲು ಸಂಚು ರೂಪಿಸಿದ್ದ ನಂಜೇಗೌಡನಿಗೆ ಆಘಾತ ಎದುರಾಗಿದೆ. ಆಸ್ತಿ ಪತ್ರಕ್ಕೆ ರಾಣಿ ತಪ್ಪಾಗಿ ಸಹಿ ಹಾಕಿರೋದರಿಂದ ನಂಜೇಗೌಡನಿಗೆ ಬರಸಿಡಿಲು ಬಡಿದಂತಾಗಿದೆ. ಆದರೆ, ಅವರಿಬ್ಬರ ಕಥೆ ತಾನೇ ಮುಗಿಸಿದ್ದು ಅಂತಾ ಗೊತ್ತಾಗದಂತೆ ನಾಟಕವಾಡುತ್ತಿದ್ದಾನೆ. ಹೀಗಾಗಿ ಸುಮತಿ ಮುಂದೆ ಬಂದು ಮನು ಮತ್ತು ರಾಣಿ ಕಾಡಿನಲ್ಲಿ ಹುಲಿಗೆ ಅಹಾರವಾಗಿದ್ದಾರೆ ಎಂದು ಸುಳ್ಳು ಹೇಳಿ ಕಣ್ಣೀರು ಹಾಕಿದ್ದನು. ನಂಜೇಗೌಡ ಮೊಸಳೆ ಕಣ್ಣೀರು ಹಾಕುತ್ತಿರುವಾಗಲೇ ಮನು ಮತ್ತು ರಾಣಿಯ ಗ್ರ್ಯಾಂಡ್ ಎಂಟ್ರಿಯಾಗಿದೆ. ಸತ್ತಿದ್ದಾರೆ ಎಂದು ನಂಬಿ ಸುಳ್ಳು ಕಥೆ ಕಟ್ಟಿದ್ದ ನಂಜೆಗೌಡ ಬೆಚ್ಚಿಬಿದ್ದಿದ್ದಾನೆ. ಆದ್ರೆ ನೀಚರಿಗೆ ರಾಣಿ ಮತ್ತು ಮನು ಹಿಂದೆ ಶಕ್ತಿಯಾಗಿ ಪಾರು ನಿಂತಿದ್ದಾಳೆ ಎಂಬ ವಿಷಯವೇ ಗೊತ್ತಿಲ್ಲ. ನಂಜೇಗೌಡ ಉಪಾಯವಾಗಿ ಮನು ಮತ್ತು ರಾಣಿಯನ್ನು ಕಾಡಿಗೆ ಕಳುಹಿಸಿದ್ದನು. ತನ್ನ ಚೇಲಾಗಳಿಂದ ಇಬ್ಬರ ಪ್ರಜ್ಞೆ ತಪ್ಪಿಸಿ ರಾವಣನ ಗೊಂಬೆ ಹಿಂದೆ ಕಟ್ಟಿ ಹಾಕಿದ್ದರು. ಗೊಂಬೆ ಹಿಂದೆ ಕಟ್ಟಲಾಗಿದ್ದ ಮನು ಮತ್ತು ರಾಣಿಯನ್ನು ಪಾರು ರಕ್ಷಣೆ ಮಾಡಿದ್ದಳು.
ಮತ್ತೊಂದೆಡೆ ಪಾರು ಅಪ್ಪನ ಕುತಂತ್ರ ಬಯಲಾಗುವ ಸಮಯ ಹತ್ತಿರವಾಗಿದೆ. ಮಾವ ಕಾಲ್ ಮಾಡಿರುವ ಖುಷಿಯಲ್ಲಿದ್ದ ಶಿವುಗೆ ಅತ್ತೆಯ ಆಕ್ರಂದನ ಕೇಳಿಸಿದೆ. ಇದು ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ಮತ್ತೊಂದೆಡೆ ಸೀನ ಪಿಂಕಿ ಹೆಸರನ್ನು ಮತ್ತೊಮ್ಮೆ ತಂದೆಯ ಎದುರೇ ತೆಗೆದಿದ್ದಾನೆ. ಹೀಗಾಗಿ ಪಿಂಕಿಯ ಪ್ರೀತಿ ಪುರಾಣದಲ್ಲಿ ಸೀನ ಸಿಕ್ಕಿಹಾಕಿಕೊಂಡಿದ್ದಾನೆ. ಹೀಗಾಗಿ ಇವರಿಬ್ಬರ ಕಳ್ಳ ಪ್ರೀತಿಗೆ ಫುಲ್ ಸ್ಟಾಪ್ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ನೋಡಿರಿ

