ಪಿಂಕಿಗೆ ಶಾಕ್ ಕೊಟ್ಟ ಶಿವಣ್ಣ.. ಗುಂಡಮ್ಮ, ಜಿಮ್ ಸೀನಾ ಲವ್ ಶುರು? – ಕಡೆಗೂ ಒಂದಾದ ಕಿರಿಕ್ ಜೋಡಿ!

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಅಣ್ಣಯ್ಯ ಸೀರಿಯಲ್ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಒಂದ್ಕಡೆ ರಾಣಿ ಮದುವೆ ತಯಾರಿ ನಡಿತಿದ್ರೆ, ಮತ್ತೊಂದ್ಕಡೆ ಶಿವು ತಾಯಿಯನ್ನ ಮನೆಗೆ ಕರ್ಕೊಂಡು ಬರ್ತೀನಿ ಅಂತಾ ಪಾರು ಪಣ ತೊಟ್ಟಿದ್ದಾಳೆ. ಇವೆಲ್ಲದ್ರ ಮಧ್ಯೆ ಸೀರಿಯಲ್ ಸ್ಟೋರಿಯಲ್ಲಿ ಟ್ವಿಸ್ಟ್ ಸಿಗ್ತಿದೆ. ಹಾವು ಮುಂಗುಸಿಯಂತೆ ಕಿತ್ತಾಡ್ತಿದ್ದ ಗುಂಡಮ್ಮ ಹಾಗೂ ಜಿಮ್ ಸೀನಾ ಈಗ ಒಂದಾಗ್ತಿದ್ದಾರೆ. ಇದೀಗ ಗುಂಡು ಮೇಲೆ ಜಿಮ್ ಸೀನಾ ಪ್ರೀತಿಯಲ್ಲಿ ಬಿದ್ನಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ.
ಇದನ್ನೂ ಓದಿ: ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹ್ಯಾಟ್ರಿಕ್ ಹೀರೋ – ಶಕ್ತಿದೇವತೆಯ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ದಂಪತಿ
ಅಣ್ಣಯ್ಯ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಇದೀಗ ಸೀರಿಯಲ್‌ನಲ್ಲಿ ರಾಣಿ ಮದುವೆ ಸಂಭ್ರಮ ನಡಿತಾ ಇದೆ. ಕುತಂತ್ರಿಗಳು ಶಿವಣ್ಣನಿಗೆ ಸುಳ್ಳು ಹೇಳಿ, ಪೆದ್ದ ಮನು ಜೊತೆ ರಾಣಿ ಮದುವೆ ಮಾಡಿಸಲು ಮುಂದಾಗಿದ್ದಾರೆ. ಮತ್ತೊಂದ್ಕಡೆ ರಾಣಿ ಮದುವೆಗೆ ಶಿವು ತಾಯಿಯನ್ನ ಕರ್ಕೊಂಡು ಬರ್ಬೇಕು.. ಅಮ್ಮ ಮಗನನ್ನು ಒಂದು ಮಾಡ್ಬೇಕು ಅಂತಾ ಪಾರು ಪಣ ತೊಟ್ಟಿದ್ದಾಳೆ. ಇವೆಲ್ಲದ್ರ ಮಧ್ಯೆ ಗುಂಡಮ್ಮ ಹಾಗೂ ಜಿಮ್ ಸೀನಾ ಸಖತ್ ಹೈಲೈಟ್ ಆಗಿದ್ದಾರೆ. ಇದೀಗ ಸೀನಾ ಜೊತೆಗೆ ಶಿವಣ್ಣ ಕೂಡ ಪಿಂಕಿಗೆ ಶಾಕ್ ಕೊಟ್ಟಿದ್ದಾನೆ. ಇದನ್ನ ಅರಗಿಸಿಕೊಳ್ಳಲು ಪಿಂಕಿಗೆ ವರ್ಷಗಳೇ ಬೇಕು.
ಜಿಮ್ ಸೀನಾ ಆರಂಭದಿಂದಲೂ ಪಿಂಕಿಯನ್ನ ಲವ್ ಮಾಡ್ತಿದ್ದ. ಪಿಂಕಿಯನ್ನೇ ಮದುವೆ ಆಗ್ಬೇಕು ಅಂತಾ ಜಿಮ್ ಸೀನಾ ಅಂದ್ಕೊಂಡಿದ್ದ. ಆದ್ರೆ ರಶ್ಮಿಯನ್ನ ಕಂಡ್ರೆ ಒಂಚೂರು ಆಗ್ತಿರ್ಲಿಲ್ಲ.. ಎದುರಿಗೆ ಸಿಕ್ಕಾಗ ಹಾವು ಮುಂಗುಸಿಯಂತೆ ಕಿತ್ತಾಡ್ತಿದ್ರು.. ಆದ್ರೆ ಜಿಮ್ ಸೀನಾ ಹಾಗೂ ಗುಂಡಮ್ಮ ಮದುವೆಯಾಗುವಂತೆ ಆಯ್ತು.. ಇದು ಜಿಮ್ ಸೀನಾ ತಾಯಿಗೂ ಇಷ್ಟ ಆಗಿಲ್ಲ. ಹೀಗಾಗಿ ಆಕೆ, ಪಿಂಕಿ ಜಿಮ್ ಸೀನಾ ಒಂದಾಗ್ಬೇಕು ಅಂತಾ ಏನೇನೋ ಮಾಡ್ತಿದ್ದಾಳೆ. ಈ ವಿಚಾರ ಮಾದಪ್ಪಣ್ಣನಿಗೆ ಗೊತ್ತಾಗಿದೆ. ರಶ್ಮಿಗೂ ಡೌಟ್ ಬಂದಿದೆ.. ಇದೀಗ ಜಿಮ್ ಸೀನನ ಪ್ರೇಯಸಿಯೇ ಈ ಪಿಂಕಿ. ತನ್ನ ಸೋದರಿ ರಶ್ಮಿ ಸಂಸಾರಕ್ಕೆ ಪಿಂಕಿ ಕಂಟಕ ಆಗ್ತಾಳೆ ಅನ್ನೋದು ಶಿವಣ್ಣನ ಗಮನಕ್ಕೆ ಬಂದಿದೆ.. ಇದೀಗ ತಂಗಿ ಸುದ್ದಿಗೆ ಬಂದ ಪಿಂಕಿಗೆ ಶಿವಣ್ಣ ಖಡಕ್ ವಾರ್ನ್ ಮಾಡಿದ್ದಾನೆ.. ಶಿವಣ್ಣನ ಮಾತು ಕೇಳಿ ಪಿಂಕಿ ಗಢ ಗಢ ನಡುಗಿದ್ದಾಳೆ.
ಶಿವಣ್ಣನ ಮನೆಯಲ್ಲಿ ರಾಣಿ ಮತ್ತು ಮನು ನಿಶ್ಚಿತಾರ್ಥ ನಡೆಯುತ್ತಿತ್ತು. ಶಿವು-ಪಾರ್ವತಿ ಮತ್ತು ಜಿಮ್ ಸೀನ-ಗುಂಡಮ್ಮ ಜೊತೆಯಾಗಿ ಡ್ಯಾನ್ಸ್ ಮಾಡುತ್ತಿದ್ದರು.ಈ ವೇಳೆ ಸೀನನ ತಾಯಿ ಲೀಲಾ ಜೊತೆ ಪಿಂಕಿ ಬರುತ್ತಾರೆ. ಪಿಂಕಿಯನ್ನು ನೋಡುತ್ತಿದ್ದಂತೆ ಸೀನ ಶಾಕ್ ಆಗಿ ಡ್ಯಾನ್ಸ್ ಮಾಡೋದನ್ನೇ ಮರೆಯುತ್ತಾನೆ. ಇದರಿಂದ ಸೀನ ಮತ್ತು ಗುಂಡಮ್ಮ ಕೆಳಗೆ ಬೀಳುತ್ತಾರೆ. ಪಿಂಕಿ ಬರುತ್ತಿದ್ದಂತೆ ಸೀನನ ವರ್ತನೆಯಲ್ಲಾದ ಬದಲಾವಣೆ ಪಾರು ಗಮನಕ್ಕೂ ಬಂದಿದೆ. ಬಳಿಕ ಪಾರು ಜಿಮ್ ಸೀನಾಗೆ ಕಿವಿ ಮಾತು ಹೇಳಿದ್ದಾಳೆ. ಗುಂಡಮ್ಮನ ಜೊತೆ ನಿನ್ನ ಮದುವೆ ಹೇಗಾಯ್ತು ಎಂದು ಎಲ್ಲರಿಗೂ ಗೊತ್ತಿದೆ. ನಾನು ಶಿವು ಮಾವನನ್ನು ಮದುವೆಯಾದಾಗ ನನ್ನ ಜೀವನವೇ ನಾಶ ಆಯ್ತು ಅಂದುಕೊಂಡಿದ್ದೆ. ಡಿವೋರ್ಸ್ ತೆಗೆದುಕೊಳ್ಳೋವರೆಗೂ ನಾನು ಮತ್ತು ಶಿವು ಮಾವ ಹೋಗಿದ್ದೇವೆ. ಇದೀಗ ನಾವಿಬ್ಬರು ಚೆನ್ನಾಗಿದ್ದೇವೆ. ಶಿವು ಮಾವನಂತಹ ಸಂಗಾತಿ ಸಿಕ್ಕಿರೋದು ನನ್ನ ಅದೃಷ್ಟ. ಎಲ್ಲರ ಜೀವನದಲ್ಲಿಯೂ ಹಳೆಯ ಘಟನೆಗಳಿರುತ್ತವೆ. ಎಲ್ಲವನ್ನು ಮರೆತು ಮುಂದೆ ಸಾಗಬೇಕು ಎಂದು ಪಾರು ಹೇಳಿದ್ದಾಳೆ.ಇದನ್ನ ಶಿವಣ್ಣ ಕೇಳಿಸಿಕೊಂಡಿದ್ದಾನೆ.
ಹೌದು, ಪಿಂಕಿ ಹಾಗೂ ಜಿಮ್ ಸೀನಾ ನಡುವೆ ಏನೋ ಇದೆ ಅನ್ನೋದು ಶಿವಣ್ಣನಿಗೆ ಗೊತ್ತಾಗಿದೆ. ಶಿವಣ್ಣನ ಮನೆಯಿಂದ ಹೊರಡುವ ವೇಳೆ ಕತ್ತಲಾಗಿರುತ್ತದೆ. ಹೀಗಾಗಿ ಪಿಂಕಿಯನ್ನು ಮನೆಗೆ ಬಿಟ್ಟು ಬರುವಂತೆ ಸೀನನಿಗೆ ಆತನ ತಾಯಿ ಹೇಳಿದ್ದಾಳೆ. ಆದ್ರೆ ಜಿಮ್ ಸೀನಾಗೆ ಪಾರು ಮಾತು ನೆನಪಿಗೆ ಬಂದಿದೆ. ಹೀಗಾಗಿ ಪಿಂಕಿಯನ್ನ ಮನೆಗೆ ಬಿಡುವಂತೆ ಗೋಡಂಬಿಗೆ ಹೇಳಿದ್ದಾನೆ. ಗೋಡಂಬಿ ಪಿಂಕಿಯನ್ನು ಕರ್ಕೊಂಡು ಮನೆಗೆ ಹೊರಟಿದ್ದಾನೆ. ಅಷ್ಟೊತ್ತಿಗೆ ಶಿವು ಅಲ್ಲಿಗೆ ಬಂದು, ನಾನೇ ಹೋಗಿ ಬಿಟ್ಟು ಬರುವೆ ಎಂದು ಪಿಂಕಿಯನ್ನು ಕರೆದುಕೊಂಡು ಹೋಗುತ್ತಾನೆ. ಬಳಿಕ ಪಿಂಕಿಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾನೆ. ಈ ಮಾರಿಗುಡಿ ಶಿವುಗೆ ಎಲ್ಲಾ ವಿಷಯವೂ ಗೊತ್ತಿರುತ್ತೆ. ಇರುವೆಗಳೆಲ್ಲಾ ಸಕ್ಕರೆಯನ್ನು ಹುಡುಕಿಕೊಂಡು ಹೋಗುತ್ತವೆ. ಸದ್ಯಕ್ಕೆ ನಮ್ಮ ಮನೆಯಲ್ಲಿರೋ ಸಕ್ಕರೆ ಅಂದ್ರೆ ಅದು ನಮ್ಮ ಜಿಮ್ ಸೀನ. ಮಾಕಾಳವ್ವನ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಮ್ಮ ತಂಗಿಯರ ಜೀವನದಲ್ಲಿ ಏನಾದ್ರು ಬದಲಾವಣೆ ಆದ್ರೆ ನಾನು ಸುಮ್ಮಿನರಲ್ಲ. ಸೀನ ಮತ್ತು ಗುಂಡಮ್ಮ ಇಬ್ಬರು ಚೆನ್ನಾಗಿ ಬದುಕಬೇಕು. ಆ ವ್ಯವಸ್ಥೆಯನ್ನು ನೀನೇ ಮಾಡಬೇಕು ಎಂದು ಹೇಳಿದ್ದಾನೆ. ಶಿವಣ್ಣನ ಮಾತು ಕೇಳಿ ಪಿಂಕಿ ಫುಲ್ ಶಾಕ್ ಆಗಿದ್ದಾಳೆ. ಇದೀಗ ಪಿಂಕಿ ಹಾಗೂ ಜಿಮ್ ಸೀನಾ ಒಂದಾಗೋದು ಪಕ್ಕಾ ಆಗಿದೆ. ಇದೀಗ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ. ಇದಪ್ಪ.. ಮನೆ ಹೆಣ್ಣುಮಕ್ಕಳುನಾ ಕಾಪಾಡೋದು ಅಂದ್ರೆ. ಸೀನ ನಮ್ಮ ಪಾರು ಹೇಳಿದ್ದ ಮಾತನ್ನ ಕೇಳುತ್ತಿದ್ದಾನೆ. ಖಂಡಿತ ಇವನು ಬದಲಾಗೇ ಬದಲಾಗುತ್ತಾನೆ. ನಮ್ಮ ಗುಂಡಮ್ಮಂಗೇ ಇರೋ ಒಳ್ಳೆ ಮನಸ್ಸಿಗೆ ಇವನು ಅವ್ಳ ಪ್ರೀತಿಮಾಡೋಕ್ಕೆ ಶುರು ಮಾಡೇ ಮಾಡುತ್ತಾನೆ. ಒಮ್ಮೊಮ್ಮೆ ನಿರ್ದೇಶಕ ಧಾರಾವಾಹಿ ಕಥೆಯನ್ನು ಚಂದದಲ್ಲಿ ತೆಗೆದುಕೊಂಡು ಹೋಗುತ್ತಾರೆ. ತಂಗಿ ಬಾಯ್ ಬಿಟ್ ಹೇಳಿಲ್ಲ ಅಂದ್ರು ಅಣ್ಣ ಆದವರಿಗೆ ಎಲ್ಲಾ ಅರ್ಥ ಆಗುತ್ತೆ. ಸೀನ ನೀನು ಬಂಗಾರ. ಇಂತಹ ಒಬ್ಬ ಅಣ್ಣ ಇರಬೇಕು.. ಜಿಮ್ ಸೀನಾ ಗುಂಡಮ್ಮನನ್ನ ಒಪ್ಪಿಕೊಳ್ಳೋದು ಪಕ್ಕಾ ಅಂತಾ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ.

ನೋಡಿರಿ

