ಅತ್ತೆಗೆ ಚಳಿ ಬಿಡಿಸಿದ ಗುಂಡಮ್ಮ! -ಜಿಮ್ ಸೀನಾಗೆ ರಶ್ಮಿ ಮೇಲೆ ಲವ್?

ಅಣ್ಣಯ್ಯ ಸೀರಿಯಲ್ ಈಗ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ತಿದೆ. ಒಂದ್ಕಡೆ ವೀರಭದ್ರ ಶಿವು ಕೈಗೆ ತಗ್ಲಾಕೊಂಡಿದ್ದಾನೆ. ಮತ್ತೊಂದ್ಕಡೆ ಪಾರ್ವತಿ ಶಿವು ತಾಯಿಯ ಬಗ್ಗೆ ಪತ್ತೆದಾರಿ ಕೆಲ್ಸ ಶುರು ಮಾಡ್ಕೊಂಡಿದ್ದಾಳೆ. ಇವೆಲ್ಲದ್ರ ನಡುವೆ ಸೀರಿಯಲ್ ಹೀರೋ ಹಾಗೂ ಹೀರೋಯಿನ್‌ಗಿಂತಲೂ ಸಖತ್ ಹೈಲೈಟ್ ಆಗ್ತಿರೋದು ಜಿಮ್ ಸೀನಾ ಹಾಗೂ ಗುಂಡಮ್ಮ. ಸದ್ಯ ಇವರಿಬ್ರು ಈಗ ಸೋಶಿಯಲ್ ಮೀಡಿಯಾದಲ್ಲಿ ಟೆಂಡಿಂಗ್ ಜೋಡಿ ಆಗಿದ್ದಾರೆ. ಇದೀಗ ಗುಂಡಮ್ಮ ಅತ್ತೆ ವಿರುದ್ಧ ಸಮರ ಸಾರಿದ್ದಾಳೆ. ಗುಂಡಮ್ಮನ ಆರ್ಭಟಕ್ಕೆ ಅತ್ತೆ ಎಸ್ಕೇಪ್ ಆಗಿದ್ದಾಳೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ 10 ವರ್ಷಗಳಿಂದ ಕೊಲ್ಕತ್ತಾ ಸೋತೇ ಇಲ್ಲ – ಸೇಡು ತೀರಿಸಿಕೊಳ್ಳುತ್ತಾ ಆರ್ ಸಿಬಿ?
ಅಣ್ಣಯ್ಯ ಸೀರಿಯಲ್ ಸ್ಟೋರಿ ಈಗ ಟ್ವಿಸ್ಟ್ ಆಂಡ್ ಟರ್ನ್‌ನಿಂದ ಕೂಡಿದೆ. ಟಿ ಆರ್ ಪಿ ರೇಸ್‌ನಲ್ಲೂ ಮುಂದಿದೆ. ಇದೀಗ ವೀರಭದ್ರನ ಮುಖವಾಡ ಶಿವು ಮುಂದೆ ಬಯಲಾಗಿದೆ. ಪಾರ್ವತಿ ಲೈಸೆನ್ಸ್ ಹರಿದು ಹಾಕಿರುವ ವಿಚಾರ ಆತನಿಗೆ ಗೊತ್ತಾಗಿದೆ. ಇದೀಗ ಮಾವನ ವಿರುದ್ದವೇ ಶಿವು ಕೂಗಾಡಿದ್ದಾನೆ. ಮತ್ತೊಂದ್ಕಡೆ ಶಾರದಾ ಬಗ್ಗೆ ತಿಳಿದುಕೊಳ್ಳಲು ಪಾರ್ವತಿ ಪ್ರಯತ್ನಿಸುತ್ತಿದ್ದಾಳೆ. ಈ ಹಿಂದೆ ತಾಯಿ ಬಗ್ಗೆ ವಿಚಾರಿಸಿದ್ದಕ್ಕೆ ಶಿವು ಕೋಪಗೊಂಡಿದ್ದ. ಎಂದಿಗೂ ತಾಯಿಯ ಬಗ್ಗೆ ಕೇಳಬೇಡ ಅಂತಾ ಹೇಳಿದ್ದ. ಇದ್ರಿಂದ ಪಾರ್ವತಿ ಶಿವು ಮೇಲೆ ಕೋಪ ಮಾಡ್ಕೊಂಡಿದ್ಲು.. ಬಳಿಕ ಶಿವು ಪಾರ್ವತಿಯನ್ನು ಕೂಸುಮರಿ ಮಾಡಿ ಸಮಧಾನ ಮಾಡಿದ್ದ. ಇದೀಗ ಶಿವುಗೆ ಪಾರ್ವತಿ ಪುಟ್ಟದಾದ ಕಥೆಯೊಂದನ್ನು ಹೇಳಿದ್ದಾಳೆ. ಒಂದೂರಿನಲ್ಲಿ ಓರ್ವನಿಗೆ ನಾಲ್ವರು ಸೋದರಿಯರಿದ್ದರು. ಆದ್ರೆ ಅವರ ತಾಯಿಯೇ ಮಿಸ್ ಆಗಿದ್ದಳು ಎಂದು ಪಾರ್ವತಿ ಹೇಳುತ್ತಾನೆ. ನನ್ನ ತಾಯಿಯ ವಿಷಯ ಮುಗಿದ ಅಧ್ಯಾಯ ಎಂದು ಶಿವು ಕೈ ಮುಗಿಯುತ್ತಾನೆ. ಆದ್ರೀಗ ಗುಂಡಮ್ಮ ರಶ್ಮಿ ಅತ್ತೆ ವಿರುದ್ಧ ತಿರುಗಿ ಬಿದ್ದಿದ್ದಾಳೆ.
ಹೌದು, ಜಿಮ್ ಸೀನಾ ಪಿಂಕಿಯನ್ನ ಮದ್ವೆ ಆಗ್ಬೇಕು ಅನ್ನೋದು ಲೀಲಾ ಆಸೆ ಆಗಿತ್ತು. ಆದ್ರೆ ಮಾದಮ್ಮ ಸೀನಾ ದುಡ್ಡು ಮಿಸ್ ಮಾಡಿದ ಅನ್ನೋ ಸಿಟ್ಟಿಗೆ ದುಂಡಮ್ಮ ಜೊತೆ ಮದುವೆ ಮಾಡಿಸಿದ್ದಾನೆ. ಮಾದಪ್ಪನಿಗೆ ಸೊಸೆ ಅಂದ್ರೆ ತುಂಬಾ ಪ್ರೀತಿ.. ಎಷ್ಟು ಹೊತ್ತಿಗೂ ಆಕೆಯನ್ನೇ ಹೊಗಳ್ತಾ ಇರ್ತಾನೆ.. ಆದ್ರೆ ಲೀಲಾ ಹಾಗಲ್ಲ.. ರಶ್ಮಿಯನ್ನ ಕಂಡ್ರೆ ಆಕೆಗೆ ಆಗಲ್ಲ.. ಜಿಮ್ ಸೀನಾನನ್ನ ಮದುವೆಯಾಗಿ ಬಂದಾಗಿನಿಂದಲೂ ಗುಂಡಮ್ಮಳಿಗೆ ಲೀಲಾ ಕಾಟ ಕೊಡ್ತಿದ್ದಾಳೆ. ಆಕೆಯನ್ನ ಊಟ ಮಾಡಲು ಬಿಡ್ತಿಲ್ಲ. ಹೀಗಾಗಿ ಗುಂಡಮ್ಮ ಖಾಲಿ ಹೊಟ್ಟೆಯಲ್ಲಿ ದಿನ ಕಳಿತಾ ಇದ್ಲು. ಆಸ್ಪತ್ರೆಯಲ್ಲಿ ಗೋಡಂಬಿ ಅಣ್ಣನ ಮುಂದೆ ತನ್ನೆಲ್ಲಾ ಕಷ್ಟಗಳನ್ನು ಹೇಳಿ ಗುಂಡಮ್ಮ ಕಣ್ಣೀರು ಹಾಕಿದ್ದಳು. ಆದ್ರೀಗ ಗುಂಡಮ್ಮ ಅತ್ತೆಗೆ ಸಖತ್ ಕ್ಲಾಸ್ ತಗೊಂಡಿದ್ದಾಳೆ. ಧೈರ್ಯವಾಗಿ ನಿಂತು ಅತ್ತೆ ನಿಮ್ಮ ಸಮಸ್ಯೆ ಏನು ಅಂತಾ ಕೇಳಿದ್ದಾಳೆ. ಇದ್ರಿಂದ ಲೀಗಾ ಹೆದ್ರಿದ್ದಾಳೆ.. ಈ ವೇಳೆ ಆಕೆಗೆ ತಾಯಿ ಮಾಕಳವ್ವ ಆಡಿದ ಮಾತು ನೆನಪಾಗಿದೆ. ತುತ್ತಿಗೂ, ಮುತ್ತಿಗೂ ಕನ್ನ ಹಾಕಿದ್ರೆ ಕುತ್ತಿಗೆ ಹಿಸ್ಕೊಗುತ್ತೆ. ಈ ಮಾತು ನೆನಪಾಗುತ್ತಲೇ ಲೀಲಾ ಹೆದರ್ಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ. ಇದೀಗ ಲೀಲಾ ಬದಲಾಗ್ತಾಳಾ? ಗುಂಡಮ್ಮಳನ್ನ ಸೊಸೆ ಅಂತಾ ಒಪ್ಪಿಕೊಳ್ತಾಳಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡ್ತಿದೆ.
ಇದೀಗ ಸೀರಿಯಲ್ ನೋಡಿದ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ. ಸೂಪರ್ ಗುಂಡಮ್ಮ.. ಇಂತವರಿಗೆ ಹೀಗೆ ಮಾಡಬೇಕು.. ನಮ್ಮ ತಪ್ಪಿಲ್ಲ ಅಂದ್ಮೇಲೆ ಯಾಕೆ ಹೆದ್ರುಕೋಬೇಕು.. ಯಾರಾದ್ರು ಅಷ್ಟೇ.. ಎಷ್ಟು ಸಹಿಸಿಕೊಳ್ಳಲಾಗುತ್ತೋ ಅಷ್ಟೇ ಸಹಿಸ್ಕೊಳ್ಬೇಕು.. ಎಲ್ಲವನ್ನೂ ಸಹಿಸ್ಕೊಂಡು ನುಂಗಿ ಯಾರು ಇರ್ಬಾದು ಅಂತಾ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ಗುಂಡಮ್ಮ ಮಾವನ ಮನಸ್ಸು ಗೆದ್ದಾಗಿದೆ. ಇನ್ನು ಮಾವನ ಮಗನ ಮನಸ್ಸೂ ಗೆಲ್ತಾಳೆ. ಜಿಮ್ ಸೀನಾಗೆ ಗುಂಡಮ್ಮನ್ನ ಮೇಲೆ ಪ್ರೀತಿ ಹುಟ್ಟೋದು ಪಕ್ಕಾ ಅಂತಾ ಕಾಮೆಂಟ್ ಮಾಡಿದ್ದಾರೆ.