ಶಿವಣ್ಣನ ಮೈಮೇಲೆ ಮಾಕಾಳವ್ವ.. ವೀರಭದ್ರನ ಆಟಕ್ಕೆ ಪಾರು ಬ್ರೇಕ್‌ – ಅಣ್ಣಯ್ಯ ವಿಕಾಸ್‌ ಯಾರು?

ಶಿವಣ್ಣನ ಮೈಮೇಲೆ ಮಾಕಾಳವ್ವ.. ವೀರಭದ್ರನ ಆಟಕ್ಕೆ ಪಾರು ಬ್ರೇಕ್‌ – ಅಣ್ಣಯ್ಯ ವಿಕಾಸ್‌ ಯಾರು?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಅಣ್ಣಯ್ಯ ಸೀರಿಯಲ್‌ ಈಗ ರೋಚಕ ಘಟ್ಟ ತಲುಪಿದೆ. ಪಾರ್ವತಿ ಹಾಗೂ ಶಿವು ತಮ್ಮ ಪ್ರೀತಿಯನ್ನ ಹೇಳ್ಕೊಂಡಿದ್ರು. ಅದಾದ್ಮೇಲೆ ಶಿವು ಪಾರುನಾ ಚೆನ್ನಾಗೇ ಕಾಡಿದ್ಲು.. ಇನ್ನೊಂದು ತಿಂಗಳು ಇದೇ ಗೋಳು ಅಂತಾ ವೀಕ್ಷಕರು ಹೇಳ್ಕೊಂಡಿದ್ರು. ಆದ್ರೆ ಸೀರಿಯಲ್‌ ಡೈರೆಕ್ಟರ್‌ ಸ್ಟೋರಿಯಲ್ಲಿ ಬಿಗ್‌ ಟ್ವಿಸ್ಟ್‌ ಕೊಟ್ಟಿದ್ದಾರೆ. ಶಿವು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾನೆ. ಶಿವು ಮೈಯಲ್ಲಿ ಮಾಕಾಳವ್ವ ಬಂದಿದ್ದಾಳೆ. ಇದ್ರಿಂದಾಗಿ ವೀರಭದ್ರನ ಎದೆಯಲ್ಲಿ ನಡುಕ ಶುರುವಾಗಿದೆ.

ಇದನ್ನೂ ಓದಿ: ರಾಹುಲ್ ರಾಕ್.. ಗೋಯೆಂಕಾ ಶಾಕ್ – ಗೇಲಿಗೆ ಗೆಲುವಿನ ಗುದ್ದು ಕೊಟ್ಟ ಕನ್ನಡಿಗ

ಅಣ್ಣಯ್ಯ ಸೀರಿಯಲ್‌ ಈಗ ಟ್ವಿಸ್ಟ್‌ ಅಂಡ್‌ ಟರ್ನ್‌ನಿಂದ ಕೂಡಿದೆ. ಶಿವು ಎಲ್ಲಿ ಹೋದಲೆಲ್ಲಾ ಆತನ ಕಿವಿಯ ಹತ್ರ ಬಂದು ಯಾರೋ ಪಿಸುಗುಟ್ಟುವಂತೆ ಆಗುತ್ತಿತ್ತು. ಈ ವಿಚಾರ ತಿಳಿದ ಪಾರು ಕೂಡ ಭಯ ಬಿದ್ದಿದ್ಲು. ಅಷ್ಟೊತ್ತಿಗೆ ದೇವಸ್ಥಾನದ ಅರ್ಚಕರು ಬಂದು ಮಾಕಾಳವ್ವನ ಮುಂದೆ ಹಚ್ಚಿಟ್ಟ ದೀಪ ಆರಿಹೋಗಿದೆ. ದೇವಿ ಭಕ್ತರಿಗೆ ಪ್ರಸಾದ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲಿಂದಲೇ ಶಿವು ದೇವಸ್ಥಾನಕ್ಕೆ ತೆರಳಿ ವ್ರತ ಶುರುಮಾಡ್ಕೊಂಡಿದ್ದಾನೆ. ಇತ್ತ ಶತಾಯ ಗತಾಯ ಮಾಕಾಳವ್ವನಿಗೆ ದಿಗ್ನಂಧನ ಹಾಕಿಸಬೇಕೆಂಬ ವೀರಭದ್ರನ ಪ್ಲಾನ್ ರುಸ್ ಆಗಿದೆ. ದೈವ ಲೀಲೆ ಮುಂದೆ ದುಷ್ಕರ ಆಟ ಮಣ್ಣಾಗಿದೆ. ಅಮ್ಮನ ಪಲ್ಲಕ್ಕಿಯನ್ನು ಹೊತ್ತು, ಮಾಕಾಳವ್ವನನ್ನು ಮೈ ಮೇಲೆ ಕರೆದುಕೊಂಡಿದ್ದಾನೆ ಶಿವಣ್ಣ. ಇದ್ರಿಂದ ವೀರಭದ್ರನ ಎದೆಯಲ್ಲಿ ನಡುಕ ಶುರುವಾಗಿದೆ.

ಶಿವಣ್ಣ ಮಾಕಾಳವ್ವನ ಪಲ್ಲಕ್ಕಿ ಹೊರುವುದನ್ನು ತಪ್ಪಿಸಬೇಕೆಂದು ವೀರಭದ್ರ ಶತಾಯಗತಾಯ ಪ್ರಯತ್ನಿಸಿದ್ದ. ಮಾಂತ್ರಿಕನ ನೆರವಿನಿಂದ ದಿಗ್ವಂಧನ ಹಾಕಿಸಿದ್ದ. ಮಡಿಯುಟ್ಟು ಅಮ್ಮನ ಪಲ್ಲಕ್ಕಿ ಮುಟ್ಟುತ್ತಿದ್ದಂತೆ ಶಾಕ್ ಹೊಡೆದಿದೆ. ಆದ್ರೆ ಅಚ್ಚರಿಯ ರೀತಿಯಲ್ಲಿ ವೀರಭದ್ರ ಗೆದ್ದ ಖುಷಿಯಲ್ಲಿದ್ದಾನೆ. ಆದರೆ, ದೇವಿ ಸ್ಮರಣೆ ಮಾಡಿ ಪಲ್ಲಕ್ಕಿಯನ್ನು ಹೊತ್ತು ನಿಂತೇ ಬಿಟ್ಟಿದ್ದಾನೆ ಮಾರಿಗುಡಿ ಶಿವಣ್ಣ. ಅತ್ತ ಪಲ್ಲಕ್ಕಿಯನ್ನ ಶಿವಣ್ಣ ಎತ್ತೇ ಬಿಟ್ಟನಲ್ಲ ಎಂದು ವೀರಭದ್ರನಿಗೆ ಹೇಳಿದ್ದಾನೆ ಛತ್ರಿ. ಬರೀ ಪಲ್ಲಕ್ಕಿ ಎತ್ತೋದಲ್ಲ, ದೇವಿ ಮೈಮೇಲೆ ಬರಬೇಕು ಅದು ಮುಖ್ಯ ಎಂದಿದ್ದಾನೆ ವೀರಭದ್ರ. ಅಷ್ಟರಲ್ಲಿ ಶಿವಣ್ಣನ ಮೈಮೇಲೆ ಮಾಕಾಳವ್ವನ ಆವಾಹನೆಯಾಗಿದೆ. ಪಲ್ಲಕ್ಕಿ ಹೊತ್ತು ಆರ್ಭಟಿಸಿದ್ದಾನೆ ಶಿವಣ್ಣ ಇದನ್ನು ನೋಡಿದ ವೀರಭದ್ರ ಒಳಗೊಳಗೆ ನಡುಗಿದ್ದಾನೆ.

ತುಂಬಿದ ಕೊಡ ತುಳುತ್ತೆ, ತಾಯಿ ಮಕ್ಕಳ ಮಧ್ಯೆ ಅದ್ಯಾವ ಶಕ್ತಿ ಬಂದ್ರುವೆ, ರಕ್ತ ಚೆಲ್ಲುತ್ತೆ ಎಂದು ಮಾಕಾಳವ್ವ ಶಿವಣ್ಣನ ಬಾಯಿಂದ ಹೇಳಿಸಿದ್ದಾಳೆ. ಈ ಮಾತುಗಳನ್ನು ಕೇಳಿದ ಪಾರ್ವತಿ, ದೇವಿ ಅಮ್ಮ ಮಕ್ಕಳು ಎಂದು ಹೇಳುತ್ತಿದ್ದಾಳಲ್ಲ ಏಕಿರಬಹುದು ಎಂದು ಮನದಲ್ಲಿ ಮಾತನಾಡಿಕೊಂಡಿದ್ದಾಳೆ. ಇದೇ ವೇಳೆ ದೇವಿ ಬಳಿ ಏನಾದ್ರೂ ಕೇಳಬೇಕಿದ್ದರೆ ಕೇಳಿ ಎಂದಿದ್ದಾರೆ ಅರ್ಚಕರು. ಇನ್ನೇನು ದೇವಿ ಬಳಿ ತನ್ನ ಮನಸ್ಸಿನ ಗೊಂದಲ ಹೇಳಬೇಕು ಎನ್ನುವಷ್ಟರಲ್ಲಿ ವೀರಭದ್ರ ಅಡ್ಡ ಬಂದಿದ್ದಾನೆ. ಮನಸ್ಸಿಗೆ ಬಂದ ಹಾಗೆ ತಾಯಿನ ಪ್ರಶ್ನೆ ಕೇಳಬಾರದು. ಹಾಗೆ ಕೇಳಿದ್ರೆ ತಾಯಿಗೆ ಬೆಲೆ ಎಲ್ಲಿದೆ ಎಂದಿದ್ದಾನೆ ವೀರಭದ್ರ. ಅಷ್ಟೊತ್ತಿಗೆ ಪಲ್ಲಕ್ಕಿ ಹೊತ್ತ ಶಿವಣ್ಣ ವೀರಭದ್ರನ ಮುಂದೆ ಬಂದು, ತಾಯಿಯನ್ನೇ ಕಟ್ಟಾಕ್ತಿರೋನೋ  ಎಂದು ರೋಷಾವೇಷದಲ್ಲಿ ಹೇಳಿದ್ದಾನೆ ಶಿವಣ್ಣ. ಅಷ್ಟರಲ್ಲಿ ಪಾರ್ವತಿ ರಶ್ಮಿ ಬಳಿ ತಾಯಿ ಬಗ್ಗೆ ಕೇಳಿಸಿದ್ದಾಳೆ. ಇದೀಗ ವೀರಭದ್ರನ ಬಣ್ಣ ಬಯಲಾಗುತ್ತಾ ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿದೆ.

ಇದೀಗ ಸೀರಿಯಲ್‌ ನೋಡಿದ ವೀಕ್ಷಕರು ಅಣ್ಣಯ್ಯನ ಆಕ್ಟಿಂಗ್‌ ಗೆ ಬಹುಪರಾಕ್‌ ಹೇಳಿದ್ದಾರೆ. ಯಾವ ಸನ್ನಿವೇಶ ಕೊಟ್ರು ಈ ನಟ ನೀರು ಕುಡಿದಷ್ಟೇ ಈಸಿಯಾಗಿ ನಟನೆ ಮಾಡ್ತಾರೆ ಅಂತಾ ಸೀರಿಯಲ್‌ ಫ್ಯಾನ್ಸ್‌ ಹೇಳಿದ್ದಾರೆ. ಅಂದ್ಹಾಗೆ ಶಿವು ಪಾತ್ರದಲ್ಲಿ ನಟನೆ ಮಾಡ್ತಿರೋ ನಟ ವಿಕಾಸ್ ಉತ್ತಯ್ಯ. ವಿಕಾಸ್ ಉತ್ತಯ್ಯ ಮೂಲತಃ ಕೊಡಗಿನವರು. ಬಾಲ್ಯದಿಂದಲೂ ನಟನಾಗಬೇಕು ಎಂಬ ಕನಸು ಕಂಡಿದ್ದ ವಿಕಾಶ್ ಉತ್ತಯ್ಯ ವೃತ್ತಿಯಲ್ಲಿ ವಕೀಲರು ಹೌದು. ಎಲ್.ಎಲ್. ಬಿ.. ಎಲ್. ಎಲ್.ಎಮ್ ಜೊತೆಗೆ ಭಾರತೀಯ ಸಂವಿಧಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿಕಾಶ್ ಪ್ರವೃತ್ತಿಯಲ್ಲಿ ನಟ.. ಆರಂಭದಿಂದಲೂ ಇವ್ರಿಗೆ ನಟನೆ ಅಂದ್ರೆ ತುಂಬಾ ಇಷ್ಟ. ಹೀಗಾಗೇ ಅವರು ಸೀರಿಯಲ್, ಸಿನಿಮಾದಲ್ಲಿ ನಟನೆಯನ್ನ ಮುಂದುವರಿಸಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿರುವ ಕೊಡಗಿನ ಕುವರ, ಸೀರಿಯಲ್‌ಗೆ ಬರುವ ಮುನ್ನ ಕೆಲ ಸಿನಿಮಾಗಳಲ್ಲಿ ಅಭಿನಯಿದ್ದಾರೆ. ಈ ಹಿಂದೆ ಮೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಇವರು, ಇತ್ತೀಚೆಗೆ 2023ರಲ್ಲಿ ದ್ವಂದ್ವ ದ್ವಯಂ, ಆನೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಪಾಯದಲ್ಲಿ ಎಚ್ಚರಿಕೆ ಎಂಬ ಸಿನಿಮಾದಲ್ಲಿ ವಿಕಾಸ್‌ ನಾಯಕನಾಗಿ ನಟಿಸಿದ್ದಾರೆ. ಇದ್ರ ಜೊತೆ ಕೆಲ ಶಾರ್ಟ್‌ ಫಿಲ್ಮಗಳಲ್ಲೂ ಬಣ್ಣಹಚ್ಚಿದ್ದಾರೆ.  ಇದೀಗ ಅಣ್ಣುಯ್ಯ ಸೀರಿಯಲ್‌ ನಲ್ಲಿ ಶಿವು ಪಾತ್ರದ ಮೂಲಕ ಕರುನಾಡಿನ ಜನರ ಮನಗೆದ್ದಿದ್ದಾರೆ.

Shwetha M

Leave a Reply

Your email address will not be published. Required fields are marked *