ಪಾರು ಶಾಕ್ ಟ್ರೀಟ್‌ಮೆಂಟ್.. ಪ್ರೀತಿ ಜ್ವರದಲ್ಲಿ ಬಿದ್ದ ಶಿವಣ್ಣ – ರೀಲ್ ಜೋಡಿ ರಿಯಲ್ ಲವ್..?

ಪಾರು ಶಾಕ್ ಟ್ರೀಟ್‌ಮೆಂಟ್.. ಪ್ರೀತಿ ಜ್ವರದಲ್ಲಿ ಬಿದ್ದ ಶಿವಣ್ಣ – ರೀಲ್ ಜೋಡಿ ರಿಯಲ್ ಲವ್..?

ಆಗೋದೆಲ್ಲಾ ಒಳ್ಳೆದಿಕ್ಕೆ ಅನ್ನೋ ಮಾತೊಂದಿದೆ.. ಇದೀಗ ಅಣ್ಣಯ್ಯ ಸೀರಿಯಲ್‌ ನ ಪಾರು ವಿಚಾರದಲ್ಲಿ ಅದೇ ಆಗ್ತಿದೆ. ಪಾರು ಸಿದ್ಧಾರ್ಥ್‌ ನ ಲವ್‌ ಮಾಡ್ತಿದ್ಲು.. ಆದ್ರೆ ಸಿದ್ಧಾರ್ಥ್‌ ಮದುವೆಯಂದೇ ಪಾರುಗೆ ಕೈಕೊಟ್ಟು ಹೋಗಿದ್ದ.. ಹೀಗಾಗಿ ಪಾರುನ ಶಿವಣ್ಣನ ಜೊತೆ ಮದುವೆ ಮಾಡಲಾಯ್ತು.. ಇದೀಗ ಪಾರುಗೆ ಶಿವಣ್ಣನ ಮೇಲೆ ಲವ್‌ ಆಗಿದೆ. ತನ್ನ ಪ್ರೀತಿ ವಿಚಾರವನ್ನ ಪಾರು ಶಿವಣ್ಣನ ಮುಂದೆ ಹೇಳ್ಕೊಂಡಿದ್ದಾಳೆ.. ಆದ್ರೆ ಪಾರು ಲವ್‌ ಪ್ರಪೋಸ್‌ ಮಾಡ್ತಿದ್ದಂತೆ ಶಿವಣ್ಣನಿಗೆ ಪ್ರೇಮ ಜ್ವರ ಶುರುವಾಗಿದೆ. ಲವ್‌ ಫಿವರ್‌ನಿಂದ ಅಣ್ಣಯ್ಯ ಕೋಮಾಗೆ ಹೋಗಿದ್ದಾನೆ.

ಇದನ್ನೂ ಓದಿ: ಡಿವೋರ್ಸ್ ರೂಮರ್ಸ್ ನಡುವೆ ಬಿಂದಾಸ್‌ ಡ್ಯಾನ್ಸ್‌ ಮಾಡಿದ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್

ಅಣ್ಣಯ್ಯ ಸೀರಿಯಲ್‌ ಈಗ ರೋಚಕ ಘಟ್ಟ ತಲುಪಿದೆ. ಶಿವಣ್ಣನನ್ನ ಮದ್ವೆ ಆಗಿದ್ದ ಪಾರು, ನೀನಂದ್ರೆ ಇಷ್ಟ ಇಲ್ಲ ಅಂತಾ ಡಿವೋರ್ಸ್‌ ಗೆ ಅಪ್ಲೇ ಮಾಡಿದ್ಲು.. ಈ ವಿಚಾರ ಊರವರ ಮುಂದೆ ಬಯಲಾಗ್ತಿದ್ದಂತೆ ಡಿವೋರ್ಸ್‌ ಅರ್ಜಿಯನ್ನ ಶಿವಣ್ಣ ಸುಟ್ಟು ಹಾಕಿದ್ದ.. ನಮ್ಮ ಸಂಬಂಧ ಈ ಪೇಪರ್‌ ನಿಂತಿಲ್ಲ ಅಂತಾ ಎಲ್ಲರ ಮುಂದೆ ಹೇಳಿದ್ದ.. ಆದ್ರೀಗ ಪಾರುಗೆ ಶಿವಣ್ಣನ ಮೇಲೆ ಪ್ರೀತಿ ಚಿಗುರಿದೆ. ಕೊನೆಗೂ ಶಿವಣ್ಣನಿಗೆ ತನ್ನ ಹೃದಯದ ಮಾತನ್ನ ಹೇಳಿಕೊಂಡಿದ್ದಾಳೆ.

ಪಾರ್ವತಿ ತನ್ನ ಪ್ರೀತಿ ವಿಚಾರ ಹೇಳ್ಕೊಳ್ಬೇಕು ಅಂದಾಗ ಶಿವು ತಂಗಿಯರು ಆಕೆಗೆ ಸಹಾಯ ಮಾಡಿದ್ರು.. ಇದಕ್ಕಾಗಿ ಬೆಟ್ಟದ ಮೇಲೆ  ಸುಂದರವಾದ  ಸೆಟ್ ಹಾಕಲಾಗಿತ್ತು. ಶಿವಣ್ಣನ ಮುಂದೆ ಕನ್ನಡಿ ಹಿಡಿದು ನಾನು ಪ್ರೀತಿಸುವ ಹುಡುಗ ಇವನೇ ಅಂತಾ ತೋರಿಸುತ್ತಾಳೆ. ಆದ್ರೆ ಒಂದು ಕ್ಷಣ ಶಿವು ಜೋರಾಗಿ ನಗುತ್ತಾನೆ. ನಕ್ಕು ತುಂಬಾ ದಿನ ಆಗಿತ್ತು. ಇದನ್ನ ಮನೆಯಲ್ಲಿಯೇ ಹೇಳಿದ್ರೆ ಅಲ್ಲೇ ನಗುತ್ತಿದ್ದೆ ಎಂದು ಹೇಳುತ್ತಾನೆ. ಆದರೂ ಪಾರು ತನ್ನ ಪ್ರೀತಿಯನ್ನು ಅರ್ಥ ಮಾಡಲು ಪ್ರಯತ್ನಿಸುತ್ತಾಳೆ. ಆದ್ರೆ ಶಿವಣ್ಣ ಇದೆಲ್ಲಾ ಸಾಧ್ಯ ಇಲ್ಲ.. ನೀನು ಆಕಾಶದಲ್ಲಿರೋ ತಾರೆ ನೀನು, ನಾನು ಮಾರಿಗುಡಿಯಲ್ಲಿರೋ ಕೆರೆ. ಈ ಕೆರೆಯಲ್ಲಿ ತಾರೆಗಳ ಪ್ರತಿಬಿಂಬ ಕಾಣೋದು ದೊಡ್ಡದು. ಆದ್ರೆ ಆ ತಾರೆಯೇ ನನ್ನ ಬಳಿಯಲ್ಲಿ ಬರಬೇಕು  ಅಂತ ಆಸೆ ಪಡೋದು ತಪ್ಪಾಗುತ್ತದೆ. ನೀನೆಲ್ಲಿ, ನಾನೆಲ್ಲಿ ಎಂದು ಶಿವು ಪಾರ್ವತಿಗೆ  ಹೇಳಿದ್ದಾನೆ. ಶಿವಣ್ಣನ ಮಾತಿನಿಂದ ಪಾರು ನೊಂದಿದ್ದಾಳೆ. ತನ್ನ ಪ್ರೀತಿಯನ್ನ  ಸಾಬೀತು ಮಾಡಲು ಕಲ್ಯಾಣಿಗೆ ಜಿಗಿಯುತ್ತಾಳೆ. ನಂತರ ಅಲ್ಲಿಗೆ ಬಂದು ಪಾರ್ವತಿಯನ್ನು ಶಿವು ಕಾಪಾಡಿದ್ದಾನೆ. ಯಾಕೆ ಹೀಗೆ ಮಾಡ್ತೀಯಾ ಎಂದು ಕೇಳಿದಾಗ, ನೀನು ಇಲ್ಲ ಅಂದ್ರೆ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಪ್ರೇಮ ನಿವೇದನೆಯನ್ನು ಪಾರ್ವತಿ ಮಾಡಿದ್ದಾಳೆ. ಪಾರು ಪ್ರೀತಿ ಹೇಳ್ಕೊಳ್ತಿದ್ದಂತೆ ಅಣ್ಣಯ್ಯ ಶಾಕ್‌ಗೆ ಒಳಗಾಗಿ  ಪ್ರೇಮಾದ  ಕೋಮಾಗೆ ಹೋಗಿದ್ದಾನೆ. ಮನೆಯಲ್ಲಿ ಬೆಡ್‌ಶೀಟ್ ಹೊದ್ದುಕೊಂಡು ಚಳಿ ಜ್ವರ ಬಂದವರಂತೆ ಶಿವು ಕುಳಿತಿದ್ದಾನೆ. ಪಾರು ತನ್ನನ್ನು ಪ್ರೀತಿಸುತ್ತಿರೋದು ನಿಜವೇ ಎಂದು ಪದೇ ಪದೇ ಹೇಳುತ್ತಿದ್ದಾನೆ. ಇದೀಗ ಅಣ್ಣಯ್ಯ ಅವಸ್ತೆ ನೋಡಿ ತಂಗಿಯರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ನಾನು ನೀಡಿದ ಶಾಕ್‌ನಿಂದಲೇ ಶಿವು ಮಾವು ಹೀಗೆ ಆಗಿರೋದು, ಹಾಗಾಗಿ ಇದನ್ನ ನಾನೇ ಸರಿ ಮಾಡುವೆ ಎಂದು ಪಾರು ಹೇಳಿದ್ದಾಳೆ.

ಇದೀಗ ವೀಕ್ಷಕರು ಶಿವು ಆಕ್ಟಿಂಗ್‌ ಗೆ ಫುಲ್‌ ಫಿದಾ ಆಗಿದ್ದಾರೆ. ಶಿವು ಅವಸ್ಥೆ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ. ಈ ಜೋಡಿ ತುಂಬಾ ಚೆನ್ನಾಗಿದೆ. ರಿಯಲ್‌ ಲೈಫ್‌ ನಲ್ಲೂ ನೀವು ಒಂದಾಗಿ ಅಂತಾ ವೀಕ್ಷಕರು ಕಾಮೆಂಟ್‌ ಮಾಡ್ತಿದ್ದಾರೆ.

Shwetha M

Leave a Reply

Your email address will not be published. Required fields are marked *