ಗುಂಡಮ್ಮ ಹಾಡಿಗೂ ಸೈ… ನಟನೆಗೂ ಸೈ.. ಅಣ್ಣಯ್ಯನ ತಂಗಿ ಯಕ್ಷಗಾನ ಕಲಾವಿದೆ – ಪ್ರತೀಕ್ಷಾ ಶ್ರೀನಾಥ್‌ ಯಾರು ಗೊತ್ತಾ?

ಗುಂಡಮ್ಮ ಹಾಡಿಗೂ ಸೈ… ನಟನೆಗೂ ಸೈ.. ಅಣ್ಣಯ್ಯನ ತಂಗಿ ಯಕ್ಷಗಾನ ಕಲಾವಿದೆ – ಪ್ರತೀಕ್ಷಾ ಶ್ರೀನಾಥ್‌ ಯಾರು ಗೊತ್ತಾ?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಅಣ್ಣಯ್ಯ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಪಾರುಗೆ ಈಗ ಶಿವು ಮೇಲೆ ಪ್ರೀತಿ ಚಿಗುರುತ್ತಿದೆ.. ಇನ್ನೊಂದ್ಕಡೆ ಶಿವು ಆತನ ತಂಗಿ ಗುಂಡಮ್ಮ ರಶ್ಮಿಗೆ ಮದುವೆ ಮಾಡಲು ಹೊರಟಿದ್ದಾನೆ. ಶಿವು ಮದುವೆಗೆ ಸಿದ್ಧತೆ ಮಾಡಿಕೊಳ್ತಿತ್ತಿದ್ರೆ, ಗುಂಡಮ್ಮ ಜಿಮ್‌ ನಲ್ಲಿ ವರ್ಕೌಟ್‌ ಶುರು ಮಾಡಿಕೊಂಡಿದ್ದಾಳೆ.. ಇದೀಗ ವೀಕ್ಷಕರು ತಿಂಡಿಪೋತಿ ರಶ್ಮಿ ಪಾತ್ರವನ್ನ ಮೆಚ್ಚಿಕೊಂಡಿದ್ದಾರೆ. ಅಷ್ಟಕ್ಕೂ ಈ ರಶ್ಮಿ ಪಾತ್ರ ಮಾಡ್ತಿರೋ ನಟಿ ಹೆಸರು ಪ್ರತೀಕ್ಷಾ ಶ್ರೀನಾಥ್.. ಈಕೆ ನಟನೆಯ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಕ್ ಭಿಕ್ಷಾಂದೇಹಿ ಅನ್ನುತ್ತಾ? ಚಳಿಗಾಲದಲ್ಲಿ ಬಿದ್ದಿದ್ದು ಎಂಥಾ ಹೊಡೆತಾ?

ಅಣ್ಣತಂಗಿಯರ ಬಾಂಧವ್ಯದ ಕಥೆಯ ಅಣ್ಣಯ್ಯ ಸೀರಿಯಲ್‌ ಈಗ ವೀಕ್ಷಕರ ಮನಗೆದ್ದಿದೆ. ಟಿಆರ್‌ಪಿ ರೇಸ್‌ ನಲ್ಲೂ ಮುಂದಿದೆ. ನಾಲ್ವರು ತಂಗಿಯರ ಮುದ್ದಿನ ಅಣ್ಣ ಶಿವ. ತಂಗಿಯರ ಪಾಲಿಗೆ ಇವನೇ ಶ್ರೀರಕ್ಷೆ. ತನ್ನ ಪ್ರೀತಿಯ ತಂಗಿಯರ ಮೇಲೆ ಯಾರ ಕೆಟ್ಟ ಕಣ್ಣು ಬೀಳದಂತೆ ಜೋಪಾನ ಮಾಡುವ ಶಿವನ ಕಥೆ ಇದಾಗಿದೆ. ತಂಗಿಯರಿಗಿಂತ ಮೊದಲು ಮದುವೆ ಆಗಲ್ಲ ಅಂತಿದ್ದ ಶಿವನ ಬಾಳಿಗೆ ಪಾರ್ವತಿ ಎಂಟ್ರಿಕೊಟ್ಟಿದ್ದಾಳೆ.. ಮದುವೆಯಾದ ಕೆಲವೇ ದಿನಗಳಲ್ಲಿ ಡಿವೋರ್ಸ್‌ ಗೆ ಅಪ್ಲೇ ಮಾಡಿದ್ದ ಪಾರುಗೆ ಈಗ ಶಿವು ಮೇಲೆ ಪ್ರೀತಿ ಚಿಗುರುತ್ತಿದೆ. ಸದ್ಯ ಈ ಸೀರಿಯಲ್‌ ನಲ್ಲಿ ಗುಂಡಮ್ಮ ಪಾತ್ರದ ಮೇಲೆ ಕಥೆ ಸಾಗುತ್ತಿದೆ. ಪಟ ಪಟ ಅಂತಾ ಮಾತಾಡೋ ಗುಂಡಮ್ಮನಿಗೆ ಈಗ ಕಂಕಣ ಭಾಗ್ಯ ಕೂಡಿಬಂದಿದೆ.

ಹೌದು, ತಿಂಡಿಪೋತಿ ಗುಂಡಮ್ಮಳಿಗೆ ಈಗ ಮದುವೆ ಮಾಡಲು ಶಿವು ಹೊರಟಿದ್ದಾನೆ. ಈಗಾಗಲೇ ನಿಶ್ಚಿತಾರ್ಥ ಕೂಡ ಆಗಿದೆ. ಇದೀಗ ಮದುವೆಯ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಇದೀಗ ಪಾರು ತಂದೆ ವೀರಭದ್ರಯ್ಯ ಮದುವೆ ನಿಲ್ಲಿಸ್ಬೇಕು ಅಂತಾ ಪಣ ತೊಟ್ಟಿದ್ದಾನೆ.. ಹೀಗಾಗಿ ಏನೇನೋ ಕುಂತಂತ್ರ ಮಾಡ್ತಿದ್ದಾನೆ. ಆದ್ರೆ ಪಾರು ಶಿವು ಮನೆಯಲ್ಲಿ ಇರೋವರೆಗೂ ಇದೆಲ್ಲಾ ಸಾಧ್ಯ ಇಲ್ಲ ಅನ್ನೋದು ಆತನಿಗೆ ಗೊತ್ತಾಗಿದೆ. ಇನ್ನು ಸದಾ ಏನಾದ್ರೂ ತಿಂದಾ ಟೈಮ್‌ ಪಾಸ್‌ ಮಾಡ್ತಿದ್ದ ರಶ್ಮಿ ಮದುವೆ ರೆಡಿಯಾಗ್ತಿದ್ದು, ತೂಕ ಇಳಿಸ್ಬೇಕು ಅಂತಾ ಜಿಮ್‌ ಗೆ ಬೇರೆ ಹೋಗ್ತಿದ್ದಾಳೆ. ಇದೀಗ ವೀಕ್ಷಕರು ಕ್ಯೂಟ್ ಆಗಿ ಚಟಪಟ ಅಂತ ಮಾತಾಡೋ ಗುಂಡಮ್ಮಳ ಪಾತ್ರವನ್ನ ಇಷ್ಟ ಪಟ್ಟಿದ್ದಾರೆ. ಅಷ್ಟೇ ಈ ನಟಿ ಯಾರು? ಆಕೆಯ ಹಿನ್ನೆಲೆ ಏನು ಅಂತಾ ಹುಡುಕ್ತಿದ್ದಾರೆ.

ಅಂದ್ಹಾಗೆ ಶಿವು ತಂಗಿ ರಶ್ಮಿಯಾಗಿ ನಟಿಸುತ್ತಿರುವ ನಟಿ ಹೆಸ್ರು  ಪ್ರತೀಕ್ಷಾ ಶ್ರೀನಾಥ್.. ಈಕೆ  ಸೀರಿಯಲ್‌ ಜೊತೆಗೆ ರಂಗಭೂಮಿ ಹಾಗೂ ಯಕ್ಷಗಾನ ಕಲಾವಿದೆಯೂ ಹೌದು. ಪ್ರತೀಕ್ಷಾ ಕಿರುತೆಗೆ ಕಾಲಿಡೋಕು ಮುನ್ನ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲ ಪ್ರತೀಕ್ಷಾ ಯಕ್ಷಗಾನ ಕಲಾವಿದೆ.. ಸಮಯ ಸಿಕ್ಕಾಗಲೆಲ್ಲಾ ಯಕ್ಷಗಾನದಲ್ಲಿ ಅಭಿನಯಿಸುತ್ತಾರೆ.. ಇನ್ನೂ ಸಂಗೀತದಲ್ಲೂ ಆಸಕ್ತಿ ಹೊಂದಿರುವ ಪ್ರತೀಕ್ಷಾ ಗಾಯನದಲ್ಲೂ ಎತ್ತಿದ ಕೈ. ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಆಕ್ಟಿವ್‌ ಆಗಿರುವ ಪ್ರತೀಕ್ಷಾ ಆಗಾಗ ಯಕ್ಷಗಾನ, ನಾಟಕ, ಹಾಗೂ ಸಂಗೀತದ ವಿಡಿಯೋ ಫೋಟೋಗಳನ್ನ ಪೋಸ್ಟ್‌ ಮಾಡ್ತಾ ಇರ್ತಾರೆ..  ಇಂಥಾ ಬಹುಮುಖ ಪ್ರತಿಭೆ ಇದೀಗ ‘ಅಣ್ಣಯ್ಯ’ ಸೀರಿಯಲ್‌ ನಲ್ಲಿ ಗುಂಡಮ್ಮ ಅಲಿಯಾಸ್ ರಶ್ಮಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಬಬ್ಲಿ ಲುಕ್‌ ವೀಕ್ಷಕರಿಗೆ ಇಷ್ಟವಾಗ್ತಿದೆ.

Shwetha M