ಅಣ್ಣಯ್ಯ ಅಲ್ಲ ಮಿಲನಾ 2!! – ಸಿದ್ಧಾರ್ಥ್ ಸತ್ಯ.. ಶಿವು ಮೇಲೆ ಲವ್!
ಸೀರಿಯಲ್ ನಲ್ಲಿ ಸ್ವಂತಿಕೆಯೇ ಇಲ್ವಾ?
ಈಗೀಗ ಸೀರಿಯಲ್ ಡೈರೆಕ್ಟರ್ ಸ್ವಂತಿಕೆಯನ್ನೇ ಮರೆತು ಬಿಟ್ರಾ ಅನ್ನೋ ವೀಕ್ಷಕರ ವಾದ. ಯಾಕಂದ್ರೆ ಈಗ ಸೀರಿಯಲ್ ನಲ್ಲಿ ಬರೀ ಸಿನಿಮಾ ಸ್ಟೋರಿ ಲೈನ್ ಗಳನ್ನೇ ಕಾಪಿ ಮಾಡ್ತಾ ಇದ್ದಾರೆ. ಇದೀಗ ಒಂದಾದ ಮೇಲೊಂದು ಸೀರಿಯಲ್ ನಲ್ಲಿ ಸಿನಿಮಾ ಸ್ಟೋರಿ ಲೈನ್ ಗಳನ್ನೇ ಬಳಸಿಕೊಳ್ಳಲಾಗ್ತಿದೆ. ಲಕ್ಷ್ಮೀ ನಿವಾಸದಲ್ಲಿ ಸೇವಂತಿ ಸಿನಿಮಾದ ಸ್ಟೋರಿ ಲೈನ್ ಬಳಸಿಕೊಳ್ಳಲಾಗಿತ್ತು. ಇದೀಗ ಅಣ್ಣಯ್ಯ ಸೀರಿಯಲ್ ನಲ್ಲೂ ಪುನೀತ್ ರಾಜ್ ಕುಮಾರ್ ನಟನೆಯ ಸಿನಿಮಾದ ಕತೆಯನ್ನ ಬಳಸಿಕೊಳ್ಳಲಾಗಿದೆ. ಇದೀಗ ವೀಕ್ಷಕರು ಸೀರಿಯಲ್ ಟೀಮ್ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಾಜಿ ಸಿಎಂ ಎಸ್ಎಂ ಕೃಷ್ಣ ನಿಧನ – ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮುಯಿಂದ ಶೋಕ ಸಂದೇಶ
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಅಣ್ಣಯ್ಯ ಸೀರಿಯಲ್ ಸದ್ಯ ಮಹಾತಿರುವಿನ ಘಟ್ಟದಲ್ಲಿದೆ. ಇದೀಗ ಪಾರು ಮೆಡಿಕಲ್ ಕ್ಯಾಂಪ್‌ಗೆ ಅಂತ ಸಿಟಿಗೆ ಬಂದಿದ್ದಾಳೆ. ಶಿವು ಅವಳಿಗೆ ಸಾಥ್ ಕೊಟ್ಟಿದ್ದಾನೆ. ಪಾರು ಗೆಳತಿಯೊಬ್ಬಳು ಪಾರುಗೆ ಕಾಲ್ ಮಾಡಿ ಮೆಡಿಕಲ್ ಕ್ಯಾಂಪ್ ಇದೆ ನೀನೂ ಬಾ ಎಂದು ಕರೆದಿದ್ದಾಳೆ. ಆದರೆ ಪಾರು ಮೊದಲು ಕ್ಯಾಂಪ್‌ಗೆ ಬರೋದಕ್ಕೆ ಮನಸು ಮಾಡೋದಿಲ್ಲ. ಆಮೇಲೆ ಶಿವು ಬಲವಂತಕ್ಕೆ ಮಣಿದು ಹೊರಡಲು ಅನುವಾಗ್ತಾಳೆ. ಇಲ್ಲೂ ಶಿವು ಬಳಸಿದ್ದು ಸಿದ್ಧಾರ್ಥ್ ಎಂಬ ಮಂತ್ರದಂಡವನ್ನು. ಶಿವು ಹೇಳ್ತಾನೆ ‘ನಿನಗೆ ಹೇಗಂದ್ರೂ ಸಿದ್ದಾರ್ಥ್‌ನ ಹುಡುಕ ಬೇಕಲ್ಲ, ಹಾಗಾಗಿ ನೀನು ಈಗೊಮ್ಮೆ ಹೋಗಿ ಬಾ, ನಾನೂ ನಿನ್ನ ಜೊತೆ ಬರ್ತೀನಿ’ ಎಂದು ಹೇಳಿದ್ದಾನೆ. ಅವನ ಮಾತು ಪಾರುಗೆ ನಿಜ ಅನಿಸಿ ಅವಳು ಸಿಟಿಗೆ ಹೋಗಿದ್ದಾಳೆ. ಆದ್ರೆ ಇಲ್ಲಿ ಶಿವು ಮಾತು ನಿಜ ಆಗುತ್ತೆ ಅಂತ ಸ್ವತಃ ಶಿವುಗೂ ಗೊತ್ತಿಲ್ಲ. ಗೊತ್ತಿದ್ದರೆ ಅವನು ಖಂಡಿತಾ ಪಾರು ಹೋಗಲು ಬಿಡ್ತಿರಲಿಲ್ಲ. ಏಕೆಂದರೆ ಶಿವುಗೆ ಸಿದ್ಧಾರ್ಥ್ ಮಾಡಿರೋ ಮೋಸದ ಕಥೆ ಗೊತ್ತು. ಆಲ್‌ರೆಡಿ ಡಾಕ್ಟರ್ ಒಬ್ರು ಸಿದ್ಧಾರ್ಥ್ ಅವಳಿಗೆ ಮೋಸ ಮಾಡಿರೋ ಕಥೆಯನ್ನು ಶಿವುಗೆ ಹೇಳಿದ್ದಾರೆ. ಆದರೆ ಅದನ್ನು ಪಾರುಗೆ ಹೇಳಿದರೆ ಆಕೆಗೆ ನೋವಾಗುತ್ತೆ ಅಂತ ಶಿವು ಸುಮ್ಮನಾಗಿದ್ದಾನೆ.
ಇನ್ನೊಂದೆಡೆ ಪಾರು ಸಿದ್ಧಾರ್ಥನ ಕಥೆಗೆ ಪುಲ್‌ಸ್ಟಾಪ್ ಇಡುವಂಥಾ ಹಾಗೇ ತನ್ನ ತಂದೆ ಮತ್ತು ಅಣ್ಣನ ವಿರುದ್ಧವೇ ಪಾರು ಸಮರ ಸಾರುವಂಥಾ ಸನ್ನಿವೇಶ ಬಂದಿದೆ. ಶಿವು ಜೊತೆ ಸಿಟಿಗೆ ಬಂದ ಪಾರು ಕಬ್ಬಿನ ಹಾಲು ಕುಡೀತಿರುವಾಗ ಅಲ್ಲೇ ಪಕ್ಕದಲ್ಲಿದ್ದ ಇನ್ನೊಬ್ಬನಿಗೆ ಕಾಲ್ ಬರುತ್ತದೆ. ಕಾಲ್ ಬಂದ ತಕ್ಷಣ ಅವನು ಮಾತು ಆರಂಭಿಸುತ್ತಾನೆ. ಯಾರು? ಯಾವ ಸಿದ್ದಾರ್ಥ್? ಏನ್ ಕೆಲಸ ಮಾಡೋದು? ಡಾಕ್ಟರಾ ಎಂದೆಲ್ಲ ಮಾತಾಡುತ್ತಾನೆ. ಅದನ್ನು ಕೇಳಿ ಪಾರು ಶಾಕ್ ಆಗ್ತಾಳೆ.
ಆದರೆ ಅದು ತನ್ನ ಸಿದ್ದಾರ್ಥ್ ಇರಬಹುದು ಎಂದು ಅವಳಿಗೆ ಅನುಮಾನ ಬಂದಿದೆ. ನಂತರ ಶಿವು ಇಲ್ಲ ಪಾರು ಅವರು ಬೇರೆ ಯಾರೋ ಆಗಿರ್ತಾರೆ. ನೀನು ಕಬ್ಬಿನ ಹಾಲು ಕುಡಿ ಎಂದು ಅವಳ ಗಮನ ಬೇರೆಕಡೆ ಸೆಳೆಯುತ್ತಾನೆ.
ಇದೇ ಟೈಮ್ ನಲ್ಲಿ ಪಾರುಗೆ ಸಿದ್ಧಾರ್ಥನ ತಂದೆ ಟೂವೀಲರ್‌ನಲ್ಲಿ ಹೋಗ್ತಿರೋದು ಕಾಣುತ್ತೆ. ಸ್ನೇಹಿತೆಯೊಬ್ಬಳ ಸಹಾಯದಿಂದ ಅವರನ್ನು ಫಾಲೋ ಮಾಡ್ಕೊಂಡು ದೇವಸ್ಥಾನಕ್ಕೆ ಬಂದರೆ ಅಲ್ಲೊಂದು ಮಹಾ ತಿರುವು ಅವಳಿಗಾಗಿ ಕಾದಿದೆ. ಸ್ವತಃ ಸಿದ್ಧಾರ್ಥನ ತಂದೆಯೇ ತನ್ನ ಮಗನ ನೀಚ ಬುದ್ಧಿಯನ್ನು ಪಾರು ಮುಂದೆ ತೆರೆದಿಡ್ತಾನೆ. ಪಾರು ಅಣ್ಣ ಸಿದ್ಧಾರ್ಥ್‌ಗೆ ಹಣದ ಆಮಿಷವೊಡ್ಡಿ ಆತ ಪಾರುವಿನಿಂದ ದೂರಾಗುವ ಹಾಗೆ ಮಾಡಿರ್ತಾನೆ. ದುಡ್ಡಿಗಾಗಿ ತಾನು ಪ್ರೀತಿಸಿದ ಹುಡುಗಿಯನ್ನೇ ಮರೆಯೋ ಮಹಾ ವಂಚಕ ಅನ್ನೋದು ಸಿದ್ಧಾರ್ಥ ಈಗ ಪಾರುಗೆ ಗೊತ್ತಾಗ್ತಿದೆ.
ಸೀರಿಯಲ್ ಕತೆ ಏನೋ ಸರಾಗವಾಗಿ ಸಾಗ್ತಾ ಇದೆ.. ಆದ್ರೆ ನಮ್ಮ ವೀಕ್ಷಕರು ಒಂದಲ್ಲ ಒಂದು ತಪ್ಪನ್ನ ಹುಡುಕುತ್ತಾರೆ..ಇದೀಗ ಅಣ್ಣಯ್ಯ ಸೀರಿಯಲ್ ಸ್ಟೋರಿ ಲೈನ್ ಮಿಲನ ಸಿನಿಮಾದಿಂದ ಕದ್ದಿದ್ದು ಅಂತ ವೀಕ್ಷಕರು ಪತ್ತೆ ಹಚ್ಚಿದ್ದಾರೆ. ಇದರಲ್ಲೂ ನಾಯಕಿಗೆ ಅಷ್ಟೊಳ್ಳೆ ನಾಯಕ ಕಣ್ಣೆದುರಿಗಿದ್ದರೂ ಅವಳು ಹಳೇ ಲವ್ ಹಿಂದೆ ಬಿದ್ದಿರ್ತಾಳೆ. ಆದರೆ ಒಂದು ಹಂತದಲ್ಲಿ ಅವಳಿಗೆ ನಾಯಕನ ಸದ್ಗುಣ, ತಾನು ಪ್ರೀತಿಸಿದ ಹುಡುಗನ ದುರ್ಗಣ ತಿಳಿಯುತ್ತದೆ. ಸೀರಿಯಲ್‌ಗಳಲ್ಲಿ ಸಿನಿಮಾ ಲೈನ್ ಇರೋದು ಕಾಮನ್. ಎಷ್ಟೋ ಕಡೆ ಸಿನಿಮಾ ಕಥೆಯನ್ನೇ ಸೀರಿಯಲ್ ಮಾಡಿದ್ದೂ ಇದೆ. ಸದ್ಯ ‘ಅಣ್ಣಯ್ಯ’ದಲ್ಲಿ ಮಿಲನ ಸಿನಿಮಾದ ಒಂದೆಳೆ ತರಲಾಗಿದೆ. ಆದರೆ ಮುಂದೈತೆ ಬೆಂಕಿ ಅಂತಿದ್ದಾರೆ ವೀಕ್ಷಕರು. ಏಕೆಂದರೆ ಇದರಲ್ಲಿ ತಾನು ಪ್ರೀತಿಸಿದ ಹುಡುಗನ ಕೆಟ್ಟತನ ಪಾರುಗೆ ಗೊತ್ತಾಗುತ್ತೆ. ತನ್ನ ಅಣ್ಣ ಹಾಗೂ ಅಪ್ಪನ ನೀಚತನವೂ ತಿಳಿಯುತ್ತೆ. ಮುಂದೆ ಪಾರು ಇಡೊ ಹೆಜ್ಜೆಯೇ ಬೆಂಕಿ ಥರ ಇದೆ ಅಂತ ಆ ಸೀನ್‌ಗಾಗಿ ವೀಕ್ಷಕರು ಎದುರು ನೋಡ್ತಿದ್ದಾರೆ.