ಬಿಜೆಪಿಗೆ ದಿಢೀರ್ ಗುಡ್ಬೈ ಹೇಳಿದ ಅಣ್ಣಾಮಲೈ – ತಮಿಳುನಾಡಲ್ಲಿ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ

ತಮಿಳುನಾಡಿನಲ್ಲಿ ಈಗ ದಳಪತಿ ವಿಜಯ್ ದರ್ಬಾರ್ ಶುರುವಾಗಿದೆ. ಚುನಾವಣೆಯಲ್ಲಾದ ಬಿಜೆಪಿ ಸೋಲಿಗೆ ನೈತಿಕ ಹೊಣೆ ಹೊತ್ತ ಕೆ. ಅಣ್ಣಾಮಲೈ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಬಂಡೆ ಪಟ್ಟಾಭಿಷೇಕಕ್ಕೆ ಸಜ್ಜಾಗುತ್ತಿದೆ ಗಾಜಿನಮನೆ – ಡಿಕೆಶಿ ಸಂಪುಟ ಸೇರಲು ಡಿಸಿಎಂ, ಸಚಿವಕಾಂಕ್ಷಿಗಳ ದುಂಬಾಲು!
ತಮಿಳುನಾಡಲ್ಲಿ ಬಿಜೆಪಿ ಪರ ಹೊಸ ಅಲೆ ಸೃಷ್ಟಿಸಿದ್ದ ಕೆ. ಅಣ್ಣಾಮಲೈ ಇದೀಗ ಬಿಜೆಪಿಯಿಂದ ದೂರ ಸರಿದಿದ್ದಾರೆ. ಅಣ್ಣಾಮಲೈ ಅಣ್ಣಾಮಲೈ ಅವರು ನವದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಮಾಜಿ ಮುಖ್ಯಸ್ಥ ಕೆ. ಅಣ್ಣಾಮಲೈ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಅಣ್ಣಾಮಲೈ ಅವರು ಚೆನ್ನೈಗೆ ಮರಳಲಿದ್ದಾರೆ.
ಅಣ್ಣಾಮಲೈ ಐದು ಪುಟಗಳ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಆ ಪತ್ರದಲ್ಲಿ ‘ಈಗ ತನ್ನದೇ ಆದ ಮಾರ್ಗವನ್ನು ರೂಪಿಸಿಕೊಳ್ಳಲು’ ಬಯಸುತ್ತಿದ್ದು, ಹೀಗಾಗಿ ತಾನು ಪಕ್ಷಕ್ಕೆ ರಾಜೀನಾಮೆ ನೀಡೋದಾಗಿ ವಿವರಿಸಿದ್ದಾರೆ. ಮೂಲಗಳ ಪ್ರಕಾರ, ಮುಂದಿನ ಸೂಚನೆ ಬರುವವರೆಗೂ ದೆಹಲಿಯನ್ನು ತೊರೆಯದಂತೆ ಅಣ್ಣಾಮಲೈ ಅವರನ್ನು ಮೊದಲೇ ಕೇಳಲಾಗಿತ್ತು. ಆದರೆ, ಅಣ್ಣಾಮಲೈ ಮಂಗಳವಾರ ಸಂಜೆ ಚೆನ್ನೈ ತೊರೆಯಲಿದ್ದಾರೆ ಎಂದು ಹೇಳಲಾಗ್ತಿದೆ.
ತಮಿಳುನಾಡಿನಲ್ಲಿ ಸಿಎಂ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿಯಾಗಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸೋಲಿನ ಬಗ್ಗೆ ಭಾರೀ ಚರ್ಚೆಯಾಗಿತ್ತು. ಇನ್ನೊಂದೆಡೆ, ಅಣ್ಣಾಮಲೈ ಅವರ ಆಕ್ರಮಣಕಾರಿ ಶೈಲಿಯ ರಾಜಕಾರಣದ ವಿರುದ್ಧ ತಮಿಳುನಾಡು ಬಿಜೆಪಿಯ ಹಿರಿಯ ನಾಯಕರಲ್ಲೇ ತೀವ್ರ ಅಸಮಾಧಾನವಿತ್ತು. ಮೈತ್ರಿಕೂಟದ ನಿರ್ಧಾರಗಳು ಮತ್ತು ಪಕ್ಷದ ಆಂತರಿಕ ನಾಯಕತ್ವದ ನಡುವಿನ ಗೊಂದಲಗಳೇ ರಾಜೀನಾಮೆಗೆ ಮುಖ್ಯ ಕಾರಣ ಎಂದು ಕೂಡ ಹೇಳಲಾಗುತ್ತಿದೆ.

ನೋಡಿರಿ

