ಅನ್ನಭಾಗ್ಯ ಯೋಜನೆಗೆ ಜು. 10 ರಂದು ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ – ಹಣಭಾಗ್ಯ ಯಾವಾಗ?

ಅನ್ನಭಾಗ್ಯ ಯೋಜನೆಗೆ ಜು. 10 ರಂದು ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ – ಹಣಭಾಗ್ಯ ಯಾವಾಗ?

ಬೆಂಗಳೂರು: ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಿಸಿರುವ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಈಗಾಗಲೇ ಜಾರಿಯಾಗಿದೆ. ಇದೀಗ ಅನ್ನಭಾಗ್ಯ ಯೋಜನೆಗೂ ಸಿಎಂ ಸಿದ್ದರಾಮಯ್ಯ ಅವರು ಜು. 10 ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಗೆ ವಿಧಾನಸೌಧದಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಳಿಕ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನ್ನ ಭಾಗ್ಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ‘ಪೊಳ್ಳು ಘೋಷಣೆಗಳಿಗೆ’ ಜನರು ಬೆಲೆ ಕೊಡುವುದಿಲ್ಲ – ಕೇಂದ್ರದ ವಿರುದ್ದ  ಮಲ್ಲಿಕಾರ್ಜುನ ಖರ್ಗೆ ಕಿಡಿ

ಕೇಂದ್ರ ಸರ್ಕಾರದಿಂದ ಅಕ್ಕಿ ದೊರೆಯದ ಕಾರಣ ಈಗಾಗಲೇ ವಿತರಿಸುತ್ತಿರುವ 5 ಕೆಜಿ ಜೊತೆಗೆ ತಾತ್ಕಾಲಿಕವಾಗಿ ಕೆಜಿಗೆ 34 ರೂಪಾಯಿಗಳಂತೆ 5ಕೆಜಿಗೆ 170 ರೂಗಳಂತೆ ಪ್ರತಿ ವ್ಯಕ್ತಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ವರ್ಗಾಯಿಸುವುದಾಗಿ ಸರ್ಕಾರ ಘೋಷಿಸಿತ್ತು. ಜುಲೈ 10ರಂದು ಅಕ್ಕಿ ಪೂರೈಕೆ ಜೊತೆಗೆ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುವ ಪ್ರಕ್ರಿಯೆ ಸರ್ಕಾರದಿಂದ ಆರಂಭವಾಗಲಿದೆ.

ಅನ್ನಭಾಗ್ಯ ಯೋಜನೆಯ ಹಣ ನೇರವಾಗಿ ಕುಟುಂಬದ ಯಜಮಾನನ ಖಾತೆಗೆ ಜಮೆಯಾಗುತ್ತದೆ. ಹಣಕ್ಕೆ ಆಧಾರ್ ಲಿಂಕ್ ಕಡ್ಡಾಯವಾಗಿರುತ್ತದೆ. ಅನ್ನಭಾಗ್ಯದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಬೇಕಾದರೆ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು. ಪಡಿತರ ಚೀಟಿಯಲ್ಲಿ ಮನೆ ಮುಖ್ಯಸ್ಥರು ಯಾರು ಎಂಬುದು ಕಾರ್ಡ್ ನಲ್ಲಿ ನಮೂದಾಗಿರುತ್ತದೆ. ಮನೆಯ ಮುಖ್ಯಸ್ಥರು ಸಾಮಾನ್ಯವಾಗಿ ಮಹಿಳೆಯರೇ ಆಗಿರುತ್ತಾರೆ. ಮನೆ ಯಜಮಾನಿಯ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಖಾತೆ ಇರಬೇಕು. ಅಲ್ಲದೆ ಒಂದು ವೇಳೆ ಮನೆಯ ಮುಖ್ಯಸ್ಥರದ್ದು ಇಲ್ಲದೇ ಹೋದಲ್ಲಿ, ಪಡಿತರ ಚೀಟಿಯಲ್ಲಿರುವ ಯಾರಾದರೂ ಒಬ್ಬರ ಹೆಸರಿನಲ್ಲಿ ಖಾತೆ ಆಧಾರ್ ಲಿಂಕ್ ಆಗಿರಬೇಕು ಎಂದು ಸರ್ಕಾರ ಹೇಳಿದೆ. ಇನ್ನು ಈ ಧನಭಾಗ್ಯಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಕೆ ಮಾಡಬೇಕಿಲ್ಲ. ಆದರೆ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆ ವಿವರ ಮಾತ್ರ ಕಡ್ಡಾಯವಾಗಿರುತ್ತದೆ.

suddiyaana