ಅನ್ನಭಾಗ್ಯದ ಹಣ ಜು. 1 ರಿಂದಲೇ  ಕೊಡುತ್ತೇವೆ ಎಂದು ಹೇಳಿಲ್ಲ! – ಸಿಎಂ ಸಿದ್ದರಾಮಯ್ಯ

ಅನ್ನಭಾಗ್ಯದ ಹಣ ಜು. 1 ರಿಂದಲೇ  ಕೊಡುತ್ತೇವೆ ಎಂದು ಹೇಳಿಲ್ಲ! – ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜುಲೈ 1 ರಿಂದ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ನೀಡುವ 5 ಕೆಜಿ ಅಕ್ಕಿ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಯೂಟರ್ನ್‌ ಹೊಡೆದಿದ್ದಾರೆ. ಅನ್ನ ಭಾಗ್ಯ ಯೋಜನೆಫಲಾನುಭವಿಗಳಿಗೆ ಜುಲೈ 1ರಿಂದಲೇ ಹಣ ನೀಡುತ್ತೇವೆ ಎಂದು ಹೇಳಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ! – ಜಾಹೀರಾತು ಮೂಲಕ ಬಿಜೆಪಿಯನ್ನು ಕಾಲೆಳೆದ ಕಾಂಗ್ರೆಸ್‌  

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಅನ್ನ ಭಾಗ್ಯ ಯೋಜನೆಫಲಾನುಭವಿಗಳಿಗೆ ಜುಲೈ 1ರಿಂದಲೇ ಹಣ ನೀಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳೇ 5 ಕೆಜಿ ಅಕ್ಕಿ ಬದಲಿಗೆ ಹಣ ಕೊಡುತ್ತೇವೆ. ಬಹುಶಃ ಜುಲೈ 10ರಿಂದ ಹಣ ನೀಡುವ ಪ್ರಕ್ರಿಯೆ ಪ್ರಾರಂಭವಾಗಬಹುದು ಎಂದು ಹೇಳಿದ್ದಾರೆ.

ಜುಲೈ ತಿಂಗಳಿನಿಂದಲೇ ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತೇವೆ. ಹಾಗೆಂದು ಇಂದಿನಿಂದಲೇ ಹಾಕುತ್ತೇವೆ ಎಂದು ಹೇಳಿಲ್ಲ. ಗೃಹ ಜ್ಯೋತಿ ಯೋಜನೆ ಇಂದು ಜಾರಿಗೆ ಬರಲಿದ್ದು  ಈ ತಿಂಗಳಿನಿಂದ ಉಚಿತ ವಿದ್ಯುತ್ ಸಿಗಲಿದೆ. ಆಗಸ್ಟ್ ತಿಂಗಳ ಬಿಲ್ ನಲ್ಲಿ 200 ಯೂನಿಟ್ ಒಳಗೆ ಬಳಸಿದವರಿಗೆ ಶೂನ್ಯ ಮೊತ್ತ ಬರುತ್ತದೆ ಎಂದು ಹೇಳಿದ್ದಾರೆ.

ಇನ್ನು ರಾಜ್ಯ ಬಿಜೆಪಿ ಹತ್ತು ಕೆಜಿ ಅಕ್ಕಿ ಎಲ್ಲಿ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ, ಹತ್ತು ಕೆಜಿ ಅಕ್ಕಿ ಬೇಕೋ ಬೇಡ್ವೋ..? ಕಾಂಗ್ರೆಸ್‌ ಜನರ ಕಿವಿ ಮೇಲೆ ಕಲರ್ ಕಲರ್ ಹೂವು ಇಡುತ್ತಿದೆ.  ಸಿದ್ದರಾಮಯ್ಯನವರೇ, ಜುಲೈ 1 ಕ್ಕೆ ಮೋದಿ ಸರ್ಕಾರದ ಉಚಿತ ಅಕ್ಕಿ ಕರ್ನಾಟಕದ ಜನರಿಗೆ ಈಗಾಗಲೇ ಸಿಕ್ಕಿದೆ. ಎಟಿಎಂ ಸರ್ಕಾರದ ಹತ್ತು ಕೆಜಿ ಅಕ್ಕಿ ಎಲ್ಲಿದೆ? ಎಂದು ಪ್ರಶ್ನಿಸಿದೆ.

suddiyaana