ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 10 ಕೆ.ಜಿ ಪಡಿತರ – ಯಾವಗಿನಿಂದ ಈ ಯೋಜನೆ ಜಾರಿ?

ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 10 ಕೆ.ಜಿ ಪಡಿತರ – ಯಾವಗಿನಿಂದ ಈ ಯೋಜನೆ ಜಾರಿ?

ಬೆಂಗಳೂರು: ಕಾಂಗ್ರೆಸ್‌ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್‌ ಕೊನೆಗೂ ಜಾರಿಗೆ ತಂದಿದೆ. ಇದೀಗ  ʼಅನ್ನಭಾಗ್ಯʼ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್​ದಾರರಿಗೆ ಪ್ರತಿ ಸದಸ್ಯರಿಗೆ 10 ಕೆಜಿ ಆಹಾರಧಾನ್ಯ ವಿತರಿಸಲಾಗುವುದು. ಜುಲೈ 1ರಿಂದ 10 ಕೆಜಿ ಆಹಾರಧಾನ್ಯ ನೀಡಲು ನಿರ್ಧರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ  ಘೋಷಿಸಿದ್ದಾರೆ.

ಇದನ್ನೂ ಓದಿ: ಆಡಳಿತ ಮಂಡಳಿ ಮಾಡಿದ ಸಾಲಕ್ಕೆ ಶಾಲೆಯೇ ಸೀಜ್! – ಏನೂ ತಪ್ಪು ಮಾಡದ ಮಕ್ಕಳಿಗೆ ಯಾಕೆ ಈ ಶಿಕ್ಷೆ?  

ಸಚಿವ ಸಂಪುಟ ಸಭೆಯ ಬಳಿಕ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 3ನೇ ಗ್ಯಾರಂಟಿಯಾದ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದರು. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ 7 ಕೆಜಿ ಅಕ್ಕಿ ಬದಲಾಗಿ 5 ಕೆಜಿ ಕೊಡುತ್ತಿತ್ತು. ಚುನಾವಣಾ ಸಂದರ್ಭದಲ್ಲಿ ನಾವು ಅಧಿಕಾರಕ್ಕೆ ಬಂದರೆ ಉಚಿತ 10 ಕೆಜೆ ಅಕ್ಕಿ ನೀಡುವುದಾಗಿ ಭರವಸೆಯನ್ನು ನೀಡಿದ್ದೇವು ಎಂದು ಹೇಳಿದರು. ಅದರಂತೆ ಬಿಪಿಎಲ್​ ಕಾರ್ಡ್​ ಹೊಂದಿರುವ ಪ್ರತಿ ಕುಟುಂಬಗಳಿಗೆ 10 ಕೆಜಿ ಆಹಾರಧಾನ್ಯವನ್ನು ವಿತರಿಸುತ್ತೇವೆ ಅಂದು ಹೇಳಿದರು.

ಅಂತ್ಯೋದಯ ಕಾರ್ಡ್ ಇರುವ  ಕುಟುಂಬಕ್ಕೆ 35 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಈಗ ಈ ಕಾರ್ಡ್‌ಗೂ ತಲಾ 10 ಕೆಜಿ ನೀಡಲಾಗುತ್ತದೆ. ಸದ್ಯ ಎಲ್ಲರಿಗೂ 10 ಕೆಜಿ ಕೊಡುವಷ್ಟು ಸಂಗ್ರಹ ಇಲ್ಲದ ಕಾರಣ ಜುಲೈ 1 ರಿಂದ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

suddiyaana