SRH ಒಡತಿ ಅದ್ದೂರಿ ವಿವಾಹ.. ಗ್ರೀಸ್ ನಲ್ಲಿ ಮದ್ವೆ, ಚೆನ್ನೈನಲ್ಲಿ ರಿಸೆಪ್ಷನ್! – ಕಾವ್ಯ-ಅನಿರುದ್ಧ್ ಮದ್ವೆಗೆ ಮೋದಿ ಗೆಸ್ಟ್?

SRH ಒಡತಿ ಅದ್ದೂರಿ ವಿವಾಹ.. ಗ್ರೀಸ್ ನಲ್ಲಿ ಮದ್ವೆ, ಚೆನ್ನೈನಲ್ಲಿ ರಿಸೆಪ್ಷನ್! – ಕಾವ್ಯ-ಅನಿರುದ್ಧ್ ಮದ್ವೆಗೆ ಮೋದಿ ಗೆಸ್ಟ್?

ಕಾವ್ಯ ಮಾರನ್..‌ ಐಪಿಎಲ್‌ನಲ್ಲಿ ಆಟಗಾರರು ಎಷ್ಟು ಸುದ್ದಿಯಲ್ಲಿರ್ತಾರೋ, ಅಷ್ಟೇ SRH ಒಡತಿ ಕಾವ್ಯ ಮಾರನ್‌ ಹೆಸರು ಕೂಡ ಸದ್ದು ಮಾಡ್ತಿರುತ್ತೆ. ಮೈದಾನದಲ್ಲಿ ತಮ್ಮ ತಂಡವನ್ನು ಹುರಿದುಂಬಿಸುವಲ್ಲಿ ಸದಾ ಮುಂದೆ ಇರ್ತಾರೆ. ಎಲ್ಲಾ ಸೀಸನ್‌ಗಳಲ್ಲೂ ಕಾವ್ಯ ಮಾರನ್ ಮೈನ್ ಅಟ್ರಾಕ್ಷನ್ ಅಂದ್ರೆ ತಪ್ಪಾಗಲ್ಲ. ಇದೀಗ ಕಾವ್ಯ ಮಾರನ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಸೂಪರ್ ಸ್ಟಾರ್ ರಜನೀಕಾಂತ್ ಅವರ ಸೋದರಳಿಯ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಬೆನ್ನಲ್ಲೇ ಕಾವ್ಯ ಮಾರನ್‌ ಮದ್ವೆ ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ಯಾರೆಲ್ಲಾ ಮದುವೆಗೆ ಬರ್ತಾರೆ ಅನ್ನೋ ಚರ್ಚೆ ನಡಿತಾ ಇದೆ.

ಇದನ್ನೂ ಓದಿ: ಕೊಹ್ಲಿ Vs ಬಾಬರ್.. ಧೋನಿ Vs ಜಾವೇದ್ – ಭಾರತೀಯರೇ GREAT ಎಂದ ಯೂನಿಸ್

ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಹಾಗೂ ಕಾಲಿವುಡ್‌ನ ಮ್ಯೂಸಿಕ್‌ ಸೆನ್ಸೇಷನ್‌ ಅನಿರುದ್ಧ್‌ ರವಿಚಂದರ್‌ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲ ವರ್ಷಗಳಿಂದ ಸದ್ದು ಮಾಡುತ್ತಿತ್ತು. ಇದೀಗ ಈ ಸ್ಟಾರ್‌ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ಕಾವ್ಯ ಮಾರನ್‌ ಹಾಗೂ ಅನಿರುದ್ದ್‌ ಸಿನಿಮಾ ಸ್ಟಾರ್ಸ್‌, ರಾಜಕೀಯ ಗಣ್ಯರಿಗೆ ಇನ್ವಿಟೇಷನ್‌ ಕಾರ್ಡ್‌ ಕೊಟ್ಟು ಮದುವೆ ಆಹ್ವಾನಿಸ್ತಿರೋ ಫೋಟೋಗಳು  ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಈ ಬೆನ್ನಲ್ಲೇ ಕಾವ್ಯ ಮಾರನ್‌ ಮದುವೆ ಯಾವಾಗ? ಎಲ್ಲಿ ಮದ್ವೆ? ಯಾರೆಲ್ಲಾ ಕಾರ್ಯಕ್ರಮಕ್ಕೆ ಬರ್ತಾರೆ ಅನ್ನೋ ಕುತೂಹಲ ಫ್ಯಾನ್ಸ್‌ಗೆ ಕಾಡ್ತಿದೆ.

ಅಂದ್ಹಾಗೆ ಕಾವ್ಯ ಮಾರನ್‌ ಹಾಗೂ ಅನಿರುದ್ಧ್‌ ಇದೇ ನವೆಂಬರ್ 10 ಮತ್ತು 11ರಂದು ಗ್ರೀಸ್‌ನಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಗ್ರ್ಯಾಂಡ್ ವೆಡ್ಡಿಂಗ್ ನಡೆಯಲಿದ್ದು, ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಮಾರನ್ ಕುಟುಂಬ ವಹಿಸಿಕೊಂಡಿದೆ ಅನ್ನಲಾಗ್ತಿದೆ. ಇನ್ನು ಮದುವೆಯಾದ ಬಳಿಕ ಅದ್ದೂರಿ ರಿಸೆಪ್ಷನ್‌ ಕೂಡ ಆಯೋಜಿಸಲಾಗಿದೆ. ನವೆಂಬರ್ 21ರಂದು ಚೆನ್ನೈನಲ್ಲಿ ಅದ್ದೂರಿ ಆರತಕ್ಷತೆ ಆಯೋಜಿಸಲಾಗಿದೆ. ಈ ಗ್ರ್ಯಾಂಡ್ ರಿಸೆಪ್ಷನ್‌ಗೆ ರಾಜಕೀಯ, ಸಿನಿಮಾ ಹಾಗೂ ಉದ್ಯಮ ಕ್ಷೇತ್ರದ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,  ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತಮಿಳುನಾಡು ಸಿಎಂ ವಿಜಯ್, ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಕರ್ನಾಟಕ ಸಿಎಂ ಡಿಕೆ ಶಿವಕುಮಾರ್, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಮುಂತಾದ ಗಣ್ಯರನ್ನ ಮದುವೆ ಇನ್ವೈಟ್‌ ಮಾಡಲಾಗಿದೆ.

ಇನ್ನು ಚಿತ್ರರಂಗ ಹಾಗೂ ಕಲಾ ಕ್ಷೇತ್ರದಿಂದಲೂ ದೊಡ್ಡ ಮಟ್ಟದ ತಾರಾಗಣ ಈ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಚಲನಚಿತ್ರ ಉದ್ಯಮದಿಂದ ಹಲವಾರು ಪ್ರಮುಖ ನಟರು, ಸಂಗೀತಗಾರರು ಮತ್ತು ಚಲನಚಿತ್ರ ನಿರ್ಮಾಪಕರು ಭಾಗವಹಿಸುವ ನಿರೀಕ್ಷೆಯಿದೆ. ಆಹ್ವಾನಿತ ಅತಿಥಿಗಳ ಪೈಕಿ ರಜನಿಕಾಂತ್, ಎ.ಆರ್. ರೆಹಮಾನ್, ಕಮಲ್ ಹಾಸನ್, ಧನುಷ್ ಹಾಗೂ ಅಜಿತ್ ಕುಮಾರ್ ಮತ್ತು ಅವರ ಪತ್ನಿ ಶಾಲಿನಿ ಅಜಿತ್ ಕುಮಾರ್, ಅಲ್ಲು ಅರ್ಜುನ್ ಮತ್ತು ಅವರ ಪತ್ನಿ ಸ್ನೇಹಾ ಅಲ್ಲು ರೆಡ್ಡಿ, ಶಿವಕಾರ್ತಿಕೇಯನ್ ಮತ್ತು ಅವರ ಪತ್ನಿ ಆರತಿ, ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್, ಆಂಡ್ರಿಯಾ ಜೆರೆಮಿಯಾ, ಪ್ರಸನ್ನ ಮತ್ತು ಸೂರಜ್ ವೆಂಜರಮೂಡು ಸೇರಿದಂತೆ ಹಲವು ಜನಪ್ರಿಯ ಕಲಾವಿದರಿಗೆ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.

ಇನ್ನು ಮದುವೆಗೆ ಬರುವ ಬಂಧು-ಮಿತ್ರರಿಗಾಗಿ ಮಾರನ್ ಕುಟುಂಬವು 4 ಚಾರ್ಟರ್ಡ್ ವಿಮಾನಗಳನ್ನು ಬುಕ್ ಮಾಡಿದೆ ಅಂತ ಹೇಳಲಾಗ್ತಿದೆ. ಇದರಲ್ಲಿ ಬಂಧು-ಮಿತ್ರರನ್ನು ಗ್ರೀಸ್‌ಗೆ ಕರೆದೊಯ್ದು, ಅಲ್ಲಿ ಕಾರ್ಯಕ್ರಮ ಮುಗಿದ ನಂತರ ಭಾರತಕ್ಕೆ ಮರಳಿ ಕರೆತರಲಾಗುವುದು. ಕಲಾನಿಧಿ ಮಾರನ್ ಕುಟುಂಬ, ಸ್ಟಾಲಿನ್ ಕುಟುಂಬ, ಅನಿರುಧ್ ಕುಟುಂಬ, ರಜನಿಕಾಂತ್ ಕುಟುಂಬಗಳು ಈ ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲದೆ, ಕಾವ್ಯಾ ಮಾರನ್ – ಅನಿರುಧ್ ಅವರ ರಿಸೆಪ್ಷನ್ ಅನ್ನ ವಿಭಿನ್ನವಾಗಿ ಯೋಜಿಸಲಾಗಿದೆ. ಮೂರು ವಿಭಿನ್ನ ಸ್ಥಳಗಳಲ್ಲಿ ಈ ಔತಣಕೂಟ ನಡೆಯಲಿದೆ. ಇದರಲ್ಲಿ ಸನ್ ನೆಟ್‌ವರ್ಕ್, ಸನ್ ಗ್ರೂಪ್ ನೌಕರರಿಗಾಗಿ ಒಂದು ರಿಸೆಪ್ಷನ್ ಇರಲಿದೆ. ಸಿನಿಮಾ, ರಾಜಕೀಯ, ಕ್ರೀಡಾ, ವ್ಯಾಪಾರ ಕ್ಷೇತ್ರದ ಗಣ್ಯರಿಗೂ ಒಂದೇ ಸ್ಥಳದಲ್ಲಿ ಅಲ್ಲದೆ, ಬೇರೆ ಬೇರೆ ಕಡೆಗಳಲ್ಲಿ ರಿಸೆಪ್ಷನ್‌ಗಳು ಇರಲಿವೆ ಎನ್ನಲಾಗ್ತಿದೆ. ಒಟ್ಟಾರೆ ಕಾವ್ಯ ಮಾರನ್‌ ಹಾಗೂ ಅನಿರುದ್ಧ್‌ ಮದುವೆ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡ್ತಿದೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಸ್ಟಾರ್‌ ಜೋಡಿಗೆ ನೀವೂ ಶುಭಹಾರೈಸಿ.

Shwetha M

Leave a Reply

Your email address will not be published. Required fields are marked *