ರಿಲೀಸ್‌ಗೂ ಮೊದಲೇ ‘ಜವಾನ್’ ಚಿತ್ರದ ದಾಖಲೆ ಪುಡಿಪುಡಿ – ಅನಿಮಲ್ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ

ರಿಲೀಸ್‌ಗೂ ಮೊದಲೇ ‘ಜವಾನ್’ ಚಿತ್ರದ ದಾಖಲೆ ಪುಡಿಪುಡಿ – ಅನಿಮಲ್ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ

ಬಾಲಿವುಡ್ ಸಿನಿಮಾ ಸ್ಪೆಷಾಲಿಟಿಯೇ ಹಾಗೆ. ರಿಲೀಸ್‌ಗೂ ಮೊದಲು ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡುವುದು. ಜವಾನ್ ಸಿನಿಮಾ ನಂತರ ಈಗ ಮತ್ತೊಂದು ಸಿನಿಮಾ ಸಖತ್ ಸುದ್ದಿ ಮಾಡ್ತಿದೆ. ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್’ ಚಿತ್ರ ಈಗ ರಿಲೀಸ್‌ಗೂ ಮೊದಲೇ ‘ಜವಾನ್’ ಚಿತ್ರದ ದಾಖಲೆಯನ್ನು ಪುಡಿ ಪುಡಿ ಮಾಡಿದೆ.

ಇದನ್ನೂ ಓದಿ: ಸ್ಟಾರ್ ಕ್ರಿಕೆಟರ್ ಶುಭ್‌ಮನ್ ಗಿಲ್ ದಿಲ್ ಗೆದ್ದಿದ್ದು ಸಾರಾ ತೆಂಡೂಲ್ಕರ್..! – ಸಾರಾ ಅಲಿ ಖಾನ್ ಮಾತು ಕೇಳಿ ಫ್ಯಾನ್ಸ್ ಖುಷ್

ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್’ ಚಿತ್ರ ರಿಲೀಸ್‌ಗೂ ಮೊದಲೇ  ಸಾಕಷ್ಟು ಸುದ್ದಿ ಮಾಡುತ್ತಿದೆ. ರಿಲೀಸ್‌ಗೂ ಮೊದಲೇ ಈ ಚಿತ್ರ ‘ಜವಾನ್’ ಚಿತ್ರದ ದಾಖಲೆಯನ್ನು ಮುರಿದಿದೆ. ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಡಬಲ್ ಶೇಡ್‌ ಪಾತ್ರ ಮಾಡುತ್ತಿದ್ದಾರೆ. ಸಿನಿಮಾ ರಾ ಆಗಿದೆ ಹಾಗೂ ಕಥಾ ನಾಯಕನಿಗೆ ಎರಡು ಶೇಡ್ ಇದೆ ಅನ್ನೋದು ಟೀಸರ್ ಮೂಲಕ ಗೊತ್ತಾಗಿದೆ. ಈ ಕಾರಣದಿಂದಲೇ ‘ಅನಿಮಲ್’ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಈ ಚಿತ್ರ ಅಮೆರಿಕದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ‘ಅನಿಮಲ್’ ಸಿನಿಮಾ ಉತ್ತರ ಅಮೆರಿಕದಲ್ಲಿ 888 ಪರದೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಮೊದಲು ರಿಲೀಸ್ ಆದ ‘ಜವಾನ್’ ಚಿತ್ರಕ್ಕೆ ಈ ಭಾಗದಲ್ಲಿ 850 ಪರದೆಗಳು ಸಿಕ್ಕಿದ್ದವು. ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ 810 ಪರದೆಗಳು ದೊರೆತಿದ್ದವು. ಈ ದಾಖಲೆಯನ್ನು ‘ಅನಿಮಲ್’ ಸಿನಿಮಾ ಮುರಿದು ಹಾಕಿದೆ. ಅಮೆರಿಕದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಹಿಂದಿ ಸಿನಿಮಾ ಎನ್ನುವ ಜನಪ್ರಿಯತೆ ಈ ಚಿತ್ರಕ್ಕೆ ಸಿಕ್ಕಿದೆ. ಬಾಕ್ಸ್ ಆಫೀಸ್ನಲ್ಲಿ ‘ಜವಾನ್’ ಹಾಗೂ ‘ಬ್ರಹ್ಮಾಸ್ತ್ರ’ ಸಿನಿಮಾ ಒಳ್ಳೆಯ ಗಳಿಕೆ ಮಾಡಿದ್ದವು. ಕೇವಲ ಭಾರತ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರಕ್ಕೆ ಒಳ್ಳೆಯ ಗಳಿಕೆ ಆಗಿತ್ತು. ಈಗ ‘ಅನಿಮಲ್’ ಚಿತ್ರಕ್ಕೆ ವಿದೇಶದಲ್ಲಿ ಹೆಚ್ಚು ಸ್ಕ್ರೀನ್ ಸಿಗುತ್ತಿರುವುದರಿಂದ ಸಹಜವಾಗಿಯೇ ಗಳಿಕೆ ಹೆಚ್ಚಲಿದೆ. ಇದರಿಂದ ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ. ಟಿ-ಸೀರಿಸ್ ಮೂಲಕ ಭೂಷಣ್ ಕುಮಾರ್, ಕ್ರಿಶನ್ ಕುಮಾರ್ ಮೊದಲಾದವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಣಬೀರ್, ರಶ್ಮಿಕಾ ಜೊತೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಡಿಸೆಂಬರ್ 1ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದೆ.

Sulekha