41ನೇ ವರ್ಷಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ರಣ್‌ಬೀರ್ ಕಪೂರ್ – ಅನಿಮಲ್ ಸಿನಿಮಾ ತಂಡದಿಂದ ಟೀಸರ್ ರಿಲೀಸ್

41ನೇ ವರ್ಷಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ರಣ್‌ಬೀರ್ ಕಪೂರ್ – ಅನಿಮಲ್ ಸಿನಿಮಾ ತಂಡದಿಂದ ಟೀಸರ್ ರಿಲೀಸ್

ಬಾಲಿವುಡ್‌ ಸ್ಟಾರ್ ರಣ್‌ಬೀರ್ ಕಪೂರ್ 41ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಣ್‌ಬೀರ್ ಕಪೂರ್ ಬರ್ತ್‌ಡೇ ಸಂಭ್ರಮದಲ್ಲಿ ಅನಿಮಲ್ ಸಿನಿಮಾ ತಂಡ ಸರ್‌ಪ್ರೈಸ್ ಗಿಫ್ಟ್ ನೀಡಿದೆ. ಈ ವಿಶೇಷ ದಿನದಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅನಿಮಲ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ. ಸಿನಿಮಾ ಬಗ್ಗೆ ಇರುವ ನಿರೀಕ್ಷೆಯನ್ನು ಈ ಟೀಸರ್ ಹೆಚ್ಚಿಸಿದೆ.

ಇದನ್ನೂ ಓದಿ: ಮೂನ್ ವಾಕ್ ವೇಳೆ ಮೈಕಲ್ ಜಾಕ್ಸನ್ ಧರಿಸುತ್ತಿದ್ದ ಟೋಪಿ ಹರಾಜು – ಅಬ್ಬಬ್ಬಾ ಎಷ್ಟು ಬೆಲೆಗೆ ಮಾರಾಟ ಗೊತ್ತಾ?

ರಣಬೀರ್ ಕಪೂರ್ ಅವರು ಅನಿಮಲ್ ಸಿನಿಮಾದಲ್ಲಿ ಎರಡು ಶೇಡ್‌ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯಂತಿರುವ ಕಥಾ ನಾಯಕ ಅನಿಮಲ್ ರೀತಿ ಆಗುತ್ತಾನೆ. ಇದಕ್ಕೆ ಕಾರಣ ಏನು ಎಂಬುದನ್ನು ವಿವರಿಸುವ ರೀತಿಯಲ್ಲಿ ಟೀಸರ್ ಮೂಡಿ ಬಂದಿದೆ. ಡಿಸೆಂಬರ್ 1ರಂದು ಈ ಚಿತ್ರ ರಿಲೀಸ್ ಆಗಲಿದೆ. ಸದ್ಯ ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ. ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ಕಥಾ ನಾಯಕ (ರಣಬೀರ್ ಕಪೂರ್) ಶ್ರೀಮಂತ ಕುಟುಂಬದವನು. ವಿಶ್ವ ಸುತ್ತು, ಎರಡು-ಮೂರು ಸ್ಪೋರ್ಟ್ಸ್ ಕಾರನ್ನು ಆ್ಯಕ್ಸಿಡೆಂಟ್ ಮಾಡು, ಅಫೇರ್ ಇಟ್ಟುಕೋ. ಆಗ ನಿನ್ನ ಕಣ್ಣು ತೆರೆಯಬಹುದು ಎಂಬ ಮಾತನ್ನು ಕಥಾ ನಾಯಕ ಗಂಭಿರವಾಗಿ ತೆಗೆದುಕೊಳ್ಳುತ್ತಾನೆ. ಅಲ್ಲಿಂದ ಕಥೆ ಶುರುವಾಗುತ್ತದೆ. ಅನಿಲ್ ಕಪೂರ್, ಬಾಬಿ ಡಿಯೋಲ್ ಪಾತ್ರವೂ ಅನಿಮಲ್ ಸಿನಿಮಾದಲ್ಲಿ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಬರುವ ಆ್ಯಕ್ಷನ್ ದೃಶ್ಯಗಳು ಮೈ ನವಿರೇಳಿಸುವಂತಿದೆ. ಅನಿಮಲ್ ಟೀಸರ್ ನೋಡಿದ ಅಭಿಮಾನಿಗಳು ಕೂಡಾ ರಣಬೀರ್ ಗೆಲುವು ಕಾಣೋದು ಪಕ್ಕಾ ಎನ್ನುತ್ತಿದ್ದಾರೆ.

Sulekha