ರಣ್‌ಬೀರ್ ಜೊತೆ ರಶ್ಮಿಕಾ ರೊಮ್ಯಾನ್ಸ್.. ಬಾಲಿವುಡ್ ನಲ್ಲಿ ವಂಗಾ ಮ್ಯಾಜಿಕ್ – ಅನಿಮಲ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್
ಬಾಲಿವುಡ್ನ ಬಹುನಿರೀಕ್ಷಿತ ಅನಿಮಲ್ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿದ್ದ ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅನಿಮಲ್ ಸಿನಿಮಾ ಸಖತ್ ಸದ್ದು ಮಾಡ್ತಿದೆ.
ಅನಿಮಲ್ ಟ್ರೇಲರ್ ರಿಲೀಸ್ ಆದಾಗಲೇ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿತ್ತು. ಇದೊಂದು ಮಾಸ್ ಮೂವಿ ಎನ್ನುವ ಹಿಂಟ್ ಕೊಟ್ಟಿತ್ತು. ಅದರಂತೆಯೇ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳಿವೆ. ಇದೇ ಕಾರಣಕ್ಕೆ ಅನಿಮಲ್ ಸಿನಿಮಾಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ. ವಿಶ್ವಾದ್ಯಂತ ರಿಲೀಸ್ ಆಗಿರುವ ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಎರಡು ಡಿಫರೆಂಟ್ ಶೇಡ್ ಇರುವ ಪಾತ್ರವನ್ನು ನಿಭಾಯಿಸಿದ್ದಾರೆ. ಌಕ್ಷನ್ ದೃಶ್ಯಗಳೇ ಹೆಚ್ಚಾಗಿರೋದ್ರಿಂದ ಮಾಸ್ ಪ್ರಿಯರಿಗೆ ಮಸ್ತ್ ಮನರಂಜನೆ ನೀಡ್ತಿದೆ.
ಇದನ್ನೂ ಓದಿ : ಬಿಗ್‌ಬಾಸ್ ಮನೆ ಬುದ್ದಿವಂತ ಡ್ರೋನ್‌ಗೆ ಕಳಪೆ ಪಟ್ಟ –ಮೂರ್ಖತನಕ್ಕೆ ಬೆಲೆತೆರಲೇಬೇಕಿತ್ತು ಪ್ರತಾಪ್
ಸಿನಿಮಾದಲ್ಲಿ ತಂದೆ ಮಗನ ಬಗೆಗಿನ ಸಂಬಂಧವನ್ನ ಹೊಸ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಯಾಕಂದ್ರೆ ಸಿನಿಮಾದ ಕಥೆ ಶುರುವಾಗೋದೇ ಅಪ್ಪ ಮನಗ ಸಂಬಂಧದ ಮೂಲಕ. ರೌಡಿ ಥರ ಆಡುವ ಮಗನ ವರ್ತನೆಗೆ ಬೇಸತ್ತ ತಂದೆ ಆತನನ್ನ ಬೋರ್ಡಿಂಗ್ ಶಾಲೆಗೆ ಸೇರಿಸ್ತಾರೆ. ಆದ್ರೆ ಮಗ ವಾಪಸ್ ಮನೆಗೆ ಬಂದ ಬಳಿಕವೂ ತನ್ನ ಸೋದರ ಮಾವನ ಜೊತೆ ಜಗಳ ಮಾಡಿಕೊಳ್ತಾನೆ. ಆಗ ಅಪ್ಪ ಮಗನ ನಡುವಿನ ಗ್ಯಾಪ್ ಮತ್ತಷ್ಟು ಹೆಚ್ಚಾಗುತ್ತೆ. ಈ ವೇಳೆ ಅಮೆರಿಕಕ್ಕೆ ತೆರಳುವ ಮಗನಿಗೆ 8 ವರ್ಷಗಳ ಬಳಿಕ ತನ್ನ ತಂದೆ ಮೇಲೆ ಯಾರೋ ಅಟ್ಯಾಕ್ ಮಾಡಿದ್ದಾರೆ ಅನ್ನೋ ಸತ್ಯ ಗೊತ್ತಾಗುತ್ತೆ. ಬಳಿಕ ಆತ ಅಮೆರಿಕದಿಂದ ಇಂಡಿಯಾಗೆ ವಾಪಸ್ ಆಗ್ತಾನೆ. ಅಲ್ಲಿಂದ ಇಡೀ ಸಿನಿಮಾದ ಕಥೆ ಬೇರೆಯದ್ದೇ ತಿರುವು ಪಡೆದುಕೊಳ್ಳುತ್ತೆ. ಮುಂದೆ ಏನಾಯ್ತು, ಯಾರು ವಿಲನ್, ಕ್ರೈಂ ಕಥೆಗೆ ಕಾರಣ ಯಾರು ಅನ್ನೋದನ್ನ ಕಟ್ಟಿಕೊಡಲಾಗಿದೆ. ಇನ್ನು ಕನ್ನಡದ ಕುವರಿ ನಟಿ ರಶ್ಮಿಕಾ ಹಾಗೂ ರಣಬೀರ್ ಲವ್ ಸ್ಟೋರಿ ಹೇಗೆ ಶುರುವಾಯ್ತು ಅನ್ನೋದನ್ನ ನೀವು ಸಿನಿಮಾ ನೋಡಿಯೇ ತಿಳಿಯಬೇಕು. ಸಾಮಾನ್ಯವಾಗಿ ಆ್ಯಕ್ಷನ್ ಸಿನಿಮಾಗಳಲ್ಲಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಭಾರೀ ಹೈಲೈಟ್ ಆಗುತ್ತೆ. ಸೀನ್ನ ತೂಕ ಹೆಚ್ಚಿಸೋದೇ ಬಿಜಿಎಂ. ಅನಿಮಲ್ ಮೂವಿ ವಿಚಾರದಲ್ಲಿ ಅದು ವರ್ಕೌಟ್ ಆಗಿದೆ. ರಣಬೀರ್ ಭರ್ಜರಿ ಫೈಟಿಂಗ್ ಸೀನ್ಗಳಲ್ಲಿ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಗೂಸ್ಬಂಪ್ಸ್ ಬರಿಸುವಂತಿದೆ. ಸಿನಿಮಾದ ಬಿಜಿಎಂ, ಸಿನಿಮಾಟೋಗ್ರಫಿ, ಡೈರೆಕ್ಷನ್, ಆ್ಯಕ್ಷನ್ ಹೀಗೆ ಎಲ್ಲದರ ಬಗ್ಗೆಯೂ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದು ಅಚ್ಚರಿಯ ವಿಷಯ ಅಂದ್ರೆ ಅನಿಮಲ್ ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ 21 ನಿಮಿಷ ಇದೆ. ಸಾಮಾನ್ಯವಾಗಿ ಸಿನಿಮಾ ನೋಡೋರಿಗೆ ಚಿತ್ರದ ಅವಧಿ ಜಾಸ್ತಿ ಇದ್ರೆ ಬೇಜಾರಾಗುತ್ತೆ. ಸ್ಟೋರಿ ಲ್ಯಾಗ್ ಮಾಡಿದ್ದಾರೆ ಅನ್ಸೋಕೆ ಶುರು ಆಗುತ್ತೆ. ಹಾಗಿದ್ದರೂ ಕೂಡ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಡೈರೆಕ್ಟನ್ಗೆ ಫುಲ್ ಮಾರ್ಕ್ಸ್ ಕೊಡ್ತಿದ್ದಾರೆ.
ರಣಬೀರ್ಗೆ ಎಲ್ಲ ಕಡೆಗಳಲ್ಲೂ ಅಭಿಮಾನಿಗಳಿದ್ದು, ರಶ್ಮಿಕಾ ಮಂದಣ್ಣ ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೀಗಾಗೇ ಇಬ್ಬರ ಜೋಡಿ ಸಖತ್ತಾಗೇ ಮೋಡಿ ಮಾಡ್ತಿದೆ. ಮೊದಲ ದಿನವೇ ಹಲವೆಡೆ ಥಿಯೇಟರ್ಗಳು ಹೌಸ್ಫುಲ್ ಆಗಿರೋದ್ರಿಂದ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಬಹುದು ಎಂದು ಲೆಕ್ಕಾಚಾರ ಹಾಕಲಾಗ್ತಿದೆ. ವಿಶ್ವಾದ್ಯಂತ ಮೊದಲ ದಿನ 60 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿದೆ. ಯಾಕಂದ್ರೆ ಅನಿಮಲ್ ಸಿನಿಮಾಗೆ ಬಾಲಿವುಡ್ ಮಾತ್ರವಲ್ಲದೆ ಬಹುತೇಕ ಎಲ್ಲ ರಾಜ್ಯಗಳಲ್ಲೂ ಉತ್ತಮ ಓಪನಿಂಗ್ ಸಿಕ್ಕಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಭಾಷೆಯಲ್ಲಿ ಸಿನಿಮಾ ಮೋಡಿ ಮಾಡ್ತಿದೆ. ಸಿನಿಮಾದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಇದೆ. ಹಿಂದಿ ಜತೆಗೆ ತೆಲುಗು, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಅನಿಮಲ್ ಸಿನಿಮಾ ರಿಲೀಸ್ ಆಗಿದ್ದು, ದೊಡ್ಡ ಮಟ್ಟದ ಓಪನಿಂಗ್ ಸಹ ಸಿಕ್ಕಿದೆ. ರಣಬೀರ್ ಅಬ್ಬರದ ಆಕ್ಟಿಂಗ್ ಗೆ ಫಸ್ಟ್ ಡೇ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಮೂಡಿಸಿದೆ.