ಪ್ರವಾಸಿಗರ ಎದುರು ಹುಲಿ ದಿಢೀರ್ ಪ್ರತ್ಯಕ್ಷ! – ಮುಂದೇನಾಯ್ತು ಗೊತ್ತಾ?

ಪ್ರವಾಸಿಗರ ಎದುರು ಹುಲಿ ದಿಢೀರ್ ಪ್ರತ್ಯಕ್ಷ! – ಮುಂದೇನಾಯ್ತು ಗೊತ್ತಾ?

ಸಫಾರಿಗೆ ಹೋದಾಗ ಕೆಲವೊಂದು ಬಾರಿ ಪ್ರಾಣಿಗಳು ಪ್ರವಾಸಿಗರ ಮೇಲೆ ದಾಳಿ ಮಾಡುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇಲ್ಲೊಂದು ಪ್ರವಾಸಿಗರ ಗುಂಪು ಅರಣ್ಯದ ಸೌಂದರ್ಯವನ್ನು ನೋಡುತ್ತ  ವಾಹನದಲ್ಲಿ ಮುಂದೆ ಸಾಗುತ್ತಿದ್ದಾಗ ಅಲ್ಲಿಯೇ ಹಿಂಡಿನಲ್ಲಿದ್ದ ಹುಲಿ ಕೋಪಗೊಂಡು ದಾಳಿ ಮಾಡಲು ವಾಹನದ ಬಳಿ ಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಸಂತ ನಂದಾ ಅವರು ಈ ವೀಡಿಯೊವನ್ನು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹುಲಿಯೊಂದು ಪ್ರವಾಸಿಗರ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ಘಟನೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ವ್ಯಕ್ತಿ ಮುಂದೆ ಇದ್ದಕ್ಕಿಂದ್ದಂತೆ ಕರಡಿ ಪ್ರತ್ಯಕ್ಷ! – ಆಮೇಲೆ ಏನಾಯ್ತು ಗೊತ್ತಾ?

ವೈರಲ್ ಆದ ವಿಡಿಯೋದಲ್ಲಿ,ವಾಹನದಲ್ಲಿದ್ದ ಪ್ರವಾಸಿಗರು ಪೊದೆಗಳ ಹಿಂದೆ ಅಡಗಿಕೊಂಡಿರುವ ಹುಲಿಯನ್ನು ನೋಡಿದ್ದಾರೆ. ಕೂಡಲೇ ತಮ್ಮ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲು ಪ್ರಯತ್ನ ಮಾಡಿದ್ದಾರೆ. ಪ್ರವಾಸಿಗರನ್ನು ಕಂಡ ಹುಲಿ ಮುಂದೆ ಮುಂದೆ ಬರಲು ಆರಂಭಿಸಿದೆ. ನೋಡ ನೋಡುತ್ತಿದಂತೆ ಹುಲಿಯ ಜೋರಾಗಿ ಘರ್ಜಿಸುತ್ತಾ ವಾಹನದ ಬಳಿ ಬಂದಿದೆ. ಇದನ್ನು ಕಂಡ ಪ್ರವಾಸಿಗರು ಕಂಗಾಲಾಗಿ ಚೀರಿಕೊಂಡಿದ್ದಾರೆ. ಸಫಾರಿ ವಾಹನದ ಚಾಲಕ ಸ್ಮಾರ್ಟ್ ಆಗಿ ವಾಹನ ಚಲಾಯಿಸಿಕೊಂಡು ಬಂದಿದ್ದು, ಹುಲಿ ದಾಳಿಯಿಂದ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ. ಕಾಡಿನ ಪ್ರಾಣಿಗಳನ್ನು ನೋಡುವ ಉತ್ಸಾಹದಲ್ಲಿ ಕೆಲವೊಂದು ಬಾರಿ ಅಪಾಯವನ್ನು ಉಂಟು ಮಾಡಬಹುದು ಮತ್ತು ಅಲ್ಲಿ ಪ್ರಾಣಿಗಳ ಸಂಚಾರ ಹೇಗಿದೆ. ಅಲ್ಲಿ ವಾಸ ಮಾಡುತ್ತಿರುವ ಜನರ ದಿನನಿತ್ಯ ಚಟುವಟಿಕೆಯಲ್ಲಿ ಇಂತಹ ಅಪಾಯಗಳು ಹೇಗೆ ಬರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ಸುಸಂತ ನಂದಾ ಈ ವಿಡಿಯೋ ಜತೆಗೆ ಇದಕ್ಕೆ ಶೀರ್ಷಿಕೆಯನ್ನು ನೀಡಿದ್ದಾರೆ. “ಸನ್ಯಾಸಿ ಕಿರಿಕಿರಿಗೊಂಡಿದ್ದಾರೆ. ನಿಗದಿಪಡಿಸದ ಸಮಯದಲ್ಲಿ ಜನರು ನಿಮ್ಮ ಮನೆಗೆ ನುಗ್ಗಿದರೆ ನೀವು ಏನು ಮಾಡುತ್ತೀರಿ?” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 41 ಸಾವಿರ ಜನ ವೀಕ್ಷಿಸಿದ್ದು., ಹಲವಾರು ಬಳಕೆದಾರರು ಈ ವಿಡಿಯೋಗೆ ಕಮೆಂಟ್ ಮಾಡಿದ್ದು, ಸರಕಾರ ಈ ನಿಯಮ ಬದಲಾಯಿಸಿ ಜನರು ಸಫಾರಿಗೆ ಹೋಗುವುದನ್ನು ತಡೆಯಬೇಕು ಎಂದಿದ್ದಾರೆ. ಇನ್ನು ಕೆಲವು ಬಳಕೆದಾರರು ಇಂತಹ ಸಫಾರಿಗಳಿಂದಲೇ ಹಣ ಬರುತ್ತಿದ್ದು ಹುಲಿಗಳ ಸಂಖ್ಯೆ ಜಾಸ್ತಿಯಾಗಲು ಕಾರಣವಾಗಿದೆ ಎಂದಿದ್ದಾರೆ.

suddiyaana