ಬೆಂಕಿಯಲ್ಲಿ ಕಾಯಿಸಿದ ಚಾಕುವಿನಿಂದ ಮಗುವಿನ ಮುಖಕ್ಕೆ ಬರೆ ಎಳೆದ ಅಂಗನವಾಡಿ ಸಹಾಯಕಿ! – ಕಾರಣವೇನು ಗೊತ್ತಾ?

ಚಿಕ್ಕ ಮಕ್ಕಳು ಅಂದ್ಮೇಲೆ, ಆಟದ ಜೊತೆ ಜೊತೆಗೆ ಜಗಳ ಕೂಡ ಆಡ್ತಾರೆ. ಇನ್ನೂ ಅಂಗನವಾಡಿ, ಸ್ಕೂಲ್ನಲ್ಲೂ ಮಕ್ಕಳು ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಳ್ಳೋದು ಕಾಮನ್. ಇದೀಗ ಇಲ್ಲೊಂದು ಕಡೆ, ಪುಟ್ಟ ಮಗು, ಮತ್ತೊಂದು ಮಗುವಿಗೆ ಕಚ್ಚಿದ್ದಕ್ಕೆ ಅಂಗನವಾಡಿ ಸಹಾಯಕಿ ಬೆಂಕಿಯಲ್ಲಿ ಕಾಯಿಸಿದ ಚಾಕುವಿನಿಂದ ಮಗುವಿನ ಗಲ್ಲಕ್ಕೆ ಬರೆ ಎಳೆದಿದ್ದಾಳೆ.
ಇದನ್ನೂ ಓದಿ: ಮಾಟ – ಮಂತ್ರ ವಿಚಾರವಾಗಿ ಜಗಳ – ಹೆಂಡ್ತಿ ಮೇಲೆ ಬಿಸಿ ಮೀನು ಸಾರು ಎರಚಿದ ಪಾಪಿ ಪತಿ
ಈ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರುವರೆ ವರ್ಷದ ಮಗು ಯೋಧ ಮೂರ್ತಿ, ಬರೆಗೆ ತುತ್ತಾದ ಮಗು ಎಂದು ವರದಿಯಾಗಿದೆ.
ಚಿಕ್ಕಸವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 10 ಮಕ್ಕಳಿದ್ದಾರೆ. ಗುರುವಾರ ಬೆಳಗ್ಗೆ ಎಂದಿನಂತೆ ಮಕ್ಕಳು ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಜಗಳವಾಡಿದ್ದಾರೆ. ಯೋಧಮೂರ್ತಿ ಇನ್ನೊಬ್ಬ ಮಗುವಿಗೆ ಕಚ್ಚಿದ್ದಾನೆ. ಪರಸ್ಪರ ಜಗಳವಾಡುತ್ತಿದ್ದ ಮಕ್ಕಳನ್ನು ಬಿಡಿಸಲು ಬಂದ ಅಂಗನವಾಡಿ ಸಹಾಯಕಿ ಹೇಮಮ್ಮ ಎಂಬಾಕೆ ಚಾಕುವನ್ನು ಬೆಂಕಿಯಲ್ಲಿ ಕಾಯಿಸಿ ಯೋಧಮೂರ್ತಿಯ ಗಲ್ಲಕ್ಕೆ ಬರೆ ಎಳೆದಿದ್ದಾಳೆ. ಬಿಸಿಯ ಉರಿಯಿಂದ ಅಳತೊಡಗಿದ ಮಗು ಅಸ್ವಸ್ಥಗೊಂಡಿದ್ದು, ಸೊರಬ ಸಾರ್ವಜನಿಕ ಆಸತ್ರೆಗೆ ದಾಖಲಿಸಲಾಗಿದೆ. ಮಗುವಿನ ಪೋಷಕರು ಮಗುವಿಗೆ ಬರೆ ಎಳೆದ ಸಹಾಯಕಿ ವಿರುದ್ದ ದೂರು ನೀಡಿದ್ದು, ದೂರಿನನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಹೇಮಮ್ಮ ವಿರುದ್ಧ ದೂರು ದಾಖಲಾಗಿದೆ.

ನೋಡಿರಿ

