RCBಗಾಗಿ ENG ಆಫರ್ ರಿಜೆಕ್ಟ್! – ಟೆಸ್ಟ್ ಕೋಚ್ ಹುದ್ದೆಗೆ ಫ್ಲವರ್ ಸೆಡ್ಡು
ರೆಡ್ ಆರ್ಮಿ ಸಕ್ಸಸ್ ಗೆ ಶರಣಾದ್ರಾ?

RCBಗಾಗಿ ENG ಆಫರ್ ರಿಜೆಕ್ಟ್! – ಟೆಸ್ಟ್ ಕೋಚ್ ಹುದ್ದೆಗೆ ಫ್ಲವರ್ ಸೆಡ್ಡುರೆಡ್ ಆರ್ಮಿ ಸಕ್ಸಸ್ ಗೆ ಶರಣಾದ್ರಾ?

ಸತತ 17 ವರ್ಷಗಳ ಕಾಲ ಐಪಿಎಲ್​ನಲ್ಲಿ ಕಪ್ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆ ನಂತ್ರ 18 ಮತ್ತು 19ನೇ ಆವೃತ್ತಿಯಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್.. ಮುಂದಿನ ಆವೃತ್ತಿಗೂ ಕೂಡ ಮೋಸ್ಟ್ ಡೇಂಜರಸ್ ಟೀಂ. ಹಾಗಂತ ಪ್ಲೇಯರ್​ಗಳಿಂದ ಮಾತ್ರವೇ ತಂಡ ಸ್ಟ್ರಾಂಗ್ ಆಗಿಲ್ಲ. ಕೋಚಿಂಗ್ ಸ್ಟಾಫ್ಸ್ ಸ್ಟ್ರಾಟರ್ಜಿ ಕೂಡ ಚೆನ್ನಾಗಿ ವರ್ಕ್ ಆಗಿದೆ. ಅದ್ರಲ್ಲೂ ಆರ್​ಸಿಬಿ ಗೆಲುವಿನ ಕ್ರೆಡಿಟ್​ನಲ್ಲಿ ಹೆಡ್​ಕೋಚ್ ಌಂಡಿ ಫ್ಲವರ್​ಗೆ ಸಿಂಹಪಾಲು ಸಲ್ಲಲೇಬೇಕು. ಬೆಂಗಳೂರು ಟೀಂ ಜೊತೆ ಅದೆಷ್ಟು ಅಟ್ಯಾಚ್ ಆಗಿದ್ದಾರೆ ಅಂದ್ರೆ ಇಂಗ್ಲೆಂಡ್ ತಂಡದ ಕೋಚ್ ಹುದ್ದೆಯನ್ನೇ ರಿಜೆಕ್ಟ್ ಮಾಡಿದ್ದಾರೆ.

ಇದನ್ನೂ ಓದಿ : PAK ಆಟಗಾರನ ಗಾಂ*ಜಾ ಗಮ್ಮತ್ತು! – ನಶೆಯಲ್ಲಿ T-20WC ಆಡಿದ್ದ ನವಾಜ್

ಇಂಗ್ಲೆಂಡ್ ಮೆನ್ಸ್ ಟೆಸ್ಟ್ ತಂಡದ ಕೋಚ್ ಹುದ್ದೆಯಿಂದ ಬ್ರೆಂಡನ್ ಮೆಕಲಂ ಕೆಳಗಿಳಿದ ಬೆನ್ನಲ್ಲೇ ಹೊಸ ಕೋಚ್ ಯಾರು ಅಂತಾ ಇಸಿಬಿ ಒಂದಷ್ಟು ದಿಗ್ಗಜರ ಹೆಸರುಗಳನ್ನ ಶಾರ್ಟ್ ಲಿಸ್ಟ್ ಮಾಡ್ಕೊಂಡಿತ್ತು. ಆ್ಯಶಸ್ ಸರಣಿ ಗೆಲ್ಲುವ ಗುರಿಯೊಂದಿಗೆ ಕೆಲ ಹೆಸರುಗಳನ್ನ ಶಾರ್ಟ್ ಲಿಸ್ಟ್ ಕೂಡ ಮಾಡಿತ್ತು.. ಈ ರೇಸ್‌ನಲ್ಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ವಿ ಕೋಚ್ ಆ್ಯಂಡಿ ಫ್ಲವರ್ ಹೆಸರು ಕೂಡ ಇತ್ತು. ಌಂಡಿ ಫ್ಲವರ್ ಗಾಗಿ ಇಸಿಬಿ ಆಫರ್ ಮೇಲೆ ಆಫರ್ ಕೊಟ್ಟಿತ್ತು. ಆದ್ರೆ ಈ ಎಲ್ಲಾ ಆಫರ್​ಗಳನ್ನ ಫ್ಲವರ್ ನಿರಾಕರಿಸಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆ ನಿರಾಕರಿಸಿದ ಫ್ಲವರ್!

ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ರೇಸ್‌ನಲ್ಲಿದ್ದ ಆರ್​ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಈ ಆಫರ್​ನ ನಿರಾಕರಿಸಿದ್ದಾರೆ. ಬ್ರೆಂಡನ್ ಮೆಕಲಮ್ ಅವರ ವಜಾ ಬಳಿಕ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಫ್ಲವರ್ ಅವರನ್ನೇ ಫಸ್ಟ್ ಚಾಯ್ಸ್ ಆಗಿ ಸೆಲೆಕ್ಟ್ ಮಾಡಿದ್ರು. ಆದರೆ, ಆ್ಯಂಡಿ ಫ್ಲವರ್ ತಾವು ಆರ್‌ಸಿಬಿ ಮತ್ತು ಲಂಡನ್ ಸ್ಪಿರಿಟ್ ತಂಡಗಳ ಜವಾಬ್ದಾರಿಯಲ್ಲೇ ಸಂತೋಷವಾಗಿದ್ದೇನೆ. ಹೀಗಾಗಿ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗುತ್ತಿಲ್ಲ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಪ್ರೆಸ್​​ಮೀಟ್​ನಲ್ಲಿ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಅಷ್ಟಕ್ಕೂ ಇಲ್ಲಿ ಇಂಗ್ಲೆಂಡ್ ತಂಡ ಫ್ಲವರ್​​ರನ್ನ ಟೆಸ್ಟ್ ಕೋಚ್ ಆಗಿ ಅಂತಾ ಹೇಳೋಕೆ ಕಾರಣನೂ ಇದೆ. ಌಂಡಿ ಫ್ಲವರ್ ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗಿದ್ರು. ಈ ವೇಳೆ ತಂಡವನ್ನು ವಿಶ್ವದ ನಂ.1 ಸ್ಥಾನಕ್ಕೇರಿಸಿದ್ದರು ಮತ್ತು ಮೂರು ಬಾರಿ ಆಶಸ್ ಸರಣಿಯನ್ನು ಗೆದ್ದುಕೊಟ್ಟಿದ್ದರು. ಜಿಂಬಾಬ್ವೆಯವರಾದ ಫ್ಲವರ್ ಸದ್ಯ ದಿ ಹಂಡ್ರೆಡ್ ಟೂರ್ನಿಯಲ್ಲಿ ಲಂಡನ್ ಸ್ಪಿರಿಟ್ ತಂಡಕ್ಕೆ ಕೋಚ್ ಆಗಿದ್ದಾರೆ. ಜೊತೆಗೆ ಬೆಂಗಳೂರು ತಂಡದಲ್ಲೂ ಕೋಚ್ ಆಗಿ ನಿರ್ವಹಿಸ್ತಾ ಇದ್ದಾರೆ.

ಇಸಿಬಿ & ಐಪಿಎಲ್ ಎರಡೂ ಕಡೆ ಓಕೆ ಅಂದ್ರು ಒಪ್ಪದ ಫ್ಲವರ್!

ಅಷ್ಟಕ್ಕೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇಂಗ್ಲೆಂಡ್ ತಂಡ ಹಾಗೂ ಐಪಿಎಲ್ ಫ್ರಾಂಚೈಸಿ ಎರಡನ್ನೂ ನಿಭಾಯಿಸುವ ಬಿಗ್ ಆಫರ್​ನೇ ನೀಡಿತ್ತು. ಹೀಗಿದ್ರೂ ಫ್ಲವರ್ ಒಪ್ಪಿಲ್ಲ. ಅದಕ್ಕೆ ಕಾರಣ ಐಪಿಎಲ್ ನಡೆಯುವ ತಿಂಗಳುಗಳಲ್ಲಿ ಇಂಗ್ಲೆಂಡ್‌ನ ತವರಿನ ಕ್ರಿಕೆಟ್ ಸೀಸನ್‌ ಆರಂಭವಾಗುತ್ತೆ. ಹೀಗಾಗಿ ಎರಡೂ ಕಡೆ ಕ್ಲಾಶ್ ಆಗುತ್ತೆ. ಇಂಗ್ಲೆಂಡ್ ಕೋಚ್ ಆಗಿದ್ದರೆ ಇಂಗ್ಲೆಂಡ್​ನಲ್ಲೇ ಇದ್ದು ಆಟಗಾರರನ್ನು ಗಮನಿಸಬೇಕು. ಅದು ಸಾಧ್ಯವಾಗದ ಕಾರಣ ಈ ಆಫರ್ ಬೇಡವೆಂದೆ ಎಂದಿದ್ದಾರೆ. ಫ್ಲವರ್ ಅವ್ರ ಈ ನಿರ್ಧಾರದಿಂದ ಆರ್​ಸಿಬಿ ಮ್ಯಾನೇಜ್​ಮೆಂಟ್ ಅಂತೂ ಫುಲ್ ಖುಷಿಯಾಗಿದೆ. ಯಾಕಂದ್ರೆ ಆ್ಯಂಡಿ ಫ್ಲವರ್ ಆರ್‌ಸಿಬಿ ತಂಡದ ಯಶಸ್ಸಿನ ಮಾಸ್ಟರ್​ಮೈಂಡ್. 2025 ಮತ್ತು 2026ರ ಸೀಸನ್‌ಗಳಲ್ಲಿ ಆರ್‌ಸಿಬಿಗೆ ಚಾಂಪಿಯನ್ ಪಟ್ಟ ತಂದುಕೊಟ್ಟ ಕ್ರೆಡಿಟ್​ ಕೂಡ ಇದೆ. ಮುಂದಿನ ಐಪಿಎಲ್ ಸೀಸನ್‌ನ ಮಿನಿ ಹರಾಜು ಹಾಗೂ ತಂಡದ ರೀಕನ್ಸ್ಟ್ರಕ್ಟ್ ಉದ್ದೇಶದಿಂದ ಫ್ಲವರ್ ಬೆಂಗಳೂರು ತಂಡದಲ್ಲಿ ಇರೋದೇ ವಿಶೇಷ. ಆದ್ರೆ ಌಂಡಿ ಫ್ಲವರ್ ಅವ್ರ ನಿರ್ಧಾರದಿಂದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಲೆಬಿಸಿ ಜಾಸ್ತಿಯಾಗ್ತಿದೆ. ಆಗಸ್ಟ್ 19 ರಿಂದ ಪಾಕಿಸ್ತಾನ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಗೂ ಮುನ್ನ ಹೊಸ ಕೋಚ್ ಹುಡುಕಬೇಕಾದ ಅನಿವಾರ್ಯತೆಯೂ ಇದೆ.

Shantha Kumari

Leave a Reply

Your email address will not be published. Required fields are marked *