ಕೆರಿಬಿಯನ್ ಕಿಂಗ್ ರಸೆಲ್ ನಿವೃತ್ತಿ -ಆಲ್ರೌಂಡರ್ ಆ್ಯಂಡ್ರೆಗೆ ಅನ್ಯಾಯ ಆಯ್ತಾ?
ರಸೆಲ್ ಇಲ್ಲದೇ ವಿಂಡೀಸ್ ದಿಕ್ಕು ತಪ್ಪುತ್ತಾ?

ಕೆರಿಬಿಯನ್ ಕಿಂಗ್ ರಸೆಲ್ ನಿವೃತ್ತಿ -ಆಲ್ರೌಂಡರ್ ಆ್ಯಂಡ್ರೆಗೆ ಅನ್ಯಾಯ ಆಯ್ತಾ?ರಸೆಲ್ ಇಲ್ಲದೇ ವಿಂಡೀಸ್ ದಿಕ್ಕು ತಪ್ಪುತ್ತಾ?

2025 ರಲ್ಲಿ ದಿಗ್ಗಜ ಕ್ರಿಕೆಟರ್‌ಗಳೇ ನಿವೃತ್ತಿಯ ಶಾಕ್ ನೀಡುತ್ತಿದ್ದಾರೆ. ಒಬ್ಬರ ಹಿಂದೆ ಒಬ್ಬರಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬಾಯ್ ಹೇಳುತ್ತಿದ್ದಾರೆ. ಅದ್ರಲ್ಲೂ  ನಿಕೋಲಸ್ ಪೂರನ್ ಬಳಿಕ ಇದೀಗ ವೆಸ್ಟ್ ಇಂಡೀಸ್ ನ ಮತ್ತೊಬ್ಬ ಸ್ಟಾರ್ ಕ್ರಿಕೆಟರ್ ಆಂಡ್ರೆ ರಸೆಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಿಟೈರ್ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಪೋಸ್ಟ್ ಹಾಕಿರೋ ರಸೆಲ್ ನಿವೃತ್ತಿ ಬಗ್ಗೆ ಘೋಷಣೆ ಮಾಡಿದ್ದಾರೆ.

ಇನ್ನು ಜುಲೈ 21 ರಂದು ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ T20  ಪಂದ್ಯ ರಸೆಲ್‌ ಅವರ ಕೊನೆಯ ಪಂದ್ಯವಾಗಲಿದೆ. ಆ್ಯಂಡ್ರೆ ರಸೆಲ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ T20I ಸರಣಿಗೆ ಆಯ್ಕೆ ಮಾಡಲಾಗಿದೆ. ಆದರೆ ಅವರು ಕೇವಲ ಮೊದಲ ಎರಡು ಪಂದ್ಯಗಳನ್ನು ಮಾತ್ರ ಆಡಿ ತವರು ನೆಲದಲ್ಲೇ 2ನೇ ಪಂದ್ಯದ ವೇಳೆ ನಿವೃತ್ತಿ ಹೊಂದಲಿದ್ದಾರೆ.

ಸಂಕಷ್ಟದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್

ತಂಡದ ಅನುಭವಿ ಹಾಗೂ ಸ್ಟಾರ್ ಆಟಗಾರರಲ್ಲಿ ಒಬ್ಬೊಬ್ಬರಾಗಿರೋ ರಸೆಲ್ ನಿವೃತ್ತಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ತಲೆನೋವಾಗಿದೆ.. ತಂಡಕ್ಕೆ ದೊಡ್ಡ ಹೊಡೆತ ಅಂತಾನೇ ಹೇಳಬಹುದು. ಯಾಕಂದ್ರೆ 6 ತಿಂಗಳ ಹಿಂದೆ ನಿಕೋಲಸ್ ಪೂರನ್ ಕೇವಲ 29 ವರ್ಷ ವಯಸ್ಸಿನಲ್ಲಿಯೇ ನಿವೃತ್ತಿ ಹೊಂದಿ ತಂಡಕ್ಕೆ ಶಾಕ್ ನೀಡಿದ್ರು. ಇದೀಗ ರಸೆಲ್ ನಿವೃತ್ತಿ ಘೋಷಿಸಿರುವುದು ವೆಸ್ಟ್ ಇಂಡೀಸ್ ತಂಡಕ್ಕೆ ದೊಡ್ಡ ನಷ್ಟವಾಗಿದೆ. ಹೀಗಾಗಿ ವಿಂಡೀಸ್ ಪಡೆ ಕ್ರಿಕೆಟ್ ಮಂಡಳಿ ಅನುಭವಿ ಇಲ್ಲದ ಆಟಗಾರರನ್ನೇ ಮುಂದಿಟ್ಟುಕೊಂಡು ವಿಶ್ವಕಪ್ ಗೆ ತಂಡ ರಚಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ರಸೆಲ್ ತಂಡದಲ್ಲಿದ್ರೆ ದೊಡ್ಡ ಶಕ್ತಿ.. ಯಾವಾಗ ಹೇಗ್ ಬೇಕಾದ್ರೂ ಮ್ಯಾಚ್‌ನ ಟರ್ನ್ ಮಾಡೋ ಶಕ್ತಿ ಈ ದೃತ್ಯ ಕ್ರಿಕೆಟಿಗನಿಗಿದೆ. ಅದ್ರಲ್ಲೂ ಸಿಕ್ಸ್ ಫೋರ್‌ಗಳನ್ನ ಲೀಲಾಜಾಲವಾಗಿ ಹೊಡೆಯೋ ತಾಕತ್ತು ಇವರಿಗಿದೆ. ಇನ್ನೂ ಒಂದಷ್ಟು ವರ್ಷಗಳ ಕಾಲ ಆಡಬಹುದಿತ್ತು. ಆದ್ರೆ 37 ನೇ ವಯಸ್ಸಿಗೆ ನಿವೃತ್ತಿ ಹೊಂದಿದ್ದು, ತಂಡದ ಮೇಲೆ ಎಫೆಕ್ಟ್ ಬೀಳುತ್ತೆ ಅಂತಾನೇ ಹೇಳಬಹುದು..  Vis Flow..

ರಸೆಲ್‌ಗೆ ವೆಸ್ಟ್ ಇಂಡೀಸ್ ಮೇಲೆ ಬೇಸರವಿದ್ಯಾ?

ವಿಶ್ವದ ಶ್ರೇಷ್ಠ T20 ಆಟಗಾರರಲ್ಲಿ ಒಬ್ಬರಾಗಿರೋ ರಸೆಲ್ ವೆಸ್ಟ್ ಇಂಡೀಸ್ ತಂಡದ ಪ್ರಮುಖ ಆಟಗಾರರಾಗಿದ್ದರು. ವೆಸ್ಟ್ ಇಂಡೀಸ್ 2012 ಮತ್ತು 2016 ರ T20 ವಿಶ್ವಕಪ್ ಗೆದ್ದ ತಂಡಗಳಲ್ಲಿ ರಸೆಲ್ ಇದ್ದರು. ಆದ್ರೆ ಎಲ್ಲೋ ಒಂದ್ಕಡೆ ಇವರನ್ನ ವಿಂಡೀಸ್ ಮ್ಯಾನೇಜ್‌ಮೆಂಟ್ ಸರಿಯಾಗಿ ಬಳಸಿಕೊಳ್ಳಲಿಲ್ಲ ಅನ್ಸುತ್ತೆ.. ಇವರಿಗೆ ಟೆಸ್ಟ್ ಪಂದ್ಯಗಳನ್ನ ಆಡೋಕೆ ಚಾನ್ಸ್ ಸಿಕ್ಕಿಲ್ಲ. 2010 ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಸೆಲ್ ಅವರಿಗೆ ಅದೇ ಅವರಿಗೆ ಫಸ್ಟ್ ಅಂಡ್ ಲಾಸ್ಟ್  ಟೆಸ್ಟ್ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಅವರು ಎರಡು ರನ್ ಗಳಿಸಿ ಒಂದು ವಿಕೆಟ್ ಪಡೆದರು. ಆ ಮೇಲೆ ಇವರಿಗೆ ಟೆಸ್ಟ್ ಬಾಗಿಲು ತೆರೆಯಲಿಲ್ಲ.. ಆ ಪಂದ್ಯದ ನಂತ್ರ ಚಾನ್ಸ್ ಸಿಕ್ಕಿದ್ರೆ ಇವರು ಟೆಸ್ಟ್‌ ಕ್ರಿಕೆಟ್‌ನಲ್ಲೂ ದಾಖಲೆ ಬರೆಯುತ್ತಿದ್ದರು.. ಬಟ್ ಇವರಿಗೆ ಕೈ ಹಿಡಿದಿದ್ದು ಟೀ 20 ಪಂದ್ಯಗಳು. 2019 ರಿಂದ ವೆಸ್ಟ್ ಇಂಡೀಸ್ ಪರ ಟಿ20 ಕ್ರಿಕೆಟ್‌ನಲ್ಲಿ ಮಾತ್ರ ರಸೆಲ್ ಆಡುತ್ತಿದ್ದಾರೆ. ಇಲ್ಲಿ ತನಕ  84 ಅಂತರರಾಾಷ್ಟ್ರೀಯ ಟಿ 20 ಪಂದ್ಯ ಆಡಿರೋ ರಸೆಲ್ 1078 ರನ್‌ಗಳಿಸಿದ್ದಾರೆ. ಇದ್ರಲ್ಲಿ 90 ಸಿಕ್ಸ್‌ಗಳನ್ನ ಸಿಡಿಸಿದ್ದಾರೆ..

ಎಲ್ಲವನ್ನೂ ಗಮನಿಸಿದ್ರೆ ರಸೆಲ್‌ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮೇಲೆ ಎಲ್ಲೋ ಒಂದ್ಕಡೆ ಬೇಸರ ಇದ್ದಂತೆ ಕಾಣುತ್ತೆ.. ಯಾಕಂದ್ರೆ ಇತ್ತಿಚ್ಚಿಗೆ ಐಪಿಎಲ್ ಮುಗಿದ ಮೇಲೆ ವೆಸ್ಟ್ ಇಂಡೀಸ್ ಕ್ರಿಕೆಟ್ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ವೆಸ್ಟ್ ಇಂಡೀಸ್‌ನಲ್ಲಿ 50 ಅಥವಾ 100 ಟೆಸ್ಟ್ ಪಂದ್ಯಗಳನ್ನು ಆಡಿದರೂ, ನಿವೃತ್ತಿಯ ನಂತರ ಏನೂ ಉಳಿಯುವುದಿಲ್ಲ ಎಂದು ಹೇಳಿದ್ರು. ಇದು ಬಹಳ ಚರ್ಚೆಗೆ ಕೂಡ ಕಾರಣವಾಗಿತ್ತು. ಟೆಸ್ಟ್‌ ಪಂದ್ಯಗಳಲ್ಲಿ ಚಾನ್ಸ್ ಸಿಗದೇ ಇದ್ದಿದ್ದಕ್ಕೆ ಹೀಗ್ ಹೇಳಿದ್ರಾ ಅನ್ನೋ ಪ್ರಶ್ನೆ ಕೂಡ ಎದ್ದಿತ್ತು.

ಫಾಸ್ಟ್ ಬೌಲರ್‌ಗೆ ಬಿಡದೆ ಚಚ್ಚೋ ರಸೆಲ್

ಇನ್ನು ಆ್ಯಂಡ್ರೆ ರಸೆಲ್‌ನ ಸ್ಪೇಷಲಿಟಿ ಏನು ಅಂದ್ರೆ ಫಾಸ್ಟ್ ಬೌಲರ್ ಬೌಲಿಂಗ್‌ನಲ್ಲಿ ರನ್‌ ಮಳೆಯನ್ನ ಹರಿಸುತ್ತಾರೆ. ಮೈದಾನದ ಮೂಲೆ ಮೂಲೆಗಳಿಗೆ ಚಂಡನ್ನ ಅಟ್ಟಾಡಿಸಿ ಹೊಡೆಯುತ್ತಾರೆ. ಆದ್ರೆ ರಸಲ್ ಸ್ಪಿನ್ನರ್‌ಗೆ ಹೆದುರುತ್ತಾರೆ.. ಲೆಗ್ ಸ್ಪಿನ್ನರ್ ಗಳು ದಾಳಿಗೆ ವಿಕೆಟ್‌ನ ಸುಲಭವಾಗಿ ಒಪ್ಪಿಸುತ್ತಾರೆ. ಅದ್ರಲ್ಲೂ  2023ರಿಂದಲೂ ರಸೆಲ್ ಅವರು ಲೆಗ್ ಸ್ಪಿನ್ನರ್ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದಾರೆ. ಇದು ಐಪಿಎಲ್ ಪಂದ್ಯಗಳನ್ನ ನೋಡಿದವರಿಗೆ ಚೆನ್ನಾಗಿ ಗೊತ್ತಾಗಿರುತ್ತೆ. ಒಟ್ನಲ್ಲಿ ವೆಸ್ಟ್ ಇಂಡೀಸ್‌ನ ದೃತ್ಯ ಕ್ರಿಕೆಟಿಗ ಆ್ಯಂಡ್ರೆ ರಸೆಲ್ ಅಂತರರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ಷೋಷಿಸಿದ್ದು, ಆದ್ರೆ ಐಪಿಎಲ್‌, ಸಿಪಿಎಲ್ ಸೇರಿದಂತೆ ಪ್ರಮುಖ ಲೀಗ್‌ನಲ್ಲಿ ಮಾತ್ರ ಇನ್ನೂ ಆ್ಯಂಡ್ರೆ ರಸೆಲ್ ಕಾಣಿಸಿಕೊಳ್ಳಲಿದ್ದಾರೆ..

Kishor KV