ಶಿವನ ದೇಗುಲದಲ್ಲಿ ಪ್ರತ್ಯಕ್ಷವಾದ ನಾಗಪ್ಪ! – ಹಾವು ಕಂಡು ಜನ ಮಾಡಿದ್ದೇನು ಗೊತ್ತಾ?

ನಮ್ಮ ಮನೆ ಸುತ್ತಮುತ್ತ ಹಾವನ್ನ ಭಯದಿಂದ ಓಡಿಸುವವರೇ ಹೆಚ್ಚು. ಆದ್ರೆ ದೇವಸ್ಥಾನಗಳಲ್ಲಿ ಹಾವು ಪ್ರತ್ಯಕ್ಷ ಆದ್ರೆ ಪವಾಡ ಎಂದು ಪೂಜೆ ಮಾಡುತ್ತಾರೆ. ಇದೀಗ ಇಲ್ಲೊಂದು ಕಡೆ ದೇವಸ್ಥಾನದಲ್ಲಿ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್‌ಸಿಗ್ನಲ್! – ಸಿಎಂ ಸಿದ್ದರಾಮಯ್ಯ ಭೇಟಿಯಾದ ಶಾಸಕರು
ಆಂಧ್ರಪ್ರದೇಶದ ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯ ಮನುಬೋಲು ಮಂಡಲದಲ್ಲಿರುವ ಚೆರ್ಲೋಪಲ್ಲಿ ವಿಶ್ವನಾಥ ಸ್ವಾಮಿ ದೇವಸ್ಥಾನದಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಭಾನುವಾರ ದೇವಾಲಯದಲ್ಲಿ ಹಾವು ಕಾಣಿಸಿಕೊಂಡಿದ್ದು, ಭಕ್ತರು ನಾಗರಹಾವಿಗೆ ಪೂಜೆ ಸಲ್ಲಿಸಿದ್ದಾರೆ. ನಾಗರಹಾವು ಪ್ರತ್ಯಕ್ಷವಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ನಾಗರಹಾವೊಂದು ಶಿವನ ದೇವಾಲಯದಲ್ಲಿ ಪ್ರತ್ಯಕ್ಷವಾಗಿರುವುದನ್ನು ಕಾಣಬಹುದು. ನಾಗರಹಾವನ್ನು ಕಂಡೊಡನೆ ಭಕ್ತರು ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದ ಸಮಯದಲ್ಲಿ ಶಿವಲಿಂಗದ ಪಕ್ಕದಲ್ಲೇ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಇದು ದೇವರ ಮಹಿಮೆಯ ಸಂಕೇತವಾಗಿದೆ ಎಂದು ದೇವಾಲಯದ ಅರ್ಚಕ ಶ್ರೀನಿವಾಸುಲು ಹೇಳಿದ್ದಾರೆ.

ನೋಡಿರಿ

