ಒಲೆ ಮೇಲೆ ಇಟ್ಟಿದ್ದ ಹಾಲು ಉಕ್ಕಿದ್ದಕ್ಕೆ ಸಿಟ್ಟು! – ಹೆಂಡತಿ ಮೇಲಿನ ಕೋಪಕ್ಕೆ ಪ್ರಾಣ ಕಳೆದುಕೊಂಡ ಪತಿರಾಯ!

ಒಲೆ ಮೇಲೆ ಇಟ್ಟಿದ್ದ ಹಾಲು ಉಕ್ಕಿದ್ದಕ್ಕೆ ಸಿಟ್ಟು! – ಹೆಂಡತಿ ಮೇಲಿನ ಕೋಪಕ್ಕೆ ಪ್ರಾಣ ಕಳೆದುಕೊಂಡ ಪತಿರಾಯ!

ಗಂಡ, ಹೆಂಡತಿ ಮಧ್ಯೆ ಜಗಳ ಕಾಮನ್..‌ ಆದ್ರೆ ಕೆಲವೊಮ್ಮೆ ಈ ಜಗಳ ವಿಕೋಪಕ್ಕೆ ತಿರುಗಿ ಬಿಡುತ್ತವೆ. ಇದೀಗ ಇಲ್ಲೊಂದು ಕಡೆ ಹಾಲು ಉಕ್ಕಿತು ಅನ್ನೋ ಕಾರಣಕ್ಕೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಕಂದಕಕ್ಕೆ ಬಿದ್ದ ಬಸ್!‌ – ಭೀಕರ ಅಪಘಾತಕ್ಕೆ 15 ಮಂದಿ ಬಲಿ!

ಈ ವಿಲಕ್ಷಣಕಾರಿ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬಾಲಾಜಿನಗರದಲ್ಲಿ ನಡೆದಿದೆ. ವೆಂಕಟ ಸುಬ್ಬಯ್ಯ (53) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈ ಘಟನೆ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ವೆಂಕಟ ಸುಬ್ಬಯ್ಯ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಕೆಲಸ ಬಿಟ್ಟು ತಾಯ್ನಾಡಿಗೆ ಮರಳಿದ್ದರು. ತನ್ನ ಪತ್ನಿ ಅನುರಾಧ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಊರಿನಲ್ಲೇ ನೆಲೆಸಬೇಕು ಎಂದು ಅಂದುಕೊಂಡಿದ್ದರು. ಹೀಗಾಗಿ ಮನೆ ಬಳಿ ಒಂದು ಸಣ್ಣ ಅಂಗಡಿ ನಡೆಸುತ್ತಿದ್ದರು. ಆದರೆ, ವಿಧಿಯಾಟ ಬೇರೆಯೇ ಇತ್ತು. ಸುಖವಾಗಿ ಬಾಳಬೇಕು ಎಂದು ಊರಿಗೆ ಬಂದಿದ್ದ ವೆಂಕಟ ಸುಬ್ಬಯ್ಯ ಹೆಂಡತಿ ಸಣ್ಣಪುಟ್ಟ ವಿಷಯಗಳಿಗೆ ಬೈಯುತ್ತಿದ್ದರು. ಭಾನುವಾರ ಕೂಡ ದಂಪತಿ ಮಧ್ಯೆ ಜಗಳ ನಡೆದಿದೆ. ಅದೂ ಕೂಡ ಹಾಲಿನ ವಿಚಾರಕ್ಕೆ!

ಅನುರಾಧ ಭಾನುವಾರ ಒಲೆಯ ಮೇಲೆ ಹಾಲು ಇಟ್ಟಿದ್ದರು. ಯಾವುದೋ ಕೆಲಸದ ನಡುವೆ ಅವರು ಹಾಲಿನ ಕಡೆಗೆ ಗಮನ ಹರಿಸಲಿಲ್ಲ. ಹಾಲು ಈ ವೇಳೆ ಹಾಲು ಉಕ್ಕಿದ್ದು, ಒಲೆ ಮೇಲೆ ಚೆಲ್ಲಿದೆ. ಇದನ್ನು ನೋಡಿದ ವೆಂಕಟ ಸುಬ್ಬಯ್ಯಗೆ  ಸಿಟ್ಟು ಬಂದಿದ್ದು, ಹೆಂಡತಿ ಮೇಲೆ ಕೂಗಾಡಿದ್ದಾರೆ. ಅಷ್ಟೇ ಅಲ್ಲ   ಆವೇಶದಲ್ಲಿ ತನ್ನ ತಲೆಯನ್ನು ತಾನೇ ಗೋಡೆಗೆ ಚಚ್ಚಿಕೊಂಡಿದ್ದಾರೆ. ಗಂಡನ ಸಿಟ್ಟು ನೋಡಿ ಹೆದರಿದ ಅನುರಾಧ, ಪರಿಸ್ಥಿತಿ ತಣ್ಣಗಾಗಲಿ ಎಂದು ಮನೆಯಿಂದ ಹೊರಬಂದು ಕುಳಿತಿದ್ದಾರೆ. ಇದ್ರಿಂದ ಮತ್ತಷ್ಟು ಸಿಟ್ಟಾದ ಸುಬ್ಬಯ್ಯ  ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ಅನುರಾಧ ಮನೆಯ ಒಳಗೆ ಬಂದಿದ್ದು, ಈ ವೇಳೆಗಾಗಲೇ ಸುಬ್ಬಯ್ಯ ಪ್ರಾಣಪಕ್ಷಿ ಹಾರಿಹೋಗಿತ್ತು. ಅನುರಾಧ  ಕಿರುಚಾಟ ಕೇಳಿ ಓಡಿ ಬಂದ ನೆರೆಹೊರೆಯವರು ಬಂದಿದ್ದಾರೆ. ಈ ಬೆನ್ನಲ್ಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಸ್‌ಐ ಮೊಹಮ್ಮದ್ ರಫಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Shwetha M