ಶಿವಲಿಂಗದ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು – ಅಚ್ಚರಿಯ ಘಟನೆ ನಡೆದಿದ್ದು ಎಲ್ಲಿ?

ದೇವಸ್ಥಾನಗಳಲ್ಲಿ ಶಿವನ ಲಿಂಗದ ಮೇಲೆ ಹಾವಿನ ರೂಪ ಕೆತ್ತಿರುವುದನ್ನು ಅನೇಕ ದೇವಾಲಯಗಳಲ್ಲಿ ನೋಡಿರಬಹುದು. ಆದ್ರೀಗ ದೇವಾಲಯವೊಂದರಲ್ಲಿ ಅಚ್ಚರಿಯ ಘಟನೆ ನಡೆದಿದೆ. ನಾಗರ ಹಾವೊಂದು ಶಿವಲಿಂಗವನ್ನು ಸುತ್ತಿಕೊಂಡು ಹೆಡೆ ಬಿಚ್ಚಿ ಕುಳಿತು ಭಕ್ತರಿಗೆ ದರ್ಶನ ನೀಡಿದೆ. ಇದ್ರ ಫೋಟೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ತವರಿನಲ್ಲೇ ಮಣ್ಣು ಮುಕ್ಕಿದ ಪಾಕಿಸ್ತಾನ – ತ್ರಿಕೋನ ಸರಣಿಯಲ್ಲಿ ಹೀನಾಯ ಸೋಲು
ಮಾಘ ಪೂರ್ಣಿಮೆಯ ದಿನ ಆಂಧ್ರ ಪ್ರದೇಶದ ವಿಶಾಖಪಟ್ಟಣದ ದೇವಾಲಯವೊಂದರಲ್ಲಿ ಈ ಅಪರೂಪದ ಘಟನೆ ಸಂಭವಿಸಿದೆ. ವಿಶಾಖಪಟ್ಟಣದ ಚಂದ್ರಬಾಬು ನಾಯ್ಡು ಕಾಲೋನಿಯಲ್ಲಿರುವ ಸತ್ಯನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಶಿವ ದೇವಾಲಯದಲ್ಲಿ ಮಾಘ ಪೂರ್ಣಿಮೆಯ ದಿನ ನಾಗರಹಾವು ಕಾಣಿಸಿಕೊಂಡಿದೆ.
ಶಿವಲಿಂಗದ ಮೇಲೆ ನಾಗಪ್ಪ ಪ್ರತ್ಯಕ್ಷನಾಗಿದ್ದು, ಜನ ಇದೆಲ್ಲಾ ಶಿವ ಪವಾಡವೆಂದು ಹೇಳಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ದೇವಾಲಯವೊಂದರಲ್ಲಿ ಕರಡಿಯೊಂದು ಶಿವಲಿಂಗವನ್ನು ತಬ್ಬಿಕೊಂಡು ಕುಳಿತಿರುವಂತಹ ಅಚ್ಚರಿಯ ದೃಶ್ಯ ವೈರಲ್ ಆಗಿತ್ತು. ಇದೀಗ ಶಿವಲಿಂಗದ ಮೇಲೆ ನಾಗರ ಹಾವು ಹೆಡೆ ಎತ್ತಿ ಕುಳಿತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದ್ರ ವಿಡಿಯೋವನ್ನು greatandhra ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಗರ ಹಾವೊಂದು ಶಿವಲಿಂಗವನ್ನು ಸುತ್ತಿ ಹೆಡೆ ಎತ್ತಿ ಕುಳಿತಿರುವಂತಹ ಅದ್ಭುತ ದೃಶ್ಯವನ್ನು ಕಾಣಬಹುದು.