ಮಂಗನಿಂದ ಮಾನವನ ಕಟ್ಟು ಕತೆಯಾ? – ಪತ್ತೆಯಾಯ್ತು ಪೂರ್ವಜರಿಗಿಂತ ಭಿನ್ನ ಪುರಾತನ ತಲೆಬುರುಡೆ!

ಮಂಗನಿಂದ ಮಾನವನ ಕಟ್ಟು ಕತೆಯಾ? – ಪತ್ತೆಯಾಯ್ತು ಪೂರ್ವಜರಿಗಿಂತ ಭಿನ್ನ ಪುರಾತನ ತಲೆಬುರುಡೆ!

ಮಂಗನಿಂದ ಮಾನವ ಅನ್ನೋ  ಮಾತು ನಾವು ಕೇಳಿದ್ದೇವೆ. ಸ್ಕೂಲ್‌ನಲ್ಲಿ ಪಾಠ ಕೇಳುವಾಗಲು ಈ ಮಾತನ್ನು ಟೀಚರ್‌ ಹೇಳಿರುತ್ತಾರೆ. ವಿಜ್ಞಾನದಲ್ಲೂ ಮಂಗನಿಂದ ಮಾನವನ ಉಗಮವಾಗಿದೆ ಎಂದು ಉಲ್ಲೇಖವಾಗಿದೆ. ಇಷ್ಟಕ್ಕೂ ಮಾನವನ  ಹುಟ್ಟಿನ ಬಗ್ಗೆ ನಾವು ತಿಳಿದುಕೊಂಡ ವಿಚಾರ ಸುಳ್ಳಾ? ಅದೊಂದು ಹೋಲಿಕೆಯ ಕಥೆ ಅಷ್ಟೇಯಾ ಅಂತಾ ಅನ್ನೋ ಪ್ರಶ್ನೆಯೊಂದು ಉದ್ಭವವಾಗಿದೆ. ಇದಕ್ಕೆ ಕಾರಣ ಚೀನಾದಲ್ಲಿ ಪತ್ತೆಯಾದ ಮಾನವನ ತಲೆಬುರುಡೆ!

ಹೌದು ಚೀನಾದಲ್ಲಿ ಪುರಾತನ ಮಾನವನ ತಲೆಬರುಡೆಯೊಂದು ಪತ್ತೆಯಾಗಿದೆ. ಈ ತಲೆಬರುಡೆ ಮಾನವನ ಪೂರ್ವಜರ ತಲೆಬುರುಡೆಗಿಂತ ಸಂಪೂರ್ಣ ಭಿನ್ನವಾಗಿದೆ. ಈ ತಲೆಬುರುಡೆ ಮಾನವನ ಮತ್ತೊಂದು ವಂಶದ ಕರುಹನ್ನು ಹೇಳುತ್ತಿದೆ. ಈ ತಲೆಬುರುಡು ಮಾನವನ ಉಗಮ ಹಾಗೂ ವಿಕಸನ ವಿಜ್ಞಾನವನ್ನೇ ಬದಲಿಸುವ ಸಾಧ್ಯತೆಗಳು ಕಾಣಿಸುತ್ತಿದೆ. ಮಾನವನ ಉಗಮ ಹಾಗೂ ವಿಕಸನ 10 ಸಾವಿರ ವರ್ಷಗಳ ಹಿಂದೆ ಆಗಿಬೇಕು ಎಂದು ಅಂದಾಜಿಸಲಾಗಿದೆ. ಆದರೆ ಚೀನಾದಲ್ಲಿ ಪತ್ತೆಯಾಗಿರುವ ಈ ಪುರಾತನ ತಲೆಬುರುಡೆ ಮ್ಯಾಪಿಂಗ್ ಮಾಡಲಾಗಿದೆ. ಇದು ಬರೋಬ್ಬರಿ 3,00,000 ವರ್ಷಗಳ ಹಿಂದಿನದ್ದಾಗಿದೆ. ಇದು 12 ರಿಂದ 13 ವರ್ಷದ ಮನುಷ್ಯನ ತಲೆಬುರುಡೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಭೂಮಿಯಂತಿರುವ ಮತ್ತೊಂದು ಗ್ರಹ ಪತ್ತೆ! – ಮಾನವನ ವಾಸಕ್ಕೆ ಯೋಗ್ಯವಾಗಿದ್ಯಾ ಈ ಗ್ರಹ?

ಚೀನಾದಲ್ಲಿ ಪತ್ತೆಯಾದ ಪುರಾತನ ಮಾನವನ ತಲೆಬುರುಡೆ ಆಧುನಿಕ ಮಾನವನ ಕೆಲ ಗುಣಲಕ್ಷಣಗಳನ್ನು ಹೋಲುತ್ತದೆ. ಮಾನವನ ಪೂರ್ವಜರ ತಲೆಬುರುಡೆಗೂ ಇದೀಗ ಪತ್ತೆಯಾಗಿರುವ ತಲೆಬುರುಡಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಮಾನವನ ಮತ್ತೊಂದು ವಂಶದ ಕುರುಹು ಗೋಚರಿಸುತ್ತಿದೆ. ಆಧುನಿಕ ಮಾನವನ ವಂಶಕ್ಕೂ ಪತ್ತೆಯಾಗಿರುವ ತಲೆಬುರುಡೆಗೆ ಸಾಮಿಪ್ಯವಿರುವ ಕಾರಣ ಮಂಗನಿಂದ ಮಾನವನ ವಿಜ್ಞಾನ ಬದಲಾಗುವು ಸಾಧ್ಯತೆ ಗೋಚರಿಸುತ್ತಿದೆ.

ಮಾನವನ ಉಗಮ ಹಾಗೂ ವಿಕಸನ ವಿಜ್ಞಾನದಲ್ಲಿ ಪ್ರಮುಖವಾಗಿ ಮಾನವನ ಪೂರ್ವಜರ ತಲೆಬುರುಡೆ ಹೋಲುವ ವಾನರ ತಲೆಬುರುಡೆಯನ್ನು ವೈಜ್ಞಾನಿಕವಾಗಿ ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನೆ ಪ್ರಕಾರ, ವಿಕಸನಗೊಳ್ಳುತ್ತಾ ಹೋದ ವಂಶವೊಂದು ಮಂಗನಿಂದ ಮಾನವನಾಗಿದೆ ಎಂದು ವೈಜ್ಞಾನಿಕ ವರದಿ ಹೇಳುತ್ತಿದೆ.

ಇದೀಗ ಪತ್ತೆಯಾಗಿರುವ ತಲೆಬುರುಡೆಯಿಂದ 5,50,000 ಹಾಗೂ 7,50,000 ವರ್ಷಗಳ ಹಿಂದೆ ಹೋಮೋ ಎರೆಕ್ಟಸ್ ಎಂದು ಕರೆಯಲ್ಪಡುವ ಮತ್ತೊಂದು ಮಾನವ ಪೂರ್ವಜರಿಂದ ಕವಲೊಡೆದು ವಂಶಾವಳಿ ವಿಕಸನಗೊಂಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದೀಗ ಈ ತಲೆಬುರುಡೆ ಕುರಿತು ಸಂಶೋಧನೆ ಹೆಚ್ಚಾಗುತ್ತಿದೆ.

ಚೀನಾದಲ್ಲಿ ಪತ್ತೆಯಾಗಿರುವ ತಲೆಬುರುಡೆ 4,00,00 ವರ್ಷಗಳ ಹಿಂದೆ ನಿಯಾಂಡರ್ತಲ್‌ಗಳಿಂದ ಬೇರ್ಪಟ್ಟ ಪೂರ್ವ ಏಷ್ಯಾದ ಹೋಮಿನ್‌ಗಳ ವಂಶದಲ್ಲಿ ಪತ್ತೆಯಾಗಿರುವ ಡೆನಿಸೋವನ್ ಮುಖದ ಗುಣಲಕ್ಷಣ ಹೊಂದಿದೆ. ಹೀಗಾಗಿ ಮಾನವನ ವಿಕಸನದಲ್ಲಿ ಪೂರ್ವಜರ ಕುರಿತ ಹಲವು ಗೊಂದಲಗಳಿಗೆ ಈ ತಲೆಬುರುಡೆ ಉತ್ತರ ನೀಡುವ ಸಾಧ್ಯತೆ ಇದೆ.

suddiyaana