ಕುಡ್ಲದ ಹುಡುಗಿಗೆ ಕಂಕಣ ಭಾಗ್ಯ! – ಆಂಕರ್‌ ಅನುಶ್ರೀ ಮದುವೆಗೆ ಡೇಟ್‌ ಫಿಕ್ಸ್

ಕುಡ್ಲದ ಹುಡುಗಿಗೆ ಕಂಕಣ ಭಾಗ್ಯ! – ಆಂಕರ್‌ ಅನುಶ್ರೀ ಮದುವೆಗೆ ಡೇಟ್‌ ಫಿಕ್ಸ್

ಆಂಕರ್‌ ಅನುಶ್ರೀಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅನುಶ್ರೀ ಮದುವೆ ದಿನಾಂಕ ಕೂಡ ನಿಗಧಿ ಆಗಿದೆ. ಆಗಸ್ಟ್ 28ಕ್ಕೆ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಕೆರಿಬಿಯನ್ ಕಿಂಗ್ ರಸೆಲ್ ನಿವೃತ್ತಿ -ಆಲ್ರೌಂಡರ್ ಆ್ಯಂಡ್ರೆಗೆ ಅನ್ಯಾಯ ಆಯ್ತಾ?

ಅನುಶ್ರೀ ಮದುವೆ ವಿಚಾರವಾಗಿ ಸಾಕಷ್ಟು ಗಾಸಿಪ್‌ ಗಳು ಈ ಹಿಂದೆ ಹರಿದಾಡುತ್ತಿತ್ತು. ಇದೀಗ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಕುಟುಂಬಸ್ಥರು ನೋಡಿದ ಹುಡುಗನ ಜೊತೆ ಕುಡ್ಲದ ಹುಡುಗಿ ಮದುವೆಯಾಗಲಿದ್ದಾರೆ. ಅನುಶ್ರೀ ಅವರ ಕೈ ಹಿಡಿಯುತ್ತಿರುವ ಹುಡುಗ ಕೊಡಗಿನ ಮೂಲದವರಾಗಿದ್ದಾರೆ. ಉದ್ಯಮಿ ರೋಷನ್ ಎಂಬುವವರನ್ನ ಮದುವೆಯಾಗಲಿದ್ದಾರೆ. ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಮದುವೆ ನಡೆಯಲಿದೆ ಎಂದು ಹೇಳಲಾಗ್ತಿದೆ.

ಇನ್ನು ಮದುವೆ ಸುದ್ದಿ ಕೇಳ್ದಾಗೆಲ್ಲಾ ಈ ವರ್ಷವೇ ಮದುವೆ ಎಂದಿದ್ದರು ಅನುಶ್ರೀ. ಇದೀಗ ಮದುವೆಗೆ ಕಾಲ ಕೂಡಿಬಂದಿದೆ. ಸರಳ ಶಾಸ್ತ್ರೋಕ್ತವಾಗಿ ಮದುವೆಯಾಗಲಿದ್ದಾರೆ. ಆರತಕ್ಷತೆಯನ್ನ ಅದ್ದೂರಿಯಾಗಿ ಮಾಡಿಕೊಳ್ಳಲಿದ್ದು, ಸಿನಿಮಾ ಇಂಡಿಸ್ಟ್ರಿಯವರನ್ನ ಆಮಂತ್ರಿಸಲಿದ್ದಾರೆ ಎನ್ನಲಾಗ್ತಿದೆ.

Shwetha M