ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ –ರೋಷನ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ನಿರೂಪಕಿ

ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಸಪ್ತಪದಿ ತುಳಿದಿದ್ದಾರೆ.
ಇದನ್ನೂ ಓದಿ: ನಾವು ಸದಾ ನಿಮ್ಮೊಂದಿಗಿದ್ದೇವೆ.. 85 ದಿನಗಳ ನಂತರ RCB ಪೋಸ್ಟ್! – ಫ್ಯಾನ್ಸ್ಗಾಗಿ ಮಹತ್ವದ ನಿರ್ಧಾರ!
ಬೆಂಗಳೂರಿನ ಕಗ್ಗಲಿಪುರ ಬಳಿಯ ಹೊರವಲಯದ ರೆಸಾರ್ಟ್ನಲ್ಲಿ ಮದುವೆ ನೆರವೇರಿದೆ. ಬೆಳಗ್ಗೆ 10:56ರ ಶುಭ ಮೂಹೂರ್ತದಲ್ಲಿ ಅನುಶ್ರಿ ಹಾಗೂ ರೋಷನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಶ್ರೀ ಮದುವೆಗೆ ನಟ ರಾಜ್ ಬಿ ಶೆಟ್ಟಿ, ಜೀ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಕಾವ್ಯಾ ಶಾ, ಚೈತ್ರಾ ಜೆ ಆಚಾರ್, ಶರಣ್, ಸೋನಲ್ ಮೊಂಥೆರೋ ಮುಂತಾದವರು ಮದುವೆಯಲ್ಲಿ ಭಾಗಿಯಾಗಿದ್ದು, ನವಜೋಡಿಗೆ ಶುಭ ಹಾರೈಸಿದ್ದಾರೆ. ಕಿರುತೆರೆ ಕಲಾವಿದರು, ಚಿತ್ರೋದ್ಯಮದ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ.
ಮದುವೆಗೂ ಹಿಂದಿನ ದಿನ ಬುಧವಾರ (ಆ.27) ನಡೆದ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ. ಹಳದಿ ಶಾಸ್ತ್ರದ ವೇಳೆ ಅನುಶ್ರೀ – ರೋಷನ್ ಸು ಫ್ರಂ ಸೋ ಚಿತ್ರದ `ಬಂದರೋ ಬಂದರೋ ಬಾವ ಬಂದರೋ’ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಹಳದಿ ಶಾಸ್ತ್ರದಲ್ಲಿ ಮಿಂಚಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಇನ್ನು ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ವಿವಾಹವಾಗಲಿರುವ ಅನುಶ್ರೀ ಅವರ ಮದುವೆಯ ಆಮಂತ್ರಣ ಸಾಕಷ್ಟು ವೈರಲ್ ಆಗಿತ್ತು. ಇದನ್ನು ನೋಡಿದ ಅಭಿಮಾನಿಗಳು ತಮ್ಮ ನೆಚ್ಚಿನ ನಿರೂಪಕಿಯ ಮದುವೆಗೆ ತೆರಳಿದ್ದರು. ಆದರೆ ಅನುಶ್ರೀ ಮದುವೆಗೆ ಬಂದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಮದುವೆಗೆ ಆಹ್ವಾನವಿಲ್ಲದೆ ಯಾರಿಗೂ ಪ್ರವೇಶ ನೀಡುತ್ತಿಲ್ಲ. ಸ್ಟುಡಿಯೋ ಒಳಗೆ ಬಿಟ್ಟಿಲ್ಲ ಎಂದು ಅನುಶ್ರೀ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅನುಶ್ರೀ ಹೆಸರು ಮಾಡೋಕೆ ಫ್ಯಾನ್ಸ್ ಕಾರಣ. ಇವತ್ತು ನಮನ್ನೆ ಮದುವೆ ಮನೆಗೆ ಬಿಟ್ಟಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನೋಡಿರಿ

