ಹುಟ್ಟು ಹೋರಾಟಗಾರ ಅನಂತ್ ಸುಬ್ಬರಾವ್ ವಿಧಿವಶ- ನಿಮ್ಹಾನ್ಸ್ ಆಸ್ಪತ್ರೆಗೆ ಪಾರ್ಥಿವ ಶರೀರ ಹಸ್ತಾಂತರ

ಹುಟ್ಟು ಹೋರಾಟಗಾರ ಅನಂತ್ ಸುಬ್ಬರಾವ್ ವಿಧಿವಶ- ನಿಮ್ಹಾನ್ಸ್ ಆಸ್ಪತ್ರೆಗೆ  ಪಾರ್ಥಿವ ಶರೀರ ಹಸ್ತಾಂತರ

ಹೋರಾಟದ ಮೂಲಕವೇ ಸರ್ಕಾರವನ್ನ ನಡುಗಿಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಅನಂತ್ ಸುಬ್ಬರಾವ್ ವಿಧಿವಶರಾಗಿದ್ದಾರೆ  .  ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ನಿನ್ನೆ ರಾಜ್ಯದ ಸಾರಿಗೆ ನೌಕರರು ರಾಜ್ಯವ್ಯಾಪಿ ಮುಷ್ಕರಕ್ಕೆ ಮುಂದಾಗಿದ್ದರು. ಈ ಮುಷ್ಕರದ ಮುಂದಾಳತ್ವ ವಹಿಸಿದ್ದು ಅನಂತ ಸುಬ್ಬರಾವ್. ಆದ್ರೆ ಈ ಮುಷ್ಕರಕ್ಕೆ ಕರೆ ಕೊಟ್ಟ ಕೆಲವೇ ಗಂಟೆಯಲ್ಲಿ ಅವರು ನಿಧನರಾಗಿದ್ದಾರೆ.  ಇಂದು ಇವರು ಅಂತ್ಯಕ್ರಿಯೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ, ರಾಮಲಿಂಗಾ ರೆಡ್ಡಿ, ಡಿಕೆ ಶಿವಕುಮಾರ್ ಸೇರಿ ಸಾಕಷ್ಟು ಜನ ಸಂತಾಪ ಸೂಚಿಸಿದ್ದಾರೆ. ಆದ್ರೆ ಇವರ ಆಸೆಯಂತೆ  ಅನಂತ್ ಸುಬ್ಬರಾವ್ ಅವರ ಮೃತದೇಹವನ್ನ ನಿಮ್ಹಾನ್ಸ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗುತ್ತೆ.

ಇದನ್ನೂ ಓದಿ: ಇಂದು ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅಂತ್ಯಕ್ರಿಯೆ –  ಅಮಿತ್‌ ಶಾ, ದೇವೇಂದ್ರ ಫಡ್ನವೀಸ್‌ರಿಂದ ಅಂತಿಮ ನಮನ

ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಜನಿಸಿದ ಅನಂತ ಸುಬ್ಬರಾವ್ ಕಮ್ಯುನಿಸ್ಟ್ ನಾಯಕ ಆಗಿದ್ದಾರೆ. ಅವರು ಸಾರಿಗೆ ನೌಕರರ ಪರವಾಗಿ ಧ್ವನಿಯಾಗಿ ಮುಷ್ಕರಕ್ಕೆ ಕರೆ ಕೊಟ್ಟ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಹಠಾತ್ ನಿಧನವು ಹಲವರಿಗೆ ಆಘಾತ ತಂದಿತ್ತು. ಸಿಎಂ ಸಿದ್ದರಾಮಯ್ಯ ಸಹ ಅವರ ನಿಧನದ ಸುದ್ದಿ ಕೇಳಿ ಸಂತಾಪ ಸೂಚಿಸಿದ್ದಾರೆ.

85 ವರ್ಷದ ಅನಂತ ಸುಬ್ಬರಾವ್ ಸರ್ಕಾರದ ಹಲವು ನೀತಿಗಳ ವಿರುದ್ಧ, ಸೌರ್ಜನ್ಯ, ಅನ್ಯಾಯದ ವಿರುದ್ಧ ದಶಕದಿಂದಲೂ ಧ್ವನಿ ಎತ್ತುತ್ತಿದ್ದ ವ್ಯಕ್ತಿ. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಅನಂತ್ ಸುಬ್ಬರಾವ್ ಕೆಲಸ ಮಾಡುತ್ತಿದ್ದರು. ಹತ್ತಾರು ಮುಷ್ಕರಗಳು, ಹೋರಾಟಗಳಲ್ಲಿ ಅವರು ಮುಂದಾಳತ್ವ ವಹಿಸುತ್ತಿದ್ದರು. ಹೋರಾಟ ಹೇಗಿರಬೇಕು? ಬೇಡಿಕೆಗಳು ಯಾವುದಿರಬೇಕು ಎಂಬುದನ್ನು ನಿರ್ಧರಿಸುವ ಕಾರ್ಯಗಳಲ್ಲಿ ಅವರು ಪ್ರಮುಖರು.

Kishor KV