ಅನಂತ್ ಅಂಬಾನಿ ಮದುವೆಗೆ ಮುಹೂರ್ತ ಫಿಕ್ಸ್ – ಜುಲೈ 12 ರಂದು ಮುಂಬೈನಲ್ಲಿ ವಿವಾಹ ಸಮಾರಂಭ

ಅನಂತ್ ಅಂಬಾನಿ ಮದುವೆಗೆ ಮುಹೂರ್ತ ಫಿಕ್ಸ್ – ಜುಲೈ 12 ರಂದು ಮುಂಬೈನಲ್ಲಿ ವಿವಾಹ ಸಮಾರಂಭ

ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಜುಲೈ 12 ರಂದು ಮುಂಬೈನಲ್ಲಿ ರಾಧಿಕಾ ಮರ್ಚೆಂಟ್ ಅವರನ್ನು ಅನಂತ್ ಅಂಬಾನಿ ವಿವಾಹವಾಗಲಿದ್ದಾರೆ. ಸಾಂಪ್ರದಾಯಿಕ ಕೆಂಪು ಮತ್ತು ಚಿನ್ನದ ಕಾರ್ಡ್ ಆಗಿರುವ ‘ಸೇವ್‌ ದಿ ಡೇಟ್‌’ ಆಹ್ವಾನವನ್ನು ಅತಿಥಿಗಳಿಗೆ ಅಂಬಾನಿ ಫ್ಯಾಮಿಲಿ ನೀಡಿದ್ದಾರೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹಿಂದೂ ವೈದಿಕ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಯಲಿದೆ.

ಇದನ್ನೂ ಓದಿ: 1962ರಲ್ಲಿ ಭಾರತದ ಮೇಲೆ ಚೀನಾ ದಾಳಿ – ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ!

ಮದುವೆ ಸಂಭ್ರಮದ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಜರುಗಲಿವೆ. ಜು.12 ರಂದು ಶುಭ ವಿವಾಹದೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ. ಜು.13 ರ ಶನಿವಾರ ಶುಭ ಆಶೀರ್ವಾದ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ ಇರಲಿದೆ. ಜು.14ರ ಭಾನುವಾರದಂದು ಅದ್ಧೂರಿ ವಿವಾಹ ಆರತಕ್ಷತೆ ನಡೆಯಲಿದೆ ಎಂದು ವರದಿಯಾಗಿದೆ. ನೀತಾ ಮತ್ತು ಮುಖೇಶ್ ಅಂಬಾನಿ ಈ ವಾರ ಯುರೋಪ್‌ನಲ್ಲಿ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ಗಾಗಿ ನಾಲ್ಕು ದಿನಗಳ ವಿವಾಹ ಪೂರ್ವ ಸಮಾರಂಭವನ್ನು ಆಯೋಜಿಸುತ್ತಿದ್ದಾರೆ.

suddiyaana