ಕಾಂಗ್ರೆಸ್ ನಾಯಕರಿಗೆ ಅನಂತ್ ಕುಮಾರ್ ಹೆಗಡೆ ಟಾಂಗ್ – ನೇರಾನೇರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಕಾಂಗ್ರೆಸ್ ನಾಯಕರಿಗೆ ಅನಂತ್ ಕುಮಾರ್ ಹೆಗಡೆ ಟಾಂಗ್ – ನೇರಾನೇರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಅನಂತ ಕುಮಾರ್ ಹೆಗಡೆ. ವಾರದ ಹಿಂದೆ ಬಿಜೆಪಿಯ ಈ ಸಂಸದ ಎಲ್ಲಿದ್ದಾರೆ ಅಂತಾ ಬಹುಶಃ ಅವ್ರ ಪಕ್ಷದವ್ರಿಗೂ ಗೊತ್ತಿರಲಿಲ್ಲ ಅನ್ಸುತ್ತೆ. ಆದ್ರೆ ಈಗ ರಾಜ್ಯದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ ಇವ್ರದ್ದೇ ಸುದ್ದಿ. ರಾಜ್ಯ ರಾಜಕೀಯದಲ್ಲಂತೂ ಕೋಲಾಹಲವೇ ಎದ್ದಿದೆ. ಯಾಕಂದ್ರೆ ಇಷ್ಟು ದಿನ ಸೈಲೆಂಟ್ ಆಗಿದ್ದ ಅನಂತ್ ಕುಮಾರ್ ಹೆಗಡೆ ಲೋಕಸಭಾ ಚುನಾವಣೆ ಹತ್ತಿರ ಬರ್ತಿದ್ದಂತೆ ಆಟಂ ಬಾಂಬ್​ನಂತೆ ಬ್ಲಾಸ್ಟ್ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ ಕೆಂಡ ಕಾರಿದ್ದಾರೆ. ಅನಂತ ಕುಮಾರ್ ಹೆಗಡೆಯವರ ಮಾತು ಬಿಜೆಪಿಯವ್ರಿಗೇ ವಾಕರಿಕೆ ತರಿಸಿದೆ. ನಮ್ಮ ಪಕ್ಷವೂ ಅವ್ರ ಸ್ಟೇಟ್​​ಮೆಂಟ್​ಗೂ ಯಾವ ಸಂಬಂಧವೂ ಇಲ್ಲ ಅಂತಾ ಬಿಜೆಪಿ ರಾಜ್ಯಾಧ್ಯಕ್ಷರೇ ಘೋಷಣೆ ಮಾಡಿದ್ದಾರೆ. ಅಷ್ಟಕ್ಕೂ ಅನಂತ ಕುಮಾರ್ ಹೆಗಡೆ ಹೇಳಿದ್ದೇನು..?

ಇದನ್ನೂ ಓದಿ: ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಮರಳುತ್ತಾರಾ..? ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳೀತಾರಾ..?

ಏಕವಚನದಲ್ಲೇ ವಾಗ್ದಾಳಿ! 

ಅಯೋಧ್ಯೆ ರಾಮಮಂದಿರ ವಿಚಾರವಾಗಿ ಅಪಸ್ವರ ಎತ್ತುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಅನಂತ್ ಕುಮಾರ್ ಹೆಗಡೆ ಟಾಂಗ್ ಕೊಟ್ಟಿದ್ದರು. ನೇರಾನೇರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಮ್ಮ ವಿರೋಧಿ ಸಿದ್ದರಾಮಯ್ಯನೇ ಹೊರತು ಕಾಂಗ್ರೆಸ್ ಅಲ್ಲ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ  ಇನ್ವಿಟೇಷನ್ ನಮಗೆ ಬಂದಿಲ್ಲ ಅಂತ ಸಿದ್ದರಾಮಯ್ಯ ಹೇಳ್ತಾರೆ. ಆಮೇಲೆ ನಾನು ಹೋಗೋದಿಲ್ಲ ಅಂತಾರೆ. ನೀನು ಹೋಗು, ಬಿಡು, ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆಗೇ ಆಗುತ್ತೆ ಮಗನೇ ಅಂತ ವ್ಯಂಗ್ಯವಾಗಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ರು.

ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ. ಅಷ್ಟೇ ಯಾಕೆ ಬಿಜೆಪಿಯಲ್ಲೇ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಸಂಸದರ ಹೇಳಿಕೆಯೂ ಪಕ್ಷಕ್ಕೂ ಯಾವ ಸಂಬಂಧ ಇಲ್ಲ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಹಾಗೇ ಮಾಜಿ ಶಾಸಕರಾದ ಸಿ.ಟಿ ರವಿ, ರೇಣುಕಾಚಾರ್ಯ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅನಂತಕುಮಾರ್ ಹೆಗಡೆ ಹೀಗೆ ದಿಢೀರ್ ಌಕ್ಟಿವ್ ಆಗೋದ್ರ ಹಿಂದಿನ ಲೆಕ್ಕಾಚಾರವೇ ಬೇರೆ ಇದೆ.

ಟಿಕೆಟ್ ಕೈತಪ್ಪುವ ಭಯ! 

ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಪಕ್ಷದಲ್ಲಿ ಅಭ್ಯರ್ಥಿಗಳ ಕುರಿತಂತೆ ಚರ್ಚೆಯಾಗ್ತಿದೆ. ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದರಾಗಿರುವ ಅನಂತ ಕುಮಾರ್ ಹೆಗಡೆಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಲೋಕಸಭಾ ಕ್ಷೇತ್ರದ ಅಭಿಪ್ರಾಯ ಸಂಗ್ರಹದ ಸಭೆಯಲ್ಲಿ ಅನಂತಕುಮಾರ್ ಹೆಗಡೆ ಪರ ಮತ್ತು ಪರೋಕ್ಷ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಉತ್ತರ ಕನ್ನಡದಲ್ಲಿ ಹಿಂದುತ್ವದ ಆಧಾರದಲ್ಲಿ ಚುನಾವಣೆ ಎದುರಿಸಬೇಕು ಎಂದು ಹೆಗಡೆ ಬೆಂಬಲಿಗ ಮುಖಂಡರು ಹೇಳಿದ್ದರು. ಆದರೆ ಕ್ಷೇತ್ರದಲ್ಲಿ ಜನ ಹಿಂದುತ್ವ ಮಾತ್ರ ಅಲ್ಲ, ಅಭಿವೃದ್ಧಿಯನ್ನೂ ಕೇಳುತ್ತಾರೆ. ಕೇಂದ್ರ ಸರ್ಕಾರದ ಯೋಜನೆಗಳು ಸಮರ್ಪಕ ಜಾರಿಯಾಗಿಲ್ಲ ಎಂದು ಕೆಲವು ಮುಖಂಡರು ವಿರೋಧ ಹೊರ ಹಾಕಿದ್ದರು. ಅಲ್ಲದೆ ಕ್ಷೇತ್ರದಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಟಿಕೆಟ್ ಪಡೆಯಲು ಕಸರತ್ತು ನಡೆಸ್ತಿದ್ದಾರೆ.

ಲೋಕಸಭಾ ಚುನಾವಣೆಗೆ ಟಿಕೆಟ್ ಕೈತಪ್ಪುತ್ತೆ ಅನ್ನೋ ಆತಂಕದಲ್ಲಿ ಕಳೆದ 20 ದಿನಗಳಿಂದ ಅನಂತಕುಮಾರ್ ಹೆಗಡೆ ಆಕ್ಟಿವ್ ಆಗಿದ್ದಾರೆ. ಮತ್ತೆ ಕಣಕ್ಕಿಳಿಯುವ ಉದ್ದೇಶದಿಂದ ಮೊದಲು ಬೆಂಬಲಿಗರನ್ನು ತಮ್ಮತ್ತ ಸೆಳೆಯಲು ಹೀಗೆ ನಾಲಗೆ ಹರಿಬಿಟ್ಟಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ತಮ್ಮ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಕಸರತ್ತು ನಡೆಸ್ತಿದ್ದಾರೆ. ಪಕ್ಷದ ನಾಯಕರೇ ವಿರೋಧಿಸಿದ್ರೂ ತಮ್ಮ ಹೇಳಿಕೆಯನ್ನೂ ಸಮರ್ಥನೆ ಮಾಡಿಕೊಳ್ತಿದ್ದಾರೆ. ಇದೆಲ್ಲಾ ಏನೇ ಇದ್ರೂ ಅನಂತ ಕುಮಾರ್ ಹೆಗಡೆ ತಾವೊಬ್ಬ ಹಾಲಿ ಸಂಸದ ಅನ್ನೋದನ್ನ ಮರೆಯಬಾರದಿತ್ತು. ಸಿದ್ದರಾಮಯ್ಯ ತಮ್ಮ ವಿರೋಧಿ ಪಕ್ಷದಲ್ಲಿದ್ರೂ ಕೂಡ ಅವ್ರಿಗಿಂತ ಹಿರಿಯರಿದ್ದಾರೆ. ಎಲ್ಲದಕ್ಕಿಂತ ಮೇಲಾಗಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವ್ರ ಸ್ಥಾನಕ್ಕಾದರೂ ಬೆಲೆ ಕೊಟ್ಟು ಮಾತನಾಡಬೇಕಿತ್ತು. ಆದ್ರೆ ಬರೀ ಚುನಾವಣೆ ಮತ್ತು ಟಿಕೆಟ್​ನೇ ಗುರಿಯಾಗಿಸಿಕೊಂಡವರಿಂದ ಮತ್ತಿನ್ನೇನು ನಿರೀಕ್ಷಿಸಲು ಸಾಧ್ಯ ಹೇಳಿ.

Sulekha