ಅನಂತ್ ಅಂಬಾನಿ ಮದುವೆ ಮೊದಲೋ..? – ಸೀತಾರಾಮ ಕಲ್ಯಾಣವೇ ಮೊದಲೋ?
ಯಾರ ಮದ್ವೆ ಮೊದಲು ಫ್ಯಾನ್ಸ್ ಚಾಲೆಂಜ್

ಅನಂತ್ ಅಂಬಾನಿ ಮದುವೆ ಮೊದಲೋ..? – ಸೀತಾರಾಮ ಕಲ್ಯಾಣವೇ ಮೊದಲೋ?ಯಾರ ಮದ್ವೆ ಮೊದಲು ಫ್ಯಾನ್ಸ್ ಚಾಲೆಂಜ್

ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಮನೆಯಲ್ಲಿ 21 ನೇ ಶತಮಾನದ ಅತ್ಯಂತ ಅದ್ದೂರಿ ಮದುವೆ ನಡೀತಿದೆ. ಇತ್ತ ಸೀತಾ ರಾಮ ಸೀರಿಯಲ್ ನಲ್ಲೂ ಮದುವೆ ಸಂಭ್ರಮ ಜೋರಾಗಿದೆ. ಎರಡೂ ಮದುವೆ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದೆ. ವ್ಯತ್ಯಾಸ ಏನಂದ್ರೆ, ಅಂಬಾನಿ ಕುಟುಂಬದ ಮದುವೆ ರಿಯಲ್.. ಸೀತಾ ರಾಮ ಕಲ್ಯಾಣ ರೀಲ್. ಸೀತಾ ರಾಮ ಕಲ್ಯಾಣ ರೀಲ್ ಆದ್ರೂ ಈ ಮದುವೆ ಅಂಬಾನಿ ಕುಟುಂಬದ ಮದುವೆಗೆ ಪೈಪೋಟಿ ನೀಡುವಂತೆಯೇ ತೋರಿಸಲಾಗುತ್ತಿದೆ.

ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಸೇಡು ತೀರಿಸಿಕೊಂಡ ಗಿಲ್ – 134 ರನ್‌ಗಳಿಗೆ ಜಿಂಬಾಬ್ವೆ ಆಲೌಟ್‌

ಸಿನಿಮಾ ಆಗ್ಲಿ ಸೀರಿಯಲ್ ಆಗ್ಲಿ, ಇದು ಕಾಲ್ಪನಿಕ ಆದ್ರೂ ಎಲ್ಲವನ್ನೂ ರಿಯಲ್ ಆಗಿ ತೋರಿಸಲಾಗುತ್ತೆ. ನಿಜ ಜೀವನದಲ್ಲಿ ಏನು ನಡೆಯುತ್ತೋ ಅದನ್ನೇ ಬಹುತೇಕ ಸೀರಿಯಲ್ ಸಿನಿಮಾದಲ್ಲೂ ತೋರಿಸಲಾಗುತ್ತೆ. ಪಾತ್ರಧಾರಿಗಳನ್ನೆಲ್ಲಾ, ಕುಟುಂಬಸ್ಥರು, ಸಂಬಂಧಿಕರಂತೆ ತೋರಿಸಲಾಗುತ್ತೆ. ಅಷ್ಟೇ ಅಲ್ಲದೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸೀರಿಯಲ್ ಟೀಂ ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಹೀಗಾಗಿಯೇ ಸೀತಾ ಮತ್ತು ರಾಮ್ ಮದುವೆ ಸಂಭ್ರಮವನ್ನ ಅದ್ದೂರಿಯಾಗಿ ತೋರಿಸಲಾಗುತ್ತಿದೆ.  ಸೀರಿಯಲ್ಗಳ ಮದುವೆ ಎಂದರೆ ಅದು ಒಂದೆರಡು ದಿನಗಳ ಮದ್ವೆಯಲ್ಲ. ಒಂದು ಮದುವೆಯ ಸೀನ್ ಅನ್ನ ತಿಂಗಳಾನುಗಟ್ಟಲೇ ತೋರಿಸಿದ್ರೂ ಅಚ್ಚರಿಯಿಲ್ಲ. ಇದೀಗ ನಿಜ ಜೀವನದಲ್ಲಿಯೂ ಸೆಲೆಬ್ರಿಟಿ ಮದುವೆ ಸಮಾರಂಭ ತಿಂಗಳುಗಳ ಕಾಲ ನಡೆಯುತ್ತಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ. ಹೌದು, ಕಳೆದ ಕೆಲವು ತಿಂಗಳಿನಿಂದ ಅನಂತ್ ಅಂಬಾನಿ ಹಾಗೂ ರಾಧಿಕಾ ಅವರ ವಿವಾಹ ಸಮಾರಂಭದ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿವೆ.

ಇದೀಗ ಸೀತಾ ರಾಮ ವಿವಾಹ ಹಾಗೂ ಅಂಬಾನಿ ಕುಟುಂಬದ ಮದುವೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಸೀತಾರಾಮ ರೀಲ್ ಮದ್ವೆಗೂ ಭರ್ಜರಿ ಸೆಟ್ ಹಾಕಲಾಗಿದ್ದು, ಭರ್ಜರಿ ಖರ್ಚನ್ನೂ ಮಾಡಲಾಗಿದೆ. ಈ ಎರಡೂ ಮದುವೆಗಳಲ್ಲಿ ಮದುವೆ ಶಾಸ್ತ್ರದಿಂದ ಹಿಡಿದು ಮದುವೆ ಅಂತಿಮವಾಗಿ ಮುಗಿಯುವವರೆಗೆ ಹಲವಾರು ಸಂಪ್ರದಾಯಗಳನ್ನು ತೋರಿಸಲಾಗುತ್ತಿದೆ. ಇದೇ ಕಾರಣಕ್ಕೆ ತಮಾಷೆಯ ಬೆಟ್ಟಿಂಗ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದ್ದು, ರೀಲ್ ಅಥವಾ ರಿಯಲ್ ಯಾರ ಮದುವೆ ಮೊದಲು ಮುಗಿಯುತ್ತದೆ ಎಂದು ಪ್ರಶ್ನೆ ಮಾಡಲಾಗಿದೆ.

ಕೆಲವರು ಹೇಳುವುದು ಕಷ್ಟ ಎಂದರೆ, ಇನ್ನು ಕೆಲವರು ರಿಯಲ್ ಮದ್ವೆ ಮುಗಿದರೂ ರೀಲ್ ಮದ್ವೆ ಮುಗಿಯುವ ಹಾಗೆ ಕಾಣಿಸ್ತಿಲ್ಲ ಎನ್ನುತ್ತಿದ್ದಾರೆ. ಮತ್ತೊಬ್ಬರು ಸಹಸ್ರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿರುವ ಅಂಬಾನಿ ಮದ್ವೆಗಿಂತ ಮೊದ್ಲೇ ಸೀತಾರಾಮರ ಮದ್ವೆ ಮುಗಿಯಬಹುದು ಎನ್ನುತ್ತಿದ್ದಾರೆ. ಏನಾದರೂ ಮಾಡಿ, ಆಷಾಢ ಬರ್ತಿದೆ. ಮದ್ವೆ ಬೇಗ ಮುಗಿಸಿ ಎನ್ನುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು. ಇದೀಗ ಸೀತಾ ರಾಮ ಸೀರಿಯಲ್ನಲ್ಲಿ ಮದುವೆಯ ಅಂಗವಾಗಿ ಹಾಸ್ಯಭರಿತ ಕಾರ್ಯಕ್ರಮ ಶುರುವಾಗಿದೆ. ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುತ್ತಿದ್ದಾರೆ. ಒಬ್ಬರ ಆ್ಯಕ್ಟಿಂಗ್ ಒಬ್ಬರು ಮಾಡುತ್ತಿದ್ದಾರೆ. ತಾತಾ ಕೂಡ ಭರ್ಜರಿಯಾಗಿ ಇದರಲ್ಲಿ ಶಾಮೀಲಾಗಿದ್ದು, ಸೀತಾರಾಮ ಸೀರಿಯಲ್‌ನಲ್ಲಿ ಮದುವೆ ಕಳೆಗಟ್ಟಿದೆ.

ಇನ್ನು ಅಂಬಾನಿ ಕುಟುಂಬದ ಮದುವೆಯಲ್ಲೂ ಕೂಡ ಭರ್ಜರಿ ಕಾರ್ಯಕ್ರಮಗಳು ನಡೆಯುತ್ತಿವೆ. ಅದರೊಟ್ಟಿಗೆ ಶಾಸ್ತ್ರಗಳನ್ನು ನೆರವೇರಿಸಲಾಗುತ್ತಿದೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಭಾಗಿಯಾಗುತ್ತಿದ್ದಾರೆ. ಕ್ರಿಕೆಟರ್ಸ್, ಬಾಲಿವುಡ್ ಸ್ಟಾರ್ಸ್ ಭಾಗಿಯಾಗುತ್ತಿದ್ದಾರೆ. ಇವರ ಮದುವೆ ಒಳ್ಳೆಯ ರೀತಿಯಲ್ಲಿ ಮುಗಿಯಲಿ ಎನ್ನುವುದು ಎಲ್ಲರ  ಹಾರೈಕೆ. ಒಟ್ಟಿನಲ್ಲಿ ಅಂಬಾನಿ ಕುಟುಂಬದ ಮದುವೆ ಹಾಗೂ ಈ ಸೀರಿಯಲ್ ಮದುವೆ  ಕುತೂಹಲ ಮೂಡಿಸಿದೆ.

Shwetha M